ಕರ್ನಾಟಕ

karnataka

ETV Bharat / international

3 ಭಾರತೀಯ-ಅಮೆರಿಕನ್ ಮಕ್ಕಳನ್ನು ಆರಿಸಿ ಬೈಡನ್ ದೀಪಾವಳಿಗೆ ಆಮಂತ್ರಿಸಿದ್ದೇಕೆ ಗೊತ್ತೇ?

ತಮ್ಮ ಪೋಷಕರ ವೀಸಾ ಅವಧಿಯನ್ನು ಮೀರಿದ ಅಥವಾ ಕಾನೂನಾತ್ಮಕ ಮಾನ್ಯತೆ ಮುಗಿದ ಮತ್ತು ಗಡಿಪಾರಾಗುವ ಆತಂಕದಲ್ಲಿರುವ ಮಕ್ಕಳನ್ನು DALCA ಮಕ್ಕಳು ಎಂದು ಕರೆಯಲಾಗುತ್ತದೆ. ಅಮೆರಿಕದಲ್ಲಿ ಇಂಥ ಸುಮಾರು 2 ಲಕ್ಷ ಮಕ್ಕಳಿದ್ದು, ಅದರಲ್ಲಿ ಭಾರತೀಯ ಅಮೆರಿಕನ್ ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ.

ಗಡಿಪಾರು ಎದುರಿಸುತ್ತಿರುವ 3 ಭಾರತೀಯ ಅಮೆರಿಕನ್ ಮಕ್ಕಳಿಗೆ ಬೈಡನ್ ದೀಪಾವಳಿ ಆಮಂತ್ರಣ
In Inviting 3 Indian Americans To Diwali Party Biden Sends A Key Message

By

Published : Oct 26, 2022, 5:44 PM IST

ವಾಶಿಂಗ್ಟನ್: ಅಮೆರಿಕದಿಂದ ಗಡಿಪಾರಾಗುವ ಭೀತಿಯಲ್ಲಿರುವ, ಡೆಫರ್ಡ್ ಆ್ಯಕ್ಷನ್ ಲೀಗಲ್ ಚೈಲ್ಡಹುಡ್ ಅರೈವಲ್ಸ್​ (Deferred Action Legal Childhood Arrivals -DALCA) ಮಕ್ಕಳ ಬೆಂಬಲಕ್ಕೆ ನಿಂತಿರುವ ಅಧ್ಯಕ್ಷ ಜೋ ಬೈಡನ್, ತಮ್ಮ ದೀಪಾವಳಿ ಹಬ್ಬದ ಸಂಭ್ರಮಾಚರಣೆಗೆ ಮೂವರು ಭಾರತೀಯ-ಅಮೆರಿಕನ್ ಬಾಲಕಿಯರಿಗೆ ಆಮಂತ್ರಣ ನೀಡಿದ್ದಾರೆ.

ಬೈಡನ್ ಅವರ ಆಮಂತ್ರಣಕ್ಕಾಗಿ ತಾವು ಧನ್ಯವಾದ ಹೇಳುತ್ತೇವೆ. ಶ್ವೇತಭವನದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾಗಲು ಸಂತೋಷಿಸುತ್ತೇವೆ ಆಮಂತ್ರಣ ಪಡೆದ ಮೂವರು ಯುವ ಭಾರತೀಯ ಅಮೆರಿಕನ್ನರು ಹೇಳಿದರು.

ತಮ್ಮ ಪೋಷಕರ ವೀಸಾ ಅವಧಿಯನ್ನು ಮೀರಿದ ಅಥವಾ ಕಾನೂನಾತ್ಮಕ ಮಾನ್ಯತೆ ಮುಗಿದ ಮತ್ತು ಗಡಿಪಾರಾಗುವ ಆತಂಕದಲ್ಲಿರುವ ಮಕ್ಕಳನ್ನು DALCA ಮಕ್ಕಳು ಎಂದು ಕರೆಯಲಾಗುತ್ತದೆ. ಅಮೆರಿಕದಲ್ಲಿ ಇಂಥ ಸುಮಾರು 2 ಲಕ್ಷ ಮಕ್ಕಳಿದ್ದು, ಅದರಲ್ಲಿ ಭಾರತೀಯ ಅಮೆರಿಕನ್ ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ.

ಅಮೆರಿಕದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರೊಂದಿಗೆ ದೀಪಾವಳಿ ಆಚರಿಸುತ್ತಿರುವುದಕ್ಕೆ ನಮಗೆ ಗೌರವ ಎನಿಸುತ್ತಿದೆ. ದೀರ್ಘಾವಧಿಯ ವೀಸಾ ಹೊಂದಿರುವ ಎಲ್ಲಾ ಮಕ್ಕಳ ವಾಸದ ಮಾನ್ಯತಾ ಅವಧಿ ಕೊನೆಗೊಳ್ಳುವ ಪರಿಹಾರದ ಮೂಲಕ ವರ್ಷದ ಅಂತ್ಯದ ವೇಳೆಗೆ ನಮಗೆಲ್ಲರಿಗೂ ಬೆಳಕು ಕಾಣಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಡಿಪ್ ಪಟೇಲ್ ಹೇಳಿದರು.

ಪಟೇಲ್ ಅವರು 'ಇಂಪ್ರೂವ್ ದಿ ಡ್ರೀಮ್' ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ. ಇದು ದೀರ್ಘಾವಧಿಯ ವೀಸಾ ಹೊಂದಿರುವವರ ಮಕ್ಕಳ ಅವಲಂಬಿತರಾಗಿ ಅಮೆರಿಕದಲ್ಲಿ ಬೆಳೆದ ಮಕ್ಕಳ ಪರವಾಗಿ ಹೋರಾಡುತ್ತಿದೆ.

ಇದನ್ನೂ ಓದಿ: ಶ್ವೇತಭವನದಲ್ಲಿ ದೀಪಾವಳಿ ಹಬ್ಬ ಆಚರಿಸಿದ ಜೋ ಬೈಡನ್.. ಕಮಲಾ ಹ್ಯಾರಿಸ್​​

ABOUT THE AUTHOR

...view details