ಚಿಕಾಗೋ( ಅಮೆರಿಕ): ರೋಮ್ಗೆ ತೆರಳುತ್ತಿದ್ದ ಯುನೈಟೆಡ್ ಏರ್ಲೈನ್ಸ್ ವಿಮಾನದಲ್ಲಿ ಕ್ಯಾಬಿನ್ನಲ್ಲಿ ಉಂಟಾದ ಒತ್ತದಿಂದಾಗಿ ವಿಮಾನ ಒಮ್ಮೆಲೆ ಕೆಳಕ್ಕೆ ಇಳಿದಿದೆ. ಇದರಿಂದಾಗಿ ವಿಮಾನದಲ್ಲಿದ್ದ 270 ಪ್ರಯಾಣಿಕರು ಆತಂಕಕ್ಕೆ ಒಳಗಾದ ಘಟನೆ ಅಮೆರಿಕದಲ್ಲಿ ನಡೆದಿದೆ. ಇಂತಹ ಘಟನೆ ಆದ ಒಂದು ಗಂಟೆಯೊಳಗೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗುವ ಮೂಲಕ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ನೆವರ್ಕ್, ನ್ಯೂ ಜೆರ್ಸಿಯಿಂದ ಮರಳುತ್ತಿದ್ದ ವಿಮಾನವೂ ಗುರುವಾರ ಬೆಳಗ್ಗೆ ಸುರಕ್ಷಿತವಾಗಿ ಕೆಳಗೆ ಇಳಿದಿದೆ ಎಂದು ವಿಮಾನ ಯಾನ ಸಂಸ್ಥೆ ತಿಳಿಸಿದೆ. ಕ್ಯಾಬಿನ್ ಒತ್ತಡ ಸಂಭವಿಸಿದಾಗ, ಪ್ರಯಾಣಿಕರಿಗೆ ಯಾವುದೇ ಅಪಾಯ ಆಗಿಲ್ಲ. ಈ ಹಿನ್ನಲೆ ಅವರು ಯಾವುದೇ ಆಮ್ಲಜನಕದ ಮಾಸ್ಕ್ ಅನ್ನು ಧರಿಸಲಿಲ್ಲ. ಆದರೆ, ಈ ಒತ್ತಡ ನಿರ್ವಹಣೆಯನ್ನು ನಿರ್ವಹಿಸುವ ಉದ್ದೇಶದಿಂದ ಪೈಲಟ್ಗಳು ವಿಮಾನ ಹಾರಾಟದ ಎತ್ತರ 10 ಸಾವಿರ ಅಡಿಗಳಷ್ಟು ಕೆಳಕ್ಕೆ ಇಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೋಯಿಂಗ್ 777 ವಿಮಾನವೂ 37,000 ಅಡಿಗಳ ಮೇಲೆ ಹಾರಾಡುತ್ತಿದ್ದು, ಎಂಟು ನಿಮಿಷದಲ್ಲಿ 9,000 ಅಡಿ ಕೆಳಗೆ ಇಳಿದಿದೆ ಎಂದು ವಿಮಾನವನ್ನು ಟ್ರಾಕ್ಕಿಂಗ್ ಮಾಹಿತಿ ಕೇಂದ್ರ ವಿವರಣೆ ನೀಡಿದೆ. ವಿಮಾನ ಮೇಲೆ ಏರಿದಂತೆ ಹೊರಗಿನ ಗಾಳಿಯ ಒತ್ತಡ ಕಡಿಮೆ ಇರುತ್ತದೆ. ಈ ವೇಳೆ ವಿಮಾನ ನಿಧಾನವಾಗಿ ಈ ಗಾಳಿಯ ಒತ್ತಡವನ್ನು ಸುಧಾರಿಸುತ್ತದೆ. ಈ ಗಾಳಿಯ ಒತ್ತಡ ನಷ್ಟವಾದಾಗ ಆಮ್ಲಜನಕದ ಕೊರತೆಯಾಗಿ, ಪ್ರಯಾಣಿಕರಿಗೆ ಆಮ್ಲಜನಕದ ಮಾಸ್ಕ್ ಧರಿಸುವಂತೆ ಸೂಚಿಸಲಾಗುವುದು. ಆದರೆ ತರಬೇತಿ ಪಡೆದ ಪೈಲಟ್ಗಳು ಈ ಕ್ಯಾಬಿನ್ ಒತ್ತಡ ಕಳೆದುಕೊಂಡಾಗ ಸಮಯೋಚಿತವಾಗಿ ಪ್ರತಿಕ್ರಿಯಿಸಿದ್ದು, ವಿಮಾನವನ್ನು ಕೆಳಗೆ ಇಳಿಸುವ ಮೂಲಕ ಪ್ರಯಾಣಿಕರಿಗೆ ಆಮ್ಲಜನಕದ ಮಾಸ್ಕ್ ಇಲ್ಲದೇ, ಉಸಿರಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇನ್ನು ಈ ವಿಮಾನದಲ್ಲಿ 270 ಪ್ರಾಯಾಣಿಕರು, 14 ಮಂದಿ ಸಿಬ್ಬಂದಿ ಇದ್ದರು ಎಂದು ಏರ್ಲೈನ್ಸ್ ಮಾಹಿತಿ ನೀಡಿದೆ.