ಕರ್ನಾಟಕ

karnataka

ETV Bharat / international

ಭಾರತದ ಅಕ್ಕಿ ರಫ್ತು ನಿಷೇಧದಿಂದ ಅಮೆರಿಕದಲ್ಲಿ ಎಫೆಕ್ಟ್​: 'ಕುಟುಂಬಕ್ಕೊಂದೇ ಅಕ್ಕಿ ಚೀಲ' - ಈಟಿವಿ ಭಾರತ ಕನ್ನಡ

ಭಾರತವು ಅಕ್ಕಿ ರಫ್ತಿನ ಮೇಲೆ ನಿಷೇಧ ವಿಧಿಸಿದ ನಂತರ ಇದರ ಪರಿಣಾಮ ಅಮೆರಿಕದಲ್ಲಿ ಕಾಣತೊಡಗಿದೆ. ಅಮೆರಿಕದ ಹಲವಾರು ಡಿಪಾರ್ಟಮೆಂಟಲ್ ಸ್ಟೋರ್​ಗಳಲ್ಲಿ ಭಾರತದ ಅಕ್ಕಿ ಸ್ಟಾಕ್ ಖಾಲಿಯಾಗಿದೆ.

'Only 1 rice bag per family':
'Only 1 rice bag per family':

By

Published : Jul 25, 2023, 8:02 PM IST

ನವದೆಹಲಿ : ಭಾರತವು ಬಾಸ್ಮತಿ ಹೊರತಾದ ಇನ್ನಿತರ ಯಾವುದೇ ಅಕ್ಕಿಯ ರಫ್ತು ನಿಷೇಧಿಸಿದ ನಂತರ, ಅಮೆರಿಕದ ಅನೇಕ ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳು ಗ್ರಾಹಕರು ಖರೀದಿಸಬಹುದಾದ ಅಕ್ಕಿ ಚೀಲಗಳ ಸಂಖ್ಯೆ ಮಿತಿಗೊಳಿಸುತ್ತಿವೆ. ಟ್ವಿಟರ್‌ನಲ್ಲಿ (ಈಗ ಎಕ್ಸ್) ಬಳಕೆದಾರರೊಬ್ಬರು ಅಮೆರಿಕದ ಅಂಗಡಿಯೊಂದರಲ್ಲಿ ಹಾಕಿರುವ ಬೋರ್ಡ್​ನ ಚಿತ್ರ ಹಂಚಿಕೊಂಡಿದ್ದಾರೆ. "ಒಂದು ಕುಟುಂಬಕ್ಕೆ ಕೇವಲ ಒಂದು ಅಕ್ಕಿ ಚೀಲ" ಎಂದು ಬೋರ್ಡ್​ನಲ್ಲಿ ಬರೆಯಲಾಗಿದೆ.

"ಅಕ್ಕಿ ಬೆಲೆ ಇಂದು ಹೆಚ್ಚಾಗಿದೆಯೇ ಎಂಬುದನ್ನು ನೋಡಲು ಅಂಗಡಿಗೆ ಹೋಗಿದೆ. ಆದರೆ, ಖರೀದಿಸಬಹುದಾದ ಅಕ್ಕಿಯ ಪ್ರಮಾಣದ ಮೇಲೆ ಮಿತಿ ಹೇರಿರುವುದನ್ನು ನೊಡಿ ಆಘಾತವಾಯಿತು. ತಕ್ಷಣವೇ ಧಾನ್ಯಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಿ. ಈಗ ಇತರ ದೇಶಗಳು ಸಹ ಅಕ್ಕಿ ರಫ್ತು ನಿಷೇಧಿಸಲು ನೋಡುತ್ತಿವೆ ಮತ್ತು ಅವು ಅಕ್ಕಿ ಸಂಗ್ರಹ ಮಾಡಿಕೊಳ್ಳುತ್ತಿವೆ" ಎಂದು ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.

ಹಲವಾರು ಎನ್‌ಆರ್‌ಐಗಳು (ಅನಿವಾಸಿ ಭಾರತೀಯರು) ಅಂಗಡಿಗಳಲ್ಲಿನ ಖಾಲಿ ಕಪಾಟಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಭಾರತವು ಅಕ್ಕಿ ರಫ್ತಿನ ಮೇಲೆ ನಿಷೇಧ ವಿಧಿಸಿದ ನಂತರ ಆತುರಾತುರವಾಗಿ ಗಾಬರಿಯಲ್ಲಿ ಹೆಚ್ಚಿನ ಪ್ರಮಾಣದ ಅಕ್ಕಿ ಖರೀದಿಯಾಗಿದ್ದರಿಂದ ಸ್ಟಾಕ್​ಗಳು ಖಾಲಿ ಯಾಗಿರಬಹುದು. "ಭಾರತದ ಅಕ್ಕಿ ರಫ್ತು ನಿಷೇಧದಿಂದ ಅಮೆರಿಕದಲ್ಲಿ ಪರಿಣಾಮ. ಅಕ್ಕಿ ಚೀಲಗಳು ಖಾಲಿಯಾಗಿವೆ. ಇಲ್ಲಿ ಎಲ್ಲ ಅಂಗಡಿಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಇದೆ" ಎಂದು ಮತ್ತೊಬ್ಬ ಗ್ರಾಹಕರು ಟ್ವೀಟ್ ಮಾಡಿದ್ದಾರೆ.

"ವಾಲ್‌ಮಾರ್ಟ್‌ನಲ್ಲಿ ಸಾಮಾನ್ಯವಾಗಿ ಯಾವಾಗಲೂ ಬಾಸ್ಮತಿ ಅಕ್ಕಿ ಸ್ಟಾಕ್ ಇರುತ್ತಿತ್ತು. ಆದರೆ, ಇಂದು ಕಪಾಟುಗಳು ಖಾಲಿಯಾಗಿವೆ. ಭಾರತವು ಅಕ್ಕಿ ರಫ್ತು ನಿಷೇಧ ಮಾಡಿದ್ದಕ್ಕೂ ಇದಕ್ಕೂ ಸಂಬಂಧ ವಿದೆಯಾ ಅಥವಾ ಇಲ್ಲವೇ ಎಂಬುದು ಗೊತ್ತಾಗುತ್ತಿಲ್ಲ" ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ. ಆನ್‌ಲೈನ್ ಮಾರ್ಕೆಟ್​ಗಳಲ್ಲಿ ಅಕ್ಕಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

"ಎಲ್ಲ ದೇಸಿ ಅಂಗಡಿಗಳಲ್ಲಿ ಭಾರತೀಯ ಅಕ್ಕಿ ಖಾಲಿಯಾಗಿದೆ. ಭಾರತವು ಬಾಸ್ಮತಿ ಅಲ್ಲದ ಅಕ್ಕಿ ರಫ್ತನ್ನು ನಿರ್ಬಂಧಿಸಿರುವ ಕಾರಣ ಪ್ರತಿ ಎನ್‌ಆರ್‌ಐ ಕುಟುಂಬವು 10 ರಿಂದ 15 ಚೀಲ ಅಕ್ಕಿ ಖರೀದಿಸಿದೆ. ಹೆಚ್ಚು ಶ್ರೀಮಂತ ಎನ್‌ಆರ್‌ಐಗಳು ಪ್ರತಿ ಕುಟುಂಬಕ್ಕೆ 100 ರಿಂದ 200 ಕೆಜಿ ಬಾಸ್ಮತಿ ಅಕ್ಕಿ ಸಂಗ್ರಹಿಸಿದ್ದಾರೆ. ಕೆಲವರು ಈಗ ಅದನ್ನು ಫೇಸ್‌ಬುಕ್ ಮಾರ್ಕೆಟ್​ ಪ್ಲೇಸ್​ನಲ್ಲಿ ಮಾರಾಟ ಮಾಡುತ್ತಿದ್ದಾರೆ" ಎಂದು ಒಬ್ಬ ಟ್ವಿಟರ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಕಳೆದ ವಾರ ದೇಶೀಯ ಮಾರುಕಟ್ಟೆಗಳಲ್ಲಿ ಅಕ್ಕಿ ಕೊರತೆಯಾಗದಂತೆ ನೋಡಿಕೊಳ್ಳಲು ಮತ್ತು ಬೆಲೆಗಳು ಏರದಂತೆ ತಡೆಯಲು ಕೇಂದ್ರವು ತಕ್ಷಣವೇ ಜಾರಿಗೆ ಬರುವಂತೆ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯ ರಫ್ತು ನಿಷೇಧಿಸಿದೆ. ಅಮೆರಿಕದ ಹಲವೆಡೆ ಸೂಪರ್‌ ಮಾರ್ಕೆಟ್‌ಗಳ ಹೊರಗೆ ಅಕ್ಕಿ ಖರೀದಿಸಲು ಜನರ ಉದ್ದನೆಯ ಸರತಿ ಸಾಲುಗಳು ಕಂಡು ಬಂದಿವೆ. ಜನರು ದೊಡ್ಡ ಪ್ರಮಾಣದಲ್ಲಿ ಅಕ್ಕಿ ಚೀಲಗಳನ್ನು ಸಂಗ್ರಹಿಸುತ್ತಿರುವುದು ಕಂಡು ಬಂದಿದೆ.

ಇದನ್ನೂ ಓದಿ : Share Market: ದಿನದಂತ್ಯಕ್ಕೆ Sensex 30 ಅಂಕ ಇಳಿಕೆ, Nifty 8 ಅಂಕ ಏರಿಕೆ

ABOUT THE AUTHOR

...view details