ನವದೆಹಲಿ: ಬಿಜೆಪಿ ಸಹಜವಾಗಿಯೇ ಕಾನ್ಸರ್ವೇಟಿವ್ ಪಕ್ಷದ ಸ್ನೇಹಿತ. ಈಗ ಮತ್ತೆ ಎರಡು ದೇಶಗಳ ನಡುವೆ ಸ್ನೇಹವನ್ನು ನಿರ್ಮಾಣ ಮಾಡುವ ಅವಶ್ಯಕತೆ ಇಲ್ಲ ಎಂದು ಬ್ರಿಟನ್ ಎಂಪಿ ಬೊಬ್ ಬ್ಲಾಕ್ಮ್ಯಾನ್ ತಿಳಿಸಿದ್ದಾರೆ. ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬ್ಲಾಕ್ಮ್ಯಾನ್, ಜಗತ್ತಿನ ಪ್ರಮುಖ ಆರ್ಥಿಕತೆಯ ಹಾದಿಗೆ ಭಾರತದ ಆರ್ಥಿಕತೆಯನ್ನು ಪ್ರಧಾನಿ ಮೋದಿ ತಂದಿದ್ದಾರೆ. ನಾನು ಅಂದು ಕೊಂಡಿರುವಂತೆ ಧೀರ್ಘಕಾಲದಿಂದ ನಾವು ಬಿಜೆಪಿ ಜೊತೆ ಸಂಬಂಧ ಹೊಂದಿದ್ದೇವೆ. ನನ್ನ ಪ್ರಕಾರ ಬಿಜೆಪಿ ಬ್ರಿಟನ್ನ ಕನ್ಸರ್ವೇಟಿವ್ ಪಕ್ಷದ ಸಹಜ ಸ್ನೇಹಿತ. ಇದು ಸ್ನೇಹವಾಗಿದ್ದು, ನಾನು ನಮ್ಮ ಮೌಲ್ಯಗಳನ್ನು ಬೆಂಬಲಿಸುತ್ತೇನೆ ಎಂದರು.
ಹ್ಯಾರೋ ಈಸ್ಟ್ನ ಪಾರ್ಲಿಮೆಂಟ್ನಲ್ಲಿ ಆಡಳಿತರೂಢ ಕಾನ್ಸರ್ವೇಟಿವ್ ಸದಸ್ಯರಾಗಿರುವ ಬ್ಲಾಕ್ಮ್ಯಾನ್, ಬ್ರಿಟನ್ ಮತ್ತು ಭಾರತದ ನಡುವೆ ನಡೆಯುತ್ತಿರುವ ಮುಕ್ತ ವ್ಯಾಪಾರ ಒಪ್ಪಂದದ ಸಂಭಾವ್ಯತೆಯ ಕುರಿತು ಮಾತನಾಡಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಭಾರತದ ಆರ್ಥಿಕತೆಯನ್ನು ಶಕ್ತಿಯುತಗೊಳಿಸಿದ್ದು, ಇದೀಗ ಅವರು ಭಾರತದ ಪ್ರಧಾನಿಯಾಗಿದ್ದಾರೆ. ಅವರು ಗಮನಾರ್ಹ ಉತ್ತಮ ಕಾರ್ಯವನ್ನು ಮಾಡಿದ್ದಾರೆ. ನಾವು ಈಗ ಏನು ಮಾಡಬೇಕು ಎಂದರೆ, ನಮ್ಮ ಸ್ನೇಹವನ್ನು ನಿರ್ಮಾಣ ಮಾಡಬೇಕಿದೆ ಎಂದರು.
2010ರ ಸಾಮಾನ್ಯ ಚುನಾವಣೆಯಿಂದ ಬ್ಲಾಕ್ಮ್ಯಾನ್ ಹಾರೊ ಈಸ್ಟ್ನ ಪಾರ್ಲಿಮೆಂಟ್ನ ಕಾನ್ಸರ್ವೇಟಿವ್ ಸದಸ್ಯರಾಗಿದ್ದಾರೆ. 2004ರಲ್ಲಿ ಜೂನ್ನಲ್ಲಿ ಜಿಎಲ್ಎಯ ಲೇಬರ್ ಲೀಡರ್ನಿಂದ ಹೊರ ಬಂದ ಬಳಿಕ ಇವರು, ನಾಲ್ಕು ವರ್ಷಗಳ ಕಾಲ ಬ್ರೆಂಟ್ ಮತ್ತು ಹ್ಯಾರೋಗೆ ಗ್ರೇಟರ್ ಲಂಡನ್ ಅಸೆಂಬ್ಲಿ ಸದಸ್ಯರಾಗಿದ್ದರು. ಬ್ರೆಂಟ್ನಲ್ಲಿ ಪ್ರೆಸ್ಟೊನ್ ಕೌನ್ಸಿಲರ್ ಆಗಿ 24 ವರ್ಷಗಳ ಕಾಲ ಇದ್ದರು. 1990ರಿಂದ 2010ರವರೆಗೆ ಬ್ರೆಂಟ್ ಕಾನ್ಸರ್ವೇಟಿವ್ನ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.