ವಾಷಿಂಗ್ಟನ್: ಭಾರತೀಯ-ಅಮೆರಿಕನ್ ವಕೀಲ ಹಾಗೂ ರಾಜತಾಂತ್ರಿಕ ರಿಚರ್ಡ್ ವರ್ಮಾ ಅವರನ್ನು ಸಂಪನ್ಮೂಲ ಮತ್ತು ನಿರ್ವಹಣೆಯ ರಾಜ್ಯ ಉಪ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಆದೇಶ ಹೊರಡಿಸಿದ್ದಾರೆ.
ಜನವರಿ 16, 2015 ರಿಂದ ಜನವರಿ 20, 2017 ರವರೆಗೆ ಭಾರತದಲ್ಲಿ ಮಾಜಿ ಯುಎಸ್ ರಾಯಭಾರಿಯಾಗಿ ಸೇವೆ ಸಲ್ಲಿಸಿದ 54 ವರ್ಷದ ವರ್ಮಾ ಅವರು ಪ್ರಸ್ತುತ ಮಾಸ್ಟರ್‌ಕಾರ್ಡ್‌ನಲ್ಲಿ ಮುಖ್ಯ ಕಾನೂನು ಅಧಿಕಾರಿ ಮತ್ತು ಜಾಗತಿಕ ಸಾರ್ವಜನಿಕ ನೀತಿಯ ಮುಖ್ಯಸ್ಥರಾಗಿದ್ದಾರೆ. ಒಬಾಮಾ ಆಡಳಿತದ ಅವಧಿಯಲ್ಲಿ ಶಾಸಕಾಂಗ ವ್ಯವಹಾರಗಳ ಸಹಾಯಕ ಕಾರ್ಯದರ್ಶಿಯಾಗಿಯೂ ಕೂಡ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ವೃತ್ತಿಜೀವನದ ಆರಂಭದಲ್ಲಿ ಯುನೈಟೆಡ್ ಸ್ಟೇಟ್ಸ್ ಸೆನೆಟರ್ ಹ್ಯಾರಿ ರೀಡ್‌ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದರು.