ಕರ್ನಾಟಕ

karnataka

ETV Bharat / international

ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಶೇಖ್ ಹಸೀನಾ ಬುಧವಾರ ಪ್ರಮಾಣವಚನ

ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಶೇಖ್ ಹಸೀನಾ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

bangladeshs-prime-minister-sheikh-hasina-will-be-sworn-in
bangladeshs-prime-minister-sheikh-hasina-will-be-sworn-in

By ETV Bharat Karnataka Team

Published : Jan 9, 2024, 4:39 PM IST

ಢಾಕಾ : ಬಾಂಗ್ಲಾದೇಶದ ಸಂಸತ್ತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರು ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸರಕಾರದ ಉನ್ನತ ಅಧಿಕಾರಿಯೊಬ್ಬರು ಮಂಗಳವಾರ ದೃಢಪಡಿಸಿದ್ದಾರೆ. ಬುಧವಾರ ಬೆಳಗ್ಗೆ 10 ಗಂಟೆಗೆ ರಾಜಧಾನಿ ಢಾಕಾದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಅವರು, ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ಸಂಸದರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಸಂಸತ್ ಸಚಿವಾಲಯದ ಹಿರಿಯ ಕಾರ್ಯದರ್ಶಿ ಕೆ.ಎಂ. ಅಬ್ದುಸ್ ಸಲಾಂ ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಚುನಾವಣಾ ಫಲಿತಾಂಶಗಳನ್ನು ಮಂಗಳವಾರ ಗೆಜೆಟ್ ರೂಪದಲ್ಲಿ ಪ್ರಕಟಿಸಲಾಗುವುದು ಎಂದು ಹಿರಿಯ ಕಾರ್ಯದರ್ಶಿ ತಿಳಿಸಿದ್ದಾರೆ. ಚುನಾವಣಾ ಆಯೋಗದ ಪ್ರಕಾರ, ಹಸೀನಾ ನೇತೃತ್ವದ ಆಡಳಿತಾರೂಢ ಅವಾಮಿ ಲೀಗ್ (ಎಎಲ್) ಪಕ್ಷವು ಭಾನುವಾರ ನಡೆದ ಚುನಾವಣೆಯಲ್ಲಿ 298 ಸ್ಥಾನಗಳಲ್ಲಿ 223 ಸ್ಥಾನಗಳನ್ನು ಗೆದ್ದಿದೆ. ಇದು ಸತತವಾಗಿ ನಾಲ್ಕನೇ ಬಾರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಮತ್ತೊಮ್ಮೆ ಸರ್ಕಾರ ರಚಿಸಲು ಹಸೀನಾ ಸನ್ನದ್ದವಾಗಿದ್ದಾರೆ . 1996-2001 ರ ಅವಧಿಯಲ್ಲೂ ಅವಾಮಿ ಲೀಗ್ ದೇಶದಲ್ಲಿ ಆಡಳಿತ ನಡೆಸಿತ್ತು. ಶೇಖ್ ಹಸೀನಾ ಅಧಿಕೃತವಾಗಿ ಬಾಂಗ್ಲಾದೇಶದ ಇತಿಹಾಸದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ನಾಯಕಿಯಾಗಿ ಇದೀಗ ಹೊರ ಹೊಮ್ಮಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳು 61 ಸ್ಥಾನಗಳನ್ನು ಗೆದ್ದರೆ, ಜತಿಯಾ ಪಕ್ಷ 11 ಸ್ಥಾನಗಳನ್ನು ಮತ್ತು ಇತರ ಅವಾಮಿ ಲೀಗ್ ಮಿತ್ರಪಕ್ಷಗಳು ಎರಡು ಸ್ಥಾನಗಳನ್ನು ಗೆದ್ದಿವೆ. ಇದಲ್ಲದೇ, ಮತ್ತೊಂದು ರಾಜಕೀಯ ಗುಂಪು ಬಾಂಗ್ಲಾದೇಶ ಕಲ್ಯಾಣ್ ಪಾರ್ಟಿ ಒಂದು ಸ್ಥಾನ ಗಳಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಶೇ 41.8 ರಷ್ಟು ಮತದಾನವಾಗಿತ್ತು.

ಸಾಮೂಹಿಕ ಹಿಂಸಾಚಾರ ಮತ್ತು ಪ್ರತಿಪಕ್ಷ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ ಪಿ) ನಾಯಕರು ಮತ್ತು ಬೆಂಬಲಿಗರ ಬಂಧನಗಳ ಮಧ್ಯೆ ಚುನಾವಣೆ ನಡೆದಿತ್ತು. ಚುನಾವಣೆಯ ಸಮಯದಲ್ಲಿ ಸ್ವತಂತ್ರ ಉಸ್ತುವಾರಿ ಸರ್ಕಾರ ನೇಮಿಸಬೇಕು ಎಂಬ ಬೇಡಿಕೆಯನ್ನು ಅವಾಮಿ ಲೀಗ್ ಸರ್ಕಾರ ತಿರಸ್ಕರಿಸಿದ್ದರಿಂದ ಬಿಎನ್​ಪಿ ಚುನಾವಣೆ ಬಹಿಷ್ಕರಿಸಿತ್ತು. ವಿರೋಧ ಪಕ್ಷ ಜಾಡ್​ ಕೂಡ ಮತ ಚಲಾಯಿಸದಂತೆ ಜನರಿಗೆ ಕರೆ ನೀಡಿತ್ತು.

ಹ್ಯೂಮನ್ ರೈಟ್ಸ್ ವಾಚ್ (ಎಚ್ಆರ್​ಡಬ್ಲ್ಯೂ) ಪ್ರಕಾರ, ಅಕ್ಟೋಬರ್ 28, 2023 ರಂದು ಪ್ರತಿಪಕ್ಷಗಳ ರ‍್ಯಾಲಿ ಹಿಂಸಾತ್ಮಕವಾಗಿ ಮಾರ್ಪಟ್ಟ ನಂತರ ಸುಮಾರು 10,000 ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇದರ ಪರಿಣಾಮವಾಗಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಮತ್ತು 5,500 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಆಡಳಿತಾರೂಢ ಅವಾಮಿ ಲೀಗ್​ ರಾಜಕೀಯ ವಿರೋಧಿಗಳನ್ನು ಜೈಲಿಗಟ್ಟುತ್ತಿದೆ ಎಂದು ಆರೋಪಿಸಿದೆ. ಆದರೆ, ಅವಾಮಿ ಲೀಗ್ ಈ ಆರೋಪಗಳನ್ನು ನಿರಾಕರಿಸಿದೆ. (IANS)

ಇದನ್ನೂ ಓದಿ : ಲ್ಯಾಂಡರ್​ನಲ್ಲಿ ಇಂಧನ ನಷ್ಟ: ಅಮೆರಿಕದ ಚಂದ್ರಯಾನ ಯೋಜನೆಗೆ ಹಿನ್ನಡೆ

ABOUT THE AUTHOR

...view details