ಕಾಬೂಲ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಜಾರಿಗೆ ಬಂದ ನಂತರ ಅಲ್ಲಿನ ಜನತೆ ಹೊರ ಜಗತ್ತಿನ ಸಂಬಂಧ, ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ. ತೀವ್ರ ಆರ್ಥಿಕ ಮತ್ತು ರಾಜಕೀಯ ಅನಿಶ್ಚಿತತೆ ಎದುರಿಸುತ್ತಿರುವ ಅಫ್ಘಾನ್ನಲ್ಲಿ ಅದೆಷ್ಟೋ ಜನರ ಬದುಕು ಬೀದಿಗೆ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಪತ್ರಕರ್ತರು ಕೂಡ ನರಕಯಾತನೆ ಅನುಭವಿಸುತ್ತಿದ್ದಾರೆ. ತಾಲಿಬಾನ್ ಆಡಳಿತಕ್ಕೂ ಮುನ್ನ ಟಿವಿ ಆ್ಯಂಕರ್ ಆಗಿದ್ದ ವ್ಯಕ್ತಿಯೊಬ್ಬ ಈಗ ರಸ್ತೆ ಬದಿಯಲ್ಲಿ ಕುಳಿತು ಕುಟುಂಬ ನಿರ್ವಹಣೆಗಾಗಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಾರೆ.
ಪತ್ರಕರ್ತರಾಗಿ ಕೆಲವು ವರ್ಷಗಳ ಕೆಲಸ ಮಾಡಿದ್ದ ಮೂಸಾ ಮೊಹಮ್ಮದಿ ಎಂಬುವವರು ರಸ್ತೆಯಲ್ಲಿ ಕುಳಿತು ಆಹಾರ ಪದಾರ್ಥಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇದರ ಫೋಟೋಗಳನ್ನು ಈ ಹಿಂದೆ ಅಫ್ಘಾನ್ ಅಧ್ಯಕ್ಷರ ಕಾರ್ಯಾಲಯದಲ್ಲಿ ಕೆಲಸ ಮಾಡಿದ್ದ ಕಬೀರ್ ಹಕ್ಮಲ್ ಎಂಬುವವರು ಹಂಚಿಕೊಂಡಿದ್ದಾರೆ.