ಮೆಲ್ಬೋರ್ನ್ (ಆಸ್ಟ್ರೇಲಿಯಾ): ಮುಂದಿನ ವಾರ ಸಿಡ್ನಿಯಲ್ಲಿ ನಡೆಯಬೇಕಿದ್ದ ಕ್ವಾಡ್ ನಾಯಕರ ಸಭೆ ರದ್ದುಗೊಳಿಸಲಾಗಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಬುಧವಾರ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಆಸ್ಟ್ರೇಲಿಯಾ ಪ್ರವಾಸವನ್ನು ಮುಂದೂಡಿದ ನಂತರ ಈ ಘೋಷಣೆ ಮಾಡಲಾಗಿದೆ. ಈ ವಾರಾಂತ್ಯದಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಆಸ್ಟ್ರೇಲಿಯಾ, ಯುನೈಟೆಡ್ ಸ್ಟೇಟ್ಸ್, ಭಾರತ ಮತ್ತು ಜಪಾನ್ ನಾಯಕರು ಸಭೆ ಸೇರಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷ ಬೈಡನ್ ಆಸ್ಟ್ರೇಲಿಯಾ ಪ್ರವಾಸವನ್ನು ಮುಂದೂಡುವುದಾಗಿ ಮಂಗಳವಾರ ಘೋಷಿಸಿದರು. ಪಪುವಾ ನ್ಯೂಗಿನಿಯಾ ಪ್ರವಾಸವನ್ನೂ ಮುಂದೂಡಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನ ಸಾಲದ ಮೇಲಿನ ಸಂಭಾವ್ಯ ಡೀಫಾಲ್ಟ್ ಅನ್ನು ತಡೆಗಟ್ಟಲು ರಿಪಬ್ಲಿಕನ್ ಪಕ್ಷದೊಂದಿಗೆ ನಡೆಯುತ್ತಿರುವ ಅನಿಶ್ಚಿತತೆಗಳು ಮತ್ತು ತೀವ್ರವಾದ ಮಾತುಕತೆಗಳಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಜೂನ್ 1ರ ಮೊದಲು ಈ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ. ಇಲ್ಲದಿದ್ದರೆ ಯುಎಸ್ ಆರ್ಥಿಕತೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಎಚ್ಚರಿಸಿದೆ.
ಇದನ್ನೂ ಓದಿ:ಮುಂದಿನ ತಿಂಗಳು ಕ್ವಾಡ್ ಶೃಂಗಸಭೆಯಲ್ಲಿ ಮೋದಿ - ಬೈಡನ್ ಭೇಟಿ: ಶ್ವೇತಭವನ
ಬೈಡನ್ ಅವರು ಆಸ್ಟ್ರೇಲಿಯಾಕ್ಕೆ ಬರಲು ಸಾಧ್ಯವಾಗದ ಕಾರಣ ನಿರಾಶೆಗೊಂಡಿದ್ದಾರೆ. ಆದರೆ ಕ್ವಾಡ್ ನಾಯಕರು ಈ ವಾರಾಂತ್ಯದಲ್ಲಿ ಹಿರೋಷಿಮಾದಲ್ಲಿ G7 ನಾಯಕರ ಸಭೆಯಲ್ಲಿ ಸೇರಲಿದ್ದೇವೆ ಎಂದು ಪ್ರಧಾನಿ ಹೇಳಿದರು. ಅವರ ಪ್ರಕಾರ ಪ್ರಧಾನಿ ಮೋದಿ ಮತ್ತು ಪಿಎಂ ಕಿಶಿದಾ ಮುಂದಿನ ವಾರ ಸಿಡ್ನಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಆದರೆ ಎಲ್ಲಾ ಮೂರು ದೇಶಗಳ ನಾಯಕರು ಇನ್ನೂ ತಮ್ಮ ಯೋಜನೆಗಳನ್ನು ಖಚಿತಪಡಿಡಿಸಿಲ್ಲ. "ನಾವು ಇಂದು ಕ್ವಾಡ್ ನಾಯಕರೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಅದರ ಬಗ್ಗೆ ಹೆಚ್ಚಿನ ಘೋಷಣೆಗಳನ್ನು ಮಾಡುತ್ತೇವೆ, ಆದರೆ ಪ್ರಧಾನಿ ಮೋದಿ ಖಂಡಿತವಾಗಿಯೂ ಮುಂದಿನ ವಾರ ಇಲ್ಲಿ ಸ್ವಾಗತಾರ್ಹ ಅತಿಥಿಯಾಗುತ್ತಾರೆ" ಎಂದು ಅಲ್ಬನೀಸ್ ಹೇಳಿದರು.