ವೆಸ್ಟಾವಿಯಾ ಹಿಲ್ಸ್( ಅಮೆರಿಕ):ಬರ್ಮಿಂಗ್ಹ್ಯಾಮ್ನ ಪ್ರಮುಖ ನಗರಗಳಲ್ಲಿ ಒಂದಾದವೆಸ್ಟಾವಿಯಾ ಹಿಲ್ಸ್‌ನ ಸೇಂಟ್ ಸ್ಟೀಫನ್ಸ್ ಎಪಿಸ್ಕೋಪಲ್ ಚರ್ಚ್‌ನಲ್ಲಿ ಗುರುವಾರ ಬಂಧೂಕುದಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ಒಬ್ಬ ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ ಎಂದು ವೆಸ್ಟಾವಿಯಾ ಹಿಲ್ಸ್ ಪೊಲೀಸ್ ಕ್ಯಾಪ್ಟನ್ ಶೇನ್ ವೇರ್ ತಿಳಿಸಿದ್ದಾರೆ.
ಪ್ರಕರಣದ ವರದಿಯಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಕಾನೂನು ಜಾರಿ ಅಧಿಕಾರಿಗಳು ಭೇಟಿ ನೀಡಿ ಮಾಹಿತಿಯನ್ನು ಕಲೆಹಾಕಿದ್ದು, ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಶಂಕಿತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.