ರೋಮ್ (ಇಟಲಿ): ಸಾವಿನ ನಂತರ ಆಸ್ತಿಯನ್ನು ಮನೆಯವರಿಗೆ ಹಂಚುವುದು ಸಾಮಾನ್ಯ. ಆದರೆ ಇತ್ತೀಚೆಗೆ ಮರಣ ಹೊಂದಿದ ಇಟಲಿಯ ಪ್ರಧಾನಿ ತಮ್ಮ 33 ವರ್ಷದ ಗೆಳತಿಗೆ 900 ಕೋಟಿ ಮೌಲ್ಯದ ಆಸ್ತಿಯನ್ನು ಬರೆದಿದ್ದಾರೆ. ಅವರ ಮರಣದ ನಂತರ ಓದಲಾದ ವಿಲ್ನಲ್ಲಿ ಈ ಮಹಿತಿ ಬಹಿರಂಗವಾಗಿದೆ.
ಜೂನ್ 12 ರಂದು ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ನಿಧನರಾದರು. ಇಟಲಿಯ ಮೂರು ಬಾರಿ ಪ್ರಧಾನಿಯಾಗಿದ್ದ ಬರ್ಲುಸ್ಕೋನಿ ಅವರು 100 ಮಿಲಿಯನ್ ಯುರೋಗಳಷ್ಟು ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ. ಇದರಲ್ಲಿ ಸುಮಾರು 906.29 ಕೋಟಿ ರೂ.ಗಳನ್ನು ಇಟಲಿಯ ಡೆಪ್ಯೂಟಿ ಆಗಿರುವ ಮಾರ್ಟಾ ಫಾಸಿನಾ ಅವರಿಗೆ ನೀಡಿದ್ದಾರೆ.
ಬೆರ್ಲುಸ್ಕೋನಿಯ ಅವರ ಆಸ್ತಿ 6 ಬಿಲಿಯನ್ ಯುರೋಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಫಾಸಿನಾ ಮತ್ತು ಬೆರ್ಲುಸ್ಕೋನಿ ನಡುವಿನ ಸಂಬಂಧವು ಮಾರ್ಚ್ 2020 ರಲ್ಲಿ ಪ್ರಾರಂಭವಾಯಿತು. ಇಬ್ಬರೂ ಅವಿವಾಹಿತರಾಗಿದ್ದರೂ, ಮಾಜಿ ಇಟಾಲಿಯನ್ ಪ್ರಧಾನಿ ಅವರು ಮರಣಶಯ್ಯೆಯಲ್ಲಿದ್ದಾಗ ಫಾಸಿನಾ ಅವರನ್ನು ಅವರ "ಪತ್ನಿ" ಎಂದು ಉಲ್ಲೇಖಿಸಿದ್ದರು. 33 ವರ್ಷ ವಯಸ್ಸಿನ ಫಾಸಿನಾ 2018 ರ ಚುನಾವಣೆಯಿಂದ ಇಟಾಲಿಯನ್ ಸಂಸತ್ತಿನ ಚೇಂಬರ್ ಆಫ್ ಡೆಪ್ಯೂಟೀಸ್ ಸದಸ್ಯೆಯಾಗಿದ್ದರು.
ಬರ್ಲುಸ್ಕೋನಿ 1965 ರಲ್ಲಿ ಕಾರ್ಲಾ ಡಾಲ್'ಒಗ್ಲಿಯೊ ಅವರನ್ನು ವಿವಾಹವಾದರು. ಕಾರ್ಲಾಗೆ ಮರೀನಾ, ಪಿಯರ್ಸಿಲ್ವಿಯೊ ಎಂಬ ಮಕ್ಕಳಿದ್ದಾರೆ. 1990ರಲ್ಲಿ ವೆರೋನಿಕಾ ಲ್ಯಾರಿಯೊ ಅವರೊಂದಿಗೆ ಎರಡನೇ ಮದುವೆ ನಡೆಯಿತು. ವೆರೋನಿಕಾ ಲ್ಯಾರಿಯೊಗೆ ಬಾರ್ಬರಾ, ಎಲಿಯೊನೊರಾ ಮತ್ತು ಲುಯಿಗಿ ಎಂಬ ಮೂವರು ಮಕ್ಕಳಿದ್ದಾರೆ.
1994 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ ಬೆರ್ಲುಸ್ಕೋನಿ, ಫೋರ್ಜಾ ಇಟಾಲಿಯಾ ಎಂಬ ಸೆಂಟರ್ ರೈಟ್ ಲಿಬರಲ್ ಕನ್ಸರ್ವೇಟಿವ್ ಪಕ್ಷವನ್ನು ಸ್ಥಾಪಿಸಿದ್ದರು. ಮಾರ್ಟಾ ಫಾಸಿನಾ ಫೋರ್ಜಾ ಇಟಾಲಿಯಾ ಸದಸ್ಯೆಯಾಗಿದ್ದರು. ಬೆರುಸ್ಕೋನಿಯ ಅವರ ವ್ಯಾಪಾರ ವ್ಯವಹಾರಗಳನ್ನು ಇಬ್ಬರು ಮಕ್ಕಳಾದ ಮರೀನಾ ಮತ್ತು ಪಿಯರ್ ಸಿಲ್ವಿಯೊ ನೋಡಿಕೊಳ್ಳುತ್ತಿದ್ದರು. ಅವರು ಬೆರುಸ್ಕೋನಿಯ ಮರಣಕ್ಕೂ ಮುನ್ನವೇ ಸಂಸ್ಥೆಯ ಕಾರ್ಯನಿರ್ವಾಹಕರಾಗಿದ್ದರು. ಇವರಿಬ್ಬರು ಫಿನ್‌ಇನ್‌ವೆಸ್ಟ್ ಕುಟುಂಬದ ಹಿಡುವಳಿಯಲ್ಲಿ 53 ಪ್ರತಿಶತ ಪಾಲನ್ನು ಹೊಂದಿರುತ್ತಾರೆ.