ಇಸ್ಲಾಮಾಬಾದ್:ಪಾಕ್ ಪ್ರಮುಖ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ನಾಯಕ ಶಾ ಮಹಮೂದ್ ಖುರೇಷಿ 2019ರಲ್ಲಿ ಭಾರತ ನಡೆಸಿದ್ದ ಬಾಲಾಕೋಟ್ ದಾಳಿಯನ್ನು ಅಲ್ಲಿನ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ. ಪುಲ್ವಾಮಾ ಆತ್ಮಾಹುತಿ ದಾಳಿಯ ನಂತರ ಭಾರತ ಬಾಲಾಕೋಟ್ ದಾಳಿ ಮಾಡಿತು. ಈ ವೇಳೆ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಅವರು ಭಾರತಕ್ಕೆ ತಕ್ಕ ಉತ್ತರ ನೀಡಿದರು ಎಂದರು.
ದಾಳಿಯ ಪಾಕ್ ಸೇನೆಗೆ ಸಿಕ್ಕಿಬಿದ್ದಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ರನ್ನು ಬಂಧಿಸಿತ್ತು. ಈ ವೇಳೆ ಅವರನ್ನು ಭಾರತಕ್ಕೆ ಮರಳಿ ಕಳುಹಿಸಿ ರಾಜತಾಂತ್ರಿಕತೆಯನ್ನು ಮೆರೆದರು. ಇದು ಇಡೀ ದೇಶವೇ ಮೆಚ್ಚಬೇಕಾದ ಸಂಗತಿ ಎಂದು ಇಮ್ರಾನ್ ಖಾನ್ ಕಾರ್ಯವನ್ನು ಹೊಗಳಿಸಿದರು.