ಬೀಜಿಂಗ್:ಚೀನಾದಲ್ಲಿ ಮಹಾಮಾರಿ ಕೋವಿಡ್ ಸೋಂಕಿತ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಏಷ್ಯನ್ ಗೇಮ್ಸ್ ಕ್ರೀಡಾಕೂಟ ಮುಂದೂಡಿಕೆಯಾಗಿದೆ. ಕ್ರೀಡಾಕೂಟವನ್ನು ಮುಂದೂಡಿರುವುದಕ್ಕೆ ಯಾವುದೇ ನಿರ್ಧಿಷ್ಟ ಕಾರಣಗಳನ್ನು ನೀಡದಿದ್ದರೂ, ಕೋವಿಡ್ ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿರುವುದೇ ಕಾರಣ ಎಂದು ತಿಳಿದು ಬಂದಿದೆ.
ಚೀನಾದಲ್ಲಿ ಕೋವಿಡ್ ಆರ್ಭಟ; ಏಷ್ಯನ್ ಗೇಮ್ಸ್ ಮುಂದೂಡಿಕೆ - ಏಷ್ಯನ್ ಗೇಮ್ಸ್ 2022
2022ರ ಸೆಪ್ಟೆಂಬರ್ ತಿಂಗಳಲ್ಲಿ ಚೀನಾದಲ್ಲಿ ಆಯೋಜನೆಗೊಂಡಿದ್ದ ಏಷ್ಯನ್ ಗೇಮ್ಸ್ ಇದೀಗ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ.
Asian Games 2022
19ನೇ ಏಷ್ಯನ್ ಗೇಮ್ಸ್ ಚೀನಾದ ಹ್ಯಾಂಗ್ಜೌನಲ್ಲಿ ಸೆಪ್ಟೆಂಬರ್ 10ರಿಂದ 25ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಕೋವಿಡ್ ಹೆಚ್ಚಾಗಿರುವ ಕಾರಣ 2023ರವರೆಗೆ ಕ್ರೀಡಾಕೂಟ ಮುಂದೂಡಿಕೆಯಾಗಿದ್ದು, ಹೊಸ ದಿನಾಂಕ ಮುಂದಿನ ದಿನಗಳಲ್ಲಿ ಪ್ರಕಟವಾಗಲಿದೆ. ಕೊರೊನಾ ವೈರಸ್ ಸೋಂಕು ಸಾಂಕ್ರಾಮಿಕಗೊಳ್ಳುವ ಹಂತ ತಲುಪಿರುವ ಶಾಂಘೈನಿಂದ ಹಾಂಗ್ಜೌ ನಗರ 200ಕಿಲೋ ಮೀಟರ್ಗಿಂತಲೂ ಕಡಿಮೆ ಅಂತರದಲ್ಲಿದೆ.