ವಾಷಿಂಗ್ಟನ್( ಅಮೆರಿಕ): ಅಧ್ಯಕ್ಷ ಜೋ ಬೈಡನ್ ಇಂಡೋ ಫೆಸಿಪಿಕ್ ನೀತಿಯನ್ನು ಘೋಷಣೆ ಮಾಡಿದ್ದು, ಅದಕ್ಕಾಗಿ ಸುಮಾರು 1.8 ಬಿಲಿಯನ್ ಅನುದಾನ ಘೋಷಿಸಿದ್ದಾರೆ. ಅಷ್ಟೇ ಅಲ್ಲ ಚೀನಾವನ್ನು ಎದುರಿಸಲು ಸುಮಾರು 400 ಮಿಲಿಯನ್ ಡಾಲರ್ ಅನುದಾನವನ್ನು ಘೋಷಿಸಿದ್ದಾರೆ. 2023ನೇ ಸಾಲಿನ ಬಜೆಟ್ ಮಂಡಿಸಿರುವ ಬೈಡನ್ ರಕ್ಷಣೆಗೆ ಸುಮಾರು 773 ಶತಕೋಟಿ ಡಾಲರ್ ತೆಗೆದಿರಿಸಿದ್ದಾರೆ.
ಇಂಡೋ - ಪೆಸಿಫಿಕ್ ಸಾಗರ ಭಾಗದಲ್ಲಿ ಹೊಸ ರಾಜತಾಂತ್ರಿಕತೆ, ರಕ್ಷಣೆ ಮತ್ತು ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನ ಮತ್ತು ಪೂರೈಕೆಗೆ ಆದ್ಯತೆ ನೀಡಲಾಗಿದ್ದು, ಈ ಭಾಗದಲ್ಲಿ ಚೀನಾ ಪ್ರಾಬಲ್ಯಕ್ಕೆ ಬ್ರೇಕ್ ಹಾಕಲು ಅಲ್ಲಿನ ಸಾರ್ವಭೌಮ್ಯತೆ ಕಾಪಾಡಲು ಹಾಗೂ ಹವಾಮಾನ ಮತ್ತು ಜಾಗತಿಕ ಆರೋಗ್ಯ ಉಪಕ್ರಮಗಳು ಸೇರಿದಂತೆ ದೀರ್ಘಾವಧಿಯ ಯೋಜನೆ ಘೋಷಣೆ ಮಾಡಿದ್ದಾರೆ. ಮಿತ್ರರಾಷ್ಟ್ರಗಳು ಮತ್ತು ಪಾಲುದಾರರೊಂದಿಗೆ ಅಮೆರಿಕ ತನ್ನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಲಾಗಿದೆ ಎಂದು ಬೈಡನ್ ಹೇಳಿದರು.