ಲೀವ್(ಉಕ್ರೇನ್): ರಷ್ಯಾ-ಉಕ್ರೇನ್ ಸಂಘರ್ಷದ ನಡುವೆ ಸೇನಾ ಪಡೆಗಳಿಂದ ಆಕ್ರಮಣಕ್ಕೆ ಒಳಗಾಗಿರುವ ಉಕ್ರೇನ್ನ ಲೀವ್ ನಗರಕ್ಕೆ ಹಾಲಿವುಡ್ ನಟಿ ಏಂಜಲಿನಾ ಜೋಲಿ ಭೇಟಿ ನೀಡಿದ್ದರು. ವಿಶ್ವಸಂಸ್ಥೆಯ ನಿರಾಶ್ರಿತ ಸಂಸ್ಥೆಯ ವಿಶೇಷ ರಾಯಭಾರಿ ಏಂಜಲಿನಾ ಜೋಲಿ (46), ಉಕ್ರೇನ್ನಲ್ಲಿ ಯುದ್ಧದಿಂದಾಗಿ ಚದುರಿ ಹೋಗಿರುವ ಜನರು ಮತ್ತು ಮಕ್ಕಳನ್ನು ಅವರು ಭೇಟಿಯಾದರು.
ಕಳೆದ ಎರಡು ತಿಂಗಳಲ್ಲಿ 1.27 ಕೋಟಿಗೂ ಹೆಚ್ಚು ಜನರು ಉಕ್ರೇನ್ನಲ್ಲಿ ಅವರ ಮನೆಗಳನ್ನು ತೊರೆದು ವಲಸೆ ಹೋಗಿದ್ದಾರೆ. ಅಂದಾಜಿನ ಪ್ರಕಾರ, ಉಕ್ರೇನ್ನಲ್ಲಿ ಶೇ. 30ರಷ್ಟು ಜನರು ನೆಲೆ ಕಳೆದುಕೊಂಡಿದ್ದಾರೆ. ನಿರಾಶ್ರಿತ ಕೇಂದ್ರಗಳಲ್ಲಿ ಸ್ವಯಂ ಸೇವಕರೊಂದಿಗೆ ಜೋಲಿ ಮಾತುಕತೆ ನಡೆಸಿದ್ದಾರೆ. ಕೇಂದ್ರದಲ್ಲಿ ಕರ್ತವ್ಯದಲ್ಲಿರುವ ಮನೋವೈದ್ಯರು ನಿತ್ಯ 15 ಜನರೊಂದಿಗೆ ಮಾತನಾಡುತ್ತಾರೆ. ಅವರಲ್ಲಿ ಬಹುತೇಕರು ಎರಡು ವರ್ಷದಿಂದ 10 ವರ್ಷದೊಳಗಿನ ಮಕ್ಕಳು ಎಂದು ಸ್ವಯಂ ಸೇವಕರು ಜೋಲಿ ಅವರಿಗೆ ತಿಳಿಸಿದ್ದಾರೆ.