ಕೈರೋ(ಈಜಿಪ್ಟ್):ಮೋಸ್ಟ್ ವಾಂಟೆಡ್ ಉಗ್ರ ಅಯ್ನಾನ್ ಅಲ್ ಜವಾಹಿರಿಯನ್ನು ಅಮೆರಿಕ ಡ್ರೋನ್ ದಾಳಿ ನಡೆಸಿ ಹತ್ಯೆ ಮಾಡಿತ್ತು. ತನ್ನ ನಾಯಕನನ್ನು ಕೊಂದ 35 ನಿಮಿಷಗಳ ವಿಡಿಯೋವನ್ನು ಅಂತಾರಾಷ್ಟ್ರೀಯ ಉಗ್ರ ಸಂಘಟನೆಯಾದ ಅಲ್ ಖೈದಾ ಶುಕ್ರವಾರ ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.
ಗುಪ್ತಚರ ಸಂಸ್ಥೆಯಾದ SITE ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ನಿರೂಪಿಸಿದ್ದು, ಅಲ್ಖೈದಾ ಸಂಘಟನೆಯ ಜವಾಹಿರಿಯ ಬಲಿ ಪಡೆದ ವಿಡಿಯೋ ಎಂದು ಹೇಳಿದೆ. 9/11 ದಾಳಿ ಎಂದೇ ಕುಖ್ಯಾತಿಯಾದ ಅಮೆರಿಕದ ಅವಳಿ ಕಟ್ಟಡಗಳ ಧ್ವಂಸದ ಮಾಸ್ಟರ್ಮೈಂಡ್ ಜವಾಹಿರಿಯನ್ನು ಅದರ ಸೇನಾಪಡೆಗಳು ಬೆಂಬತ್ತಿದ್ದವು. ಹಲವು ವರ್ಷಗಳಿಂದ ಅಜ್ಞಾತವಾಸದಲ್ಲಿದ್ದ ಉಗ್ರನನ್ನು ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಇರುವುದನ್ನು ಪತ್ತೆ ಮಾಡಲಾಗಿತ್ತು.
ಅದರಂತೆ ನಿಖರ ದಾಳಿ ರೂಪಿಸಿ ಡ್ರೋನ್ ಮೂಲಕ ಜುಲೈ 31 ರಂದು ಜವಾಹಿರಿಯನ್ನು ಉಡಾಯಿಸಲಾಯಿತು. ಅದರ ವಿಡಿಯೋವನ್ನು ಅಲ್ಖೈದಾ ಈಗ ಹಂಚಿಕೊಂಡಿದೆ. ದಾಳಿ ನಡೆದ ದಿನಾಂಕವನ್ನು ಮಾತ್ರ ಅದು ನಮೂದಿಸಿಲ್ಲ.