ಢಾಕಾ: ಮೂಲಭೂತವಾದಿ ಮುಸ್ಲಿಮರ ಗುಂಪೊಂದು ಇಲ್ಲಿನ ನರೈಲ್ ಜಿಲ್ಲೆಯಲ್ಲಿರುವ ಹಿಂದೂಗಳ ದೇಗುಲ ಹಾಗು ಮನೆಗೆ ಬೆಂಕಿ ಹಚ್ಚಿ, ಧ್ವಂಸಗೊಳಿಸಿದೆ. ಈ ಘಟನೆಯನ್ನು ಅಲ್ಲಿನ ಪೊಲೀಸರು ದೃಢಪಡಿಸಿದ್ದಾರೆ. ಓರ್ವ ಹಿಂದೂ ಹುಡುಗನ ಫೇಸ್‌ಬುಕ್ ಬರಹದಿಂದ ರೊಚ್ಚಿಗೆದ್ದ ದುಷ್ಕರ್ಮಿಗಳು ದಿಘೋಲಿಯಾ ಗ್ರಾಮದಲ್ಲಿ ಶುಕ್ರವಾರ ಸಂಜೆ ಮನಸೋಇಚ್ಛೆ ದುಷ್ಕೃತ್ಯ ಎಸಗಿದ್ದಾರೆ. ಘಟನೆ ಜರುಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಮೂಲಭೂತವಾದಿಗಳ ಗುಂಪು ಚದುರಿಸಲು ಗಾಳಿಯಲ್ಲಿ ಎಚ್ಚರಿಕೆಯ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.
ಬಾಂಗ್ಲಾದಲ್ಲಿ ಹಿಂದೂಗಳ ದೇಗುಲ, ಮನೆಗಳ ಮೇಲೆ ಮತ್ತೆ ದಾಳಿ
ಬಾಂಗ್ಲಾದೇಶದ ನರೈಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಪವಿತ್ರ ದೇಗುಲ, ಮನೆಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಿ ಧಾರ್ಮಿಕ ಮತಾಂಧರು ವಿಕೃತಿ ಮೆರೆದಿದ್ದಾರೆ.
ಬಾಂಗ್ಲಾದಲ್ಲಿ ಹಿಂದೂಗಳ ದೇಗುಲ, ಮನೆಗಳ ಮೇಲೆ ಮತ್ತೆ ದಾಳಿ
ಗ್ರಾಮದಲ್ಲಿ ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ನರೈಲ್‌ನ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಪ್ರಬಿರ್ ಕುಮಾರ್ ರಾಯ್ ತಿಳಿಸಿದರು. "ನಾವು ಪ್ರಕರಣದ ತನಿಖೆ ಕೈಗೊಂಡಿದ್ದೇವೆ. ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿವೆ" ಎಂದು ಅವರು ಹೇಳಿದರು. ಸದ್ಯಕ್ಕೆ ಪ್ರಕರಣದಲ್ಲಿ ಯಾವುದೇ ಆರೋಪಿಗಳ ಬಂಧನವಾಗಿಲ್ಲ.
ಇದನ್ನೂ ಓದಿ:ಹಾರಾಟದ ವೇಳೆ ಎಂಜಿನ್ ಆಫ್: ಉತ್ತರ ಗ್ರೀಸ್‌ನಲ್ಲಿ ವಿಮಾನ ಪತನ