ಕರ್ನಾಟಕ

karnataka

ETV Bharat / international

ಕ್ಯಾಲಿಫೋರ್ನಿಯಾದಲ್ಲಿ ಮನೆ ಮೇಲೆ ಗುಂಡಿನ ದಾಳಿ: ತಾಯಿ, ಮಗು ಸೇರಿ 6 ಜನ ಸಾವು - ಮನೆಯ ಮೇಲೆ ದಾಳಿಕೋರರು ಗುಂಡು ಹಾರಿಸಿದ್ದು

ಮಧ್ಯ ಕ್ಯಾಲಿಫೋರ್ನಿಯಾದಲ್ಲಿ ಮನೆಯ ಮೇಲೆ ದಾಳಿಕೋರರು ಗುಂಡು ಹಾರಿಸಿದ್ದು ತಾಯಿ, ಮಗು ಸಾವನ್ನಪ್ಪಿದೆ. ಇನ್ನೂ ನಾಲ್ವರು ಅಸುನೀಗಿದ್ದಾರೆ. ಈ ಮೂಲಕ ಅಮೆರಿಕದ ಗನ್‌ ಸಂಸ್ಕೃತಿ ಮತ್ತೆ ತೀವ್ರ ಕಳವಳ ಉಂಟು ಮಾಡಿದೆ.

6 people died in the shooting in California
ಗುಂಡಿನ ದಾಳಿಗೆ ಕ್ಯಾಲಿಫೋರ್ನಿಯಾದಲ್ಲಿ 6 ಜನ ಸಾವು

By

Published : Jan 17, 2023, 10:45 AM IST

ವಿಸಾಲಿಯ (ಕ್ಯಾಲಿಫೋರ್ನಿಯಾ) : ಮಧ್ಯ ಕ್ಯಾಲಿಫೋರ್ನಿ ನಗರಿಯ ಮನೆಯೊಂದರ ಮೇಲೆ ಸೋಮವಾರ ಮುಂಜಾನೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 17 ವರ್ಷದ ತಾಯಿ ಮತ್ತು ಆಕೆಯ ಆರು ತಿಂಗಳ ಮಗು ಸೇರಿದಂತೆ ಒಟ್ಟು 6 ಜನರು ಸಾವನ್ನಪ್ಪಿದ್ದಾರೆ. ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಮುಂಜಾನೆ 3.30 ರ ಸುಮಾರಿಗೆ ವಿಸಾಲಿಯದ ಗೋಶನ್​ನಲ್ಲಿರುವ ಮನೆಯ ಮೇಲೆ ದಾಳಿ ನಡೆದಿದೆ ಎಂದು ತುಲೇರ್ ಕೌಂಟಿ ಶೆರಿಫ್ ಕಚೇರಿಯ ಅಧಿಕಾರಿಗಳು ಮಾಹಿತಿ ನೀಡಿದರು. ಶೆರಿಫ್ ಮೈಕ್ ಬೌಡ್ರೆಕ್ಸ್ ಹೇಳುವ ಪ್ರಕಾರ, ಗುಂಡು ಹಾರಿಸಿರುವ ದಾಳಿಕೋರರು ಅದೇ ಪ್ರದೇಶದಲ್ಲಿ ಅವಿತಿದ್ದಾರೆ. ಇಬ್ಬರು ರಸ್ತೆಯಲ್ಲಿ ಹತ್ಯೆಯಾಗಿದ್ದರೆ ಇನ್ನೊಬ್ಬ ಮನೆ ದ್ವಾರದ ಸಮೀಪ ಪ್ರಾಣ ಕಳೆದುಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ ಎಂದರು.

ಆರೋಪಿಗಳಿಗೆ ಬಲೆ ಬೀಸಿದ್ದೇವೆ. ಮುಖ್ಯವಾಗಿ ಇಬ್ಬರು ಶಂಕಿತರಿಗಾಗಿ ಹುಡುಕಾಟ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ನಡೆಸಿದ ಆರೋಪಿಗಳಿಗೆ ದೊಡ್ಡ ಗ್ಯಾಂಗ್​ನ ಸಂಪರ್ಕವಿದೆ. ನಮ್ಮ ಕಚೇರಿ ಸಿಬ್ಬಂದಿ ಕಳೆದ ವಾರ ಈ ಪ್ರದೇಶದಲ್ಲಿ ಮಾದಕ ದ್ರವ್ಯ-ಸಂಬಂಧಿತ ಸರ್ಚ್ ವಾರಂಟ್ ಪಡೆದು ಶೋಧ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಇದು ಕುಟುಂಬದ ಮೇಲೆ ಉದ್ದೇಶಪೂರ್ವಕವಾಗಿಯೇ ನಡೆದ ದಾಳಿಯೆಂದು ಕಾಣುತ್ತಿದೆ. ತಾಯಿ ಹಾಗು ಆಕೆಯ 6 ತಿಂಗಳ ಮಗುವಿನ ತಲೆಗೆ ಗುಂಡಿಟ್ಟು ಕೊಂದಿದ್ದಾರೆ. ಘಟನೆ ನಡೆದ ಗೋಶನ್​ 3,000 ನಿವಾಸಿಗಳನ್ನು ಹೊಂದಿದ್ದು ಅರೆ ಗ್ರಾಮೀಣ ಪ್ರದೇಶವಾಗಿದೆ.

11 ವರ್ಷದ ಬಾಲಕ ಗುಂಡಿಗೆ ಬಲಿ: ಟೆಕ್ಸಾಸ್​ನ ಡಲ್ಲಾಸ್​ನಲ್ಲಿ 14 ವರ್ಷದ ಬಾಲಕಿ ಹಾಗು 11 ವರ್ಷದ ಬಾಲಕನ ನಡುವಿನ ಗಲಾಟೆ ಕೊನೆಗೆ ಸಾವಿನಲ್ಲಿ ಅಂತ್ಯಗೊಂಡಿದೆ. ಹದಿಹರೆಯದ ಮಕ್ಕಳು ಸಣ್ಣಪುಟ್ಟ ವಿಚಾರಕ್ಕೆ ಜಗಳವಾಡುವುದು, ಹೊಡೆದಾಡುವುದು ಸಹಜ. ಆದರೆ ಇಲ್ಲಿ ಇದೇ ಮಕ್ಕಳ ಜಗಳ ವಿಕೋಪಕ್ಕೆ ತಿರುಗಿ ಬಾಲಕಿ ಬಾಲಕನ ಮೇಲೆ ಗುಂಡು ಹಾರಿಸಿದ್ದು, ಬಾಲಕ ಸಾವನ್ನಪ್ಪಿದ್ದಾನೆ. ಕಳೆದ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಇದೊಂದು ಭಯಾನಕ ಮತ್ತು ಕಳವಳಕಾರಿ ಘಟನೆ ಎಂದು ಅಲ್ಲಿನ ಪೊಲೀಸ್​ ಸಾಜೆಂಟ್​ ವಾರೆನ್​​ ಮಿಚೆಲ್​ ಹೇಳಿದ್ದಾರೆ. ಗಾಯಾಳು ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದರೂ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ.

ಬಾಲಪರಾಧಿ ಬಾಲಕಿಯು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದು ತನಿಖೆಯ ನಂತರ ಆಕೆಯನ್ನು ಹತ್ತಿರದ ಅಪಾಟ್ಮೆಂಟ್​ ಸಂಕೀರ್ಣದಲ್ಲಿ ಕಸ್ಟಡಿಗೆ ತೆಗದುಕೊಳ್ಳಲಾಗಿದೆ. ಪಿಸ್ತೂಲ್‌ ವಶಪಡಿಸಿಕೊಂಡಿರುವ ಪೋಲಿಸರು ಕೊಲೆ ಆರೋಪದಡಿ ಬಾಲಕಿಯನ್ನು ಬಾಲಪರಾಧ ನ್ಯಾಯ ಕೇಂದ್ರದಲ್ಲಿ ಇರಿಸಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಕಾಬೂಲ್‌ನಲ್ಲಿ ಅಫ್ಘಾನ್​ ಮಾಜಿ ಸಂಸದೆ ಮುರ್ಸದ್​ ನಬಿಜಾದಾ ಹತ್ಯೆ: ಸೂಕ್ತ ತನಿಖೆಗೆ ವಿಶ್ವಸಂಸ್ಥೆ ಆಗ್ರಹ

ABOUT THE AUTHOR

...view details