ಮೊಗಾದಿಶು: ಅಲ್ ಶಬಾಬ್ ಸಂಘಟನೆಗೆ ಸೇರಿದ 100 ಕ್ಕೂ ಉಗ್ರರನ್ನು ಸೊಮಾಲಿಯಾ ರಾಷ್ಟ್ರೀಯ ಸೇನೆಯು ಹತ್ಯೆಗೈದಿರುವುದಾಗಿ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ದೇಶದ ಮಧ್ಯ ಭಾಗದಲ್ಲಿರುವ ಶಾಬೆಲ್ಲೆ ಮತ್ತು ಹಿರಾನ್ ಪ್ರದೇಶದ ಗಡಿಯಲ್ಲಿ ಶನಿವಾರ ನಡೆಸಿದ ಯೋಜಿತ ಕಾರ್ಯಾಚರಣೆಯಲ್ಲಿ ಉಗ್ರರು ಹತರಾಗಿದ್ದಾರೆ. ಸತ್ತವರಲ್ಲಿ 10 ಮಂದಿ ಸಂಘಟನೆಯ ಪ್ರಮುಖರು ಎಂದು ಮಾಹಿತಿ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಉಪ ಸಚಿವ ಅಬ್ದಿರಹ್ಮಾನ್ ಯೂಸೂಫ್ ಅಲ್-ಅದಾಲಾ ತಿಳಿಸಿದರು.
ಸೊಮಾಲಿಯಾ ಸೇನೆಯಿಂದ 100ಕ್ಕೂ ಹೆಚ್ಚು ಅಲ್ ಶಬಾಬ್ ಉಗ್ರರ ಹತ್ಯೆ - ರಾಷ್ಟ್ರೀಯ ಸೇನೆ
ಸೊಮಾಲಿಯಾದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದೆ. ರಾಷ್ಟ್ರೀಯ ಸೇನೆಯು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದು, ನಿನ್ನೆ ನಡೆದ ದಾಳಿಯಲ್ಲಿ 100ಕ್ಕೂ ಅಧಿಕ ಅಲ್ ಶಬಾಬ್ ಉಗ್ರ ಸಂಘಟನೆಯ ಭಯೋತ್ಪಾದರು ಹತರಾಗಿದ್ದಾರೆ.
ಸೊಮಾಲಿಯಾ ಸೇನೆ
ಸೊಮಾಲಿಯಾ ಕೇಂದ್ರ ಭಾಗದಲ್ಲಿ ಉಗ್ರರು ಅಡಗಿಕೊಂಡಿದ್ದು, ಅಲ್-ಶಬಾಬ್ ಗುಂಪಿನ ವಿರುದ್ಧದ ಮಿಲಿಟರಿ ಆಕ್ರಮಣ ತೀವ್ರಗೊಂಡಿದೆ.