ಕರ್ನಾಟಕ

karnataka

ETV Bharat / international

ಕ್ಯೂಬಾದಲ್ಲಿ ಹೋಟೆಲ್​ನಲ್ಲಿ ಸ್ಫೋಟ : 18 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ - ಕ್ಯೂಬಾದಲ್ಲಿ 18 ಮಂದಿ ಸಾವು

ಸ್ಫೋಟದ ನಂತರ ಕ್ಯೂಬಾದ ಅಧ್ಯಕ್ಷ ಮಿಗುಯೆಲ್ ಡಯಾಜ್-ಕ್ಯಾನೆಲ್ ಸ್ಥಳಕ್ಕೆ ಭೇಟಿ ನೀಡಿ ನಂತರ ಹವಾನಾದಲ್ಲಿನ ಸ್ಥಳೀಯ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ವಿಚಾರಿಸಿದ್ದಾರೆ. ಸ್ಫೋಟ ಸಂಭವಿಸಿರುವ ಬಗ್ಗೆ ಇನ್ನೂ ತನಿಖೆ ನಡೆಸಲಾಗುತ್ತಿದ್ದು, ನಿಖರ ಕಾರಣ ತಿಳಿದು ಬರಬೇಕಿದೆ..

At least 18 killed in Havana hotel explosion
ಕ್ಯೂಬಾದಲ್ಲಿ ಹೋಟೆಲ್​ನಲ್ಲಿ ಸ್ಫೋಟ: 18 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ

By

Published : May 7, 2022, 11:57 AM IST

ಹವಾನಾ, ಕ್ಯೂಬಾ :ಐಷಾರಾಮಿ ಹೋಟೆಲ್​​ನಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಸುಮಾರು 18 ಮಂದಿ ಸಾವನ್ನಪ್ಪಿ, 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ವರದಿ ಮಾಡಿವೆ.

ಕ್ಯೂಬಾದ ಆರೋಗ್ಯ ಸಚಿವಾಲಯದ ಅಧಿಕಾರಿ ಜೂಲಿಯೊ ಗುರ್ರಾ ಅವರು ಅಂಕಿ-ಅಂಶಗಳನ್ನು ದೃಢಪಡಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹೋಟೆಲ್ ಸರಟೋಗಾದಲ್ಲಿ ಶುಕ್ರವಾರ ಈ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಅನಿಲ ಸೋರಿಕೆ ಕಾರಣ ಎಂದು ಭಾವಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೆಲವರು ಗಾಯಾಳುಗಳಿಗೆ ರಕ್ತದಾನ ಮಾಡುತ್ತಿದ್ದಾರೆ ಎಂದು ಕ್ಯೂಬಾದ ಅಧ್ಯಕ್ಷೀಯ ಕಚೇರಿ ಟ್ವೀಟ್​ನಲ್ಲಿ ಮಾಹಿತಿ ನೀಡಿದೆ.

ಸ್ಫೋಟದ ನಂತರ ಕ್ಯೂಬಾದ ಅಧ್ಯಕ್ಷ ಮಿಗುಯೆಲ್ ಡಯಾಜ್-ಕ್ಯಾನೆಲ್ ಸ್ಥಳಕ್ಕೆ ಭೇಟಿ ನೀಡಿ ನಂತರ ಹವಾನಾದಲ್ಲಿನ ಸ್ಥಳೀಯ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ವಿಚಾರಿಸಿದ್ದಾರೆ. ಸ್ಫೋಟ ಸಂಭವಿಸಿರುವ ಬಗ್ಗೆ ಇನ್ನೂ ತನಿಖೆ ನಡೆಸಲಾಗುತ್ತಿದ್ದು, ನಿಖರ ಕಾರಣ ತಿಳಿದು ಬರಬೇಕಿದೆ.

ಇದನ್ನೂ ಓದಿ:ಆರು ಅಂತಸ್ತಿನ ಕಟ್ಟಡ ಕುಸಿದು 53 ಜನ ಸಾವು, 10 ಜನರ ರಕ್ಷಣೆ.. ಶೋಧ ಕಾರ್ಯ ಮುಕ್ತಾಯ

ABOUT THE AUTHOR

...view details