ಇಸ್ಲಾಮಾಬಾದ್: SCO (ಶಾಂಘೈ ಸಹಕಾರ ಸಂಘಟನೆ) ಶೃಂಗಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭಾಗವಹಿಸುತ್ತಾರೆಂದು ಪರಿಗಣಿಸಲಾಗಿತ್ತು. ಆದರೆ, ಭಾರತ ದೇಶವು ವರ್ಚುಯಲ್ ರೂಪದ ಸಭೆಯನ್ನು ಘೋಷಿಸಿದೆ ಎಂದು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದರು.
ಇಸ್ಲಾಮಾಬಾದ್‌ನ ಇನ್‌ಸ್ಟಿಟ್ಯೂಟ್ ಆಫ್ ಸ್ಟ್ರಾಟೆಜಿಕ್ ಸ್ಟಡೀಸ್ (ISSI) 50 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು. "SCO-CFM ನಲ್ಲಿ ಭಾಗವಹಿಸಲು ನನಗೆ ಈ ವರ್ಷ ಗೋವಾಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿತು. SCO ರಾಷ್ಟ್ರಗಳ ಮುಖ್ಯಸ್ಥರ (HOS) ಸಭೆಯು ಭಾರತದಲ್ಲಿ ಶೀಘ್ರದಲ್ಲೇ ನಡೆಯಲಿದೆ. SCO ಶೃಂಗಸಭೆಯಲ್ಲಿ ಪ್ರಧಾನಿ ಭಾಗವಹಿಸುವ ವಿಧಾನವನ್ನು ಪಾಕಿಸ್ತಾನ ಪರಿಗಣಿಸುತ್ತಿದ್ದಂತೆ, ಭಾರತವು ಶೃಂಗಸಭೆಯನ್ನು ವರ್ಚುಯಲ್ ರೂಪದಲ್ಲಿ ನಡೆಸುವುದಾಗಿ ಘೋಷಿಸಿತು" ಎಂದು ಹೇಳಿದರು.
"ಎಸ್ಸಿಒ, ಯುನ್ ಸೇರಿದಂತೆ ಇತರ ಬಹುಪಕ್ಷೀಯ ಸಂಸ್ಥೆಗಳ ಮೂಲಕ ಭಾರತದೊಂದಿಗೆ ತೊಡಗಿಸಿಕೊಳ್ಳಲು ಪಾಕಿಸ್ತಾನ ಮುಂದಾಗಿದೆ. ಪರಸ್ಪರ ಗೌರವ, ಸಾರ್ವಭೌಮತೆ ಮತ್ತು ಸಮಾನತೆಯ ಆಧಾರದ ಮೇಲೆ ಭಾರತದೊಂದಿಗೆ ಸಹಕಾರ ಮತ್ತು ಉತ್ತಮ ನೆರೆಹೊರೆಯ ಸಂಬಂಧಗಳನ್ನು ಹೊಂದಲು ಪಾಕ್ ಬದ್ಧವಾಗಿದೆ" ಎಂದು ಅವರು ಇದೇ ವೇಳೆ ಪ್ರತಿಪಾದಿಸಿದ್ದಾರೆ.
SCO ದ ಪ್ರಸ್ತುತ ಅಧ್ಯಕ್ಷರಾಗಿರುವ ಭಾರತವು ತನ್ನ ಸಾಮರ್ಥ್ಯದಲ್ಲಿ ಶೃಂಗಸಭೆ ಆಯೋಜಿಸುತ್ತಿದೆ. ಜುಲೈ 4 ರಂದು ವರ್ಚುಯಲ್ ಮೂಲಕ ಶಾಂಘೈ ಸಹಕಾರ ಸಂಘಟನೆಯ ವಾರ್ಷಿಕ ಶೃಂಗಸಭೆಯನ್ನು ನಡೆಸುವ ನಿರ್ಧಾರವನ್ನು ಭಾರತವು ಈ ತಿಂಗಳ ಆರಂಭದಲ್ಲಿ ಪ್ರಕಟಿಸಿತ್ತು. ಈ ವರ್ಷದ ಮೇ ತಿಂಗಳಲ್ಲಿ ಗೋವಾದಲ್ಲಿ ನಡೆದ ಎರಡು ದಿನಗಳ ಸಮಾವೇಶ ನಡೆದಿದ್ದು, ವಿದೇಶಾಂಗ ಮಂತ್ರಿಗಳಿಗೆ ಆತಿಥ್ಯ ವಹಿಸಿತ್ತು. ಜೊತೆಗೆ, ಶಾಂಘೈ ಸಹಕಾರ ಸಂಸ್ಥೆ ಸದಸ್ಯ ರಾಷ್ಟ್ರಗಳಾದ ಚೀನಾ, ರಷ್ಯಾ, ಕಿರ್ಗಿಸ್ತಾನ್, ಕಜಕಿಸ್ತಾನ್, ಪಾಕಿಸ್ತಾನ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಶೃಂಗಸಭೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗಿತ್ತು.