ವಾಷಿಂಗ್ಟನ್(ಅಮೆರಿಕ): ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ವಿಜ್ಞಾನಿಗಳು ಆರ್ಟೆಮಿಸ್ ಮಿಷನ್ ಅಡಿ ಮತ್ತೆ ಚಂದ್ರನ ಮೇಲೆ ಮಾನವನನ್ನು ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಇಂದು ಆರ್ಟೆಮಿಸ್ 1 ಮಿಷನ್ ರಾಕೆಟ್ ಉಡಾವಣೆ ಪ್ರಯತ್ನ ನಡೆಸಿದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ರಾಕೆಟ್ ಉಡಾವಣೆಗೊಂಡಿಲ್ಲ.
ನಾಸಾ ನಿರ್ಮಿಸಿದ ಅತ್ಯಂತ ಶಕ್ತಿಶಾಲಿ ರಾಕೆಟ್ ಆರ್ಟೆಮಿಸ್ 1 ಮಿಷನ್ ಉಡಾವಣೆಗೊಳ್ಳಬೇಕಾಗಿತ್ತು. ಆದರೆ, ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ರಾಕೆಟ್ ನೆಲ ಬಿಟ್ಟು ಮೇಲೇಳಲಿಲ್ಲ. ಇದರ ಬಗ್ಗೆ ನಾಸಾ ವಿಜ್ಞಾನಿಗಳು ಮಾಹಿತಿ ನೀಡಿದ್ದು, ಡೇಟಾ ಸಂಗ್ರಹ ಕಾರ್ಯ ಮುಂದುವರೆದಿದೆ. ಉಡಾವಣೆಯ ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ನಾಸಾ ಟ್ವೀಟ್ ಮಾಡಿದೆ.