ಚಾಂಗ್ವಾನ್ (ದಕ್ಷಿಣ ಕೊರಿಯಾ): ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ ಮಹಿಳೆಯರ 50 ಮೀಟರ್ ರೈಫಲ್ 3 ಸ್ಥಾನಗಳ ಸ್ಪರ್ಧೆಯಲ್ಲಿ ಭಾರತದ ಶೂಟರ್ ಅಂಜುಮ್ ಮೌದ್ಗಿಲ್ ಕಂಚಿನ ಪದಕ ಸಾಧನೆ ಮಾಡಿದ್ದಾರೆ. ಅಂಜುಮ್ ಅಂತಿಮ ಸುತ್ತಿನಲ್ಲಿ 402.9 ಅಂಕ ಗಳಿಸಿ 3ನೇ ಸ್ಥಾನ ಪಡೆದರು.
ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಕಂಚು ಗೆದ್ದ ಅಂಜುಮ್ ಮೌದ್ಗಿಲ್ - ಕಂಚು ಗೆದ್ದ ಭಾರತೀಯ ಶೂಟರ್ ಅಂಜುಮ್ ಮೌದ್ಗಿಲ್
ದಕ್ಷಿಣ ಕೊರಿಯಾದ ಚಾಂಗ್ವಾನ್ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಶೂಟರ್ ಅಂಜುಮ್ ಮೌದ್ಗಿಲ್ ಅವರು ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
![ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಕಂಚು ಗೆದ್ದ ಅಂಜುಮ್ ಮೌದ್ಗಿಲ್ Anjum Moudgil](https://etvbharatimages.akamaized.net/etvbharat/prod-images/768-512-15847000-thumbnail-3x2-news.jpg)
ಶೂಟರ್ ಅಂಜುಮ್ ಮೌದ್ಗಿಲ್
ಶನಿವಾರ ನಡೆದ ರ‍್ಯಾಂಕಿಂಗ್ ಸುತ್ತಿನಲ್ಲಿ ಆರನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದಿದ್ದರು. ಜರ್ಮನಿಯ ಅನ್ನಾ ಜಾನ್ಸೆನ್ ಚಿನ್ನ ಗೆದ್ದರೆ, ಇಟಲಿಯ ಬಾರ್ಬರಾ ಗಂಬಾರೊ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. 2018ರ ಚಾಂಗ್ವಾನ್ ವಿಶ್ವಕಪ್‌ನಲ್ಲಿ ಅಂಜುಮ್ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದರು. ಭಾರತ ಒಟ್ಟು 11 ಪದಕಗಳೊಂದಿಗೆ (ನಾಲ್ಕು ಚಿನ್ನ, ಐದು ಬೆಳ್ಳಿ ಮತ್ತು ಎರಡು ಕಂಚು) ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಇದನ್ನೂ ಓದಿ:ISSF Shooting World Cup: ಭಾರತಕ್ಕೆ 3 ಚಿನ್ನ, 4 ಬೆಳ್ಳಿ, 1 ಕಂಚು - ಪದಕ ಪಟ್ಟಿಯಲ್ಲಿ ಅಗ್ರಸ್ಥಾನ