ಕರ್ನಾಟಕ

karnataka

ETV Bharat / international

ಹತ್ಯೆ ಆರೋಪಿ ಭಾರತೀಯನ ತಲೆಗೆ ₹5.25 ಕೋಟಿ ಕಟ್ಟಿದ ಆಸ್ಟ್ರೇಲಿಯಾ ಪೊಲೀಸ್​! - ರಾಜ್​ವಿಂದರ್​ ಸಿಂಗ್​ಗಾಗಿ 3 ವರ್ಷಗಳಿಂದ ಹುಡುಕಾಟ

ಆಸ್ಟ್ರೇಲಿಯಾದಲ್ಲಿ ಮಹಿಳೆ ಕೊಲೆ ಮಾಡಿ ತಲೆಮರೆಸಿಕೊಂಡಿರುವ ಭಾರತದ ಪಂಜಾಬ್​ ಮೂಲದ ವ್ಯಕ್ತಿಯ ತಲೆಗೆ ಅಲ್ಲಿನ ಪೊಲೀಸರು 5 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

australia-offers
ಆಸ್ಟ್ರೇಲಿಯಾ ಪೊಲೀಸ್​!

By

Published : Nov 3, 2022, 7:50 PM IST

ಕ್ಯಾನ್‌ಬೆರಾ(ಆಸ್ಟ್ರೇಲಿಯಾ):ಮಹಿಳೆಯ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಭಾರತೀಯನ ಪತ್ತೆಗಾಗಿ ಆಸ್ಟ್ರೇಲಿಯಾ ಪೊಲೀಸರು 5.25 ಕೋಟಿ ರೂಪಾಯಿ (USD 633,000) ಬಹುಮಾನ ಘೋಷಣೆ ಮಾಡಿದ್ದಾರೆ. ಆತನನ್ನು ಹುಡುಕಿಕೊಟ್ಟವರಿಗೆ ಇಷ್ಟು ಮೊತ್ತ ನೀಡಲಾಗುವುದು. ಈತನ ಸುಳಿವು ಸಿಕ್ಕಲ್ಲಿ ಮಾಹಿತಿ ನೀಡಿ ಎಂದು ವಾಟ್ಸ್​ಆ್ಯಪ್​​ ಸಂಖ್ಯೆಯನ್ನೂ ನೀಡಲಾಗಿದೆ.

ಭಾರತದ ಪಂಜಾಬ್​ ಮೂಲದವರಾದ ರಾಜ್‌ವಿಂದರ್ ಸಿಂಗ್(38) ಹತ್ಯೆ ಆರೋಪಿ. ಈತ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದ. 2018 ರಲ್ಲಿ 24 ವರ್ಷದ ಯುವತಿ ಹತ್ಯೆ ಮಾಡಿದ ಪ್ರಕರಣದಲ್ಲಿ ಈತ ತಲೆಮರೆಸಿಕೊಂಡಿದ್ದಾನೆ.

ರಾಜ್​ವಿಂದರ್​ ಸಿಂಗ್​ಗಾಗಿ 3 ವರ್ಷಗಳಿಂದ ಹುಡುಕಾಟ ನಡೆಸುತ್ತಿರುವ ಕ್ವೀನ್ಸ್‌ಲ್ಯಾಂಡ್ ಪೊಲೀಸರು ಭಾರತದಲ್ಲೂ ತಪಾಸಣೆ ನಡೆಸುತ್ತಿದ್ದಾರೆ. ಸಿಂಗ್ ಭಾರತದಲ್ಲೇ ಬಚ್ಚಿಟ್ಟುಕೊಂಡಿದ್ದು, ಆತನ ಸ್ಥಳ ಮತ್ತು ಬಂಧನಕ್ಕೆ ನೆರವು ನೀಡಿದಲ್ಲಿ ಅವರಿಗೆ 5 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಿಸಿದೆ.

ಮಾಹಿತಿ ನೀಡಲು ವಾಟ್ಸ್​ಆ್ಯಪ್​ ಸಂಖ್ಯೆ:ಭಾರತದ ಕೇಂದ್ರೀಯ ತನಿಖಾ ದಳದೊಂದಿಗೆ ಸೇರಿ ಆಸ್ಟ್ರೇಲಿಯನ್ ಫೆಡರಲ್ ಪೊಲೀಸರು ಹತ್ಯೆ ಆರೋಪಿಯ ಪತ್ತೆ ಕಾರ್ಯ ನಡೆಸುತ್ತಿದ್ದಾರೆ. ಜನರು ನೇರವಾಗಿ ಮಾಹಿತಿ ನೀಡಲು ಕ್ವೀನ್ಸ್‌ಲ್ಯಾಂಡ್ ಪೊಲೀಸರು ವಾಟ್ಸ್​ಆ್ಯಪ್​ ​ ಲಿಂಕ್ ನೀಡಿದ್ದಾರೆ. ಸುಳಿವು ಸಿಕ್ಕ ಜನರು ಆಸ್ಟ್ರೇಲಿಯನ್ ಫೆಡರಲ್ ಪೊಲೀಸ್‌ ಸಂಖ್ಯೆಯಾದ +911141220972 ನಂಬರ್​ಗೆ ಕರೆ ಮಾಡಿ ತಿಳಿಸಬಹುದು.

ಓದಿ:ಭಾರತ ಹೊಗಳಿದ್ದ ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮೇಲೆ ಗುಂಡಿನ ದಾಳಿ

ABOUT THE AUTHOR

...view details