ಗ್ವಾನಾಜುವಾಟೊ(ಮೆಕ್ಸಿಕೋ): ನಗರದ ಬಾರ್‌ವೊಂದರಲ್ಲಿ ದರೋಡೆಕೋರರು ಗುಂಡಿನ ದಾಳಿ ನಡೆಸಿದ್ದಾರೆ. ಬುಧವಾರ ರಾತ್ರಿ ನುಗ್ಗಿದ ಬಂದೂಕುಧಾರಿಗಳು ಮನಬಂದಂತೆ ಗುಂಡು ಹಾರಿಸಿ ವೇಟರ್‌ಗಳು ಸೇರಿದಂತೆ ಒಟ್ಟು 9 ಜನರನ್ನು ಬಲಿ ಪಡೆದಿದ್ದಾರೆ. ಸಾವನ್ನಪ್ಪಿದವರಲ್ಲಿ ನಾಲ್ವರು ಮಹಿಳೆಯರು ಸೇರಿದ್ದಾರೆ.
ಮೆಕ್ಸಿಕೋ ಬಾರ್‌ನಲ್ಲಿ ಗುಂಡಿನ ದಾಳಿ: ವೇಟರ್‌ಗಳು ಸೇರಿ 9 ಮಂದಿ ಬಲಿ - ಬಂದೂಕುಧಾರಿಗಳು ಬಾರ್‌ಗೆ ನುಗ್ಗಿ ಗುಂಡಿನ ದಾಳಿ
ಮೆಕ್ಸಿಕೋದಲ್ಲಿ ಗುಂಡಿನ ದಾಳಿ ಸಂಚಲನ ಮೂಡಿಸಿದೆ. ಗ್ವಾನಾಜುವಾಟೊ ರಾಜ್ಯದ ಬಾರ್‌ವೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ 9 ಜನರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಬಾರ್‌ನಲ್ಲಿ ಗುಂಡಿನ ದಾಳಿ
ಘಟನೆಯ ಬಳಿಕ ಬಾರ್‌ನಲ್ಲಿ ರಕ್ತದಲ್ಲಿ ಬರೆದ ಕೆಲವು ಪೋಸ್ಟರ್‌ಗಳು ಪತ್ತೆಯಾಗಿವೆ. ಸಾಂಟಾ ರೋಸಾ ಡಿ ಲಿಮಾ ಗ್ಯಾಂಗ್ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಎರಡು ಸ್ಥಳೀಯ ಡ್ರಗ್ ಗ್ಯಾಂಗ್‌ಗಳ ನಡುವಿನ ಘರ್ಷಣೆಯೇ ಇದಕ್ಕೆ ಕಾರಣವೆನ್ನಲಾಗುತ್ತಿದೆ.
ಇದನ್ನೂ ಓದಿ:ಪಂಜಾಬ್ನಲ್ಲಿ ಹಿಂದೂ ಮುಖಂಡರಿಗೆ ಬುಲೆಟ್ಪ್ರೂಫ್ ಜಾಕೆಟ್ ನೀಡಿದ ಪೊಲೀಸರು