ಕರ್ನಾಟಕ

karnataka

ETV Bharat / international

ಸ್ಟೇಡಿಯಂನೊಳಗೆ ರೈಲು ಬರುತ್ತೆ, ಆಟ ನಡೀತಾ ಇರುತ್ತೆ.. ಎಲ್ಲಿದೆ ಗೊತ್ತಾ ಈ ಸ್ಟೇಡಿಯಂ?

ಕ್ರೀಡಾಂಗಣದೊಳಗೆ ರೈಲು ಸಂಚಾರ ಸ್ಲೋವಾಕಿಯಾಕ್ಕೆ ಬೇಸಿಗೆ ಕಾಲದಲ್ಲಿ ಅತಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. 17 ಕಿಮೀ ಉದ್ದದ ರೈಲು ಪ್ರಯಾಣವು ನಿಮ್ಮನ್ನು ಎತ್ತರದ ಪರ್ವತಗಳು ಮತ್ತು ಐತಿಹಾಸಿಕ ಸ್ಥಳಗಳ ಮೂಲಕ ಕರೆದೊಯ್ಯುತ್ತದೆ. ಇದರಲ್ಲಿ ಕ್ರೀಡಾಂಗಣದ ಒಳಗೆ ರೈಲು ಹಾದು ಹೋಗುವುದು ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತದೆ. ಮತ್ತಷ್ಟು ತಿಳಿಯಲು ಮುಂದೆ ಓದಿ!

train comes inside the stadium
train comes inside the stadium

By

Published : Aug 18, 2022, 12:20 PM IST

ಸ್ಲೋವಾಕಿಯಾ: ಅದೊಂದು ಫುಟ್ಬಾಲ್ ಕ್ರೀಡಾಂಗಣ. ಅಲ್ಲಿ ಎರಡು ತಂಡಗಳ ನಡುವೆ ಪಂದ್ಯ ನಡೆಯುತ್ತಿದೆ. ಕ್ರೀಡಾಭಿಮಾನಿಗಳೆಲ್ಲ ಸ್ಟ್ಯಾಂಡ್‌ನಲ್ಲಿ ಕುಳಿತು ತದೇಕಚಿತ್ತದಿಂದ ಸ್ಪರ್ಧೆ ವೀಕ್ಷಿಸುತ್ತಿದ್ದಾರೆ. ಅಷ್ಟರಲ್ಲಿ ಒಂದು ರೈಲು ಸಿಳ್ಳೆ ಹಾಕುತ್ತಾ ಹೊಗೆ ಉಗುಳುತ್ತಾ ಸ್ಟೇಡಿಯಂ ಒಳಗಡೆ ನುಗ್ಗಿತು. ಆದರೆ, ಅವರ್ಯಾರೂ ಹೆದರಲಿಲ್ಲ. ಆಡುವವರು ಆಡುತ್ತಿದ್ದಾರೆ.. ನೋಡುವವರು ನೋಡುತ್ತಿದ್ದಾರೆ.. ಕ್ರೀಡಾಂಗಣದೊಳಗಿರುವ ಹಳಿ ಮೇಲೆ ರೈಲು ಕೂಡ ಮುಂದೆ ಸಾಗುತ್ತಿದೆ. ಏನಿದೆಲ್ಲ? ಎಲ್ಲವೂ ಗೊಂದಲಮಯವಾಗಿದೆಯಲ್ಲವೆ? ಇದೊಂದು ಇಂಟರೆಸ್ಟಿಂಗ್ ಸ್ಟೋರಿ.

ಸ್ಟೇಡಿಯಂನೊಳಗೆ ಓಡುತ್ತಿರುವ ರೈಲು

ಐರೋಪ್ಯ ದೇಶವಾದ ಸ್ಲೋವಾಕಿಯಾದಲ್ಲಿ ಸಿರ್ನಿ ಬಾಲೋಗ್ ಎಂಬ ಪಟ್ಟಣವಿದೆ. ಇಲ್ಲಿ ಸುಮಾರು ಐದು ಸಾವಿರ ಜನ ವಾಸಿಸುತ್ತಿದ್ದಾರೆ. ಆ ಊರಿಗೆ ಈಗ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಇಲ್ಲಿನ ಫುಟ್ಬಾಲ್ ಸ್ಟೇಡಿಯಂ ಒಳಗಿರುವ ಹಳಿಯ ಮೇಲೆ ರೈಲುಗಳು ಓಡುವುದನ್ನು ನೋಡಲು ವಿಶ್ವದ ಎಲ್ಲ ಕಡೆಯಿಂದ ಪ್ರವಾಸಿಗರು ಈಗ ಇಲ್ಲಿಗೆ ಆಗಮಿಸುತ್ತಿದ್ದಾರೆ.

ನಾಲ್ಕು ದಶಕಗಳ ಹಿಂದೆ ಏನಾಗಿತ್ತು?:1980 ರ ಸುಮಾರಿಗೆ ಸಿರ್ನಿ ಬಾಲೋಗ್ ಪಟ್ಟಣದಲ್ಲಿ ಫುಟ್ಬಾಲ್ ಕ್ರೀಡಾಂಗಣವೊಂದನ್ನು ನಿರ್ಮಿಸಲಾಗಿತ್ತು. ಕ್ರೀಡಾಂಗಣ ನಿರ್ಮಾಣವಾದ ಜಾಗದಲ್ಲಿ ಬಳಕೆ ಮಾಡದ ರೈಲ್ವೆ ಹಳಿಯೊಂದಿತ್ತು. ಈ ಹಳಿ ಮತ್ತು ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸಿ ಕ್ರೀಡಾಂಗಣ ನಿರ್ಮಿಸಲಾಗಿತ್ತು. ರೈಲ್ವೆ ಹಳಿ ಬಳಕೆಯಲ್ಲಿಲ್ಲದ ಕಾರಣ ಆಗ ಯಾರೂ ಅದರ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಅದಾಗಿ ಹತ್ತು ವರ್ಷಗಳು ಕಳೆದ ನಂತರ 1990 ರ ದಶಕದಲ್ಲಿ, ಸರ್ಕಾರದ ಆದೇಶದಂತೆ ಅಧಿಕಾರಿಗಳು ದೇಶದಲ್ಲಿ ರೈಲು ಹಳಿಗಳ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡರು. ಹೀಗಾಗಿ 1992 ರಲ್ಲಿ ಫುಟ್ಬಾಲ್ ಕ್ರೀಡಾಂಗಣದಲ್ಲಿನ ಹಳಿಯನ್ನು ಅನ್ನು ಸಹ ನವೀಕರಿಸಲಾಯಿತು. ಜೊತೆಗೆ ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಲು ನಿರ್ಧರಿಸಲಾಯಿತು.

ವಿಶೇಷ ಆಕರ್ಷಣೆ:ಸ್ಲೋವಾಕಿಯಾಕ್ಕೆ ಬೇಸಿಗೆ ಕಾಲದಲ್ಲಿ ಅತಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. 17 ಕಿಮೀ ಉದ್ದದ ರೈಲು ಪ್ರಯಾಣವು ನಿಮ್ಮನ್ನು ಎತ್ತರದ ಪರ್ವತಗಳು ಮತ್ತು ಐತಿಹಾಸಿಕ ಸ್ಥಳಗಳ ಮೂಲಕ ಕರೆದೊಯ್ಯುತ್ತದೆ. ಇದರಲ್ಲಿ ಕ್ರೀಡಾಂಗಣದ ಒಳಗೆ ರೈಲು ಹಾದು ಹೋಗುವುದು ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತದೆ.

ಆಟದ ಮೈದಾನ ಸ್ಟ್ಯಾಂಡ್ ಗಳ ಮಧ್ಯೆ ಇರುವ ಟ್ರ್ಯಾಕ್ ಮೇಲೆ ರೈಲು ಬಂದರೂ ಆಟಗಾರರು, ಪ್ರೇಕ್ಷಕರು ಯಾವುದೇ ಸಮಸ್ಯೆಯಿಲ್ಲದೆ ತಮ್ಮ ಆಟದಲ್ಲಿ ಮಗ್ನರಾಗಬಹುದು. ಇನ್ನೊಂದು ವಿಶೇಷವೆಂದರೆ ಈ ಟ್ರ್ಯಾಕ್ ಅನ್ನು ಮೊದಲ ಮಹಾಯುದ್ಧದ ಸಮಯದಲ್ಲಿ ನಿರ್ಮಿಸಲಾಗಿದೆ. ಮರ, ಆಹಾರ ಮತ್ತು ಇತರ ವಸ್ತುಗಳನ್ನು ಈ ಹಳಿಯ ಮೂಲಕ ಸಾಗಿಸಲಾಗುತ್ತಿತ್ತು.

ಇತ್ತೀಚೆಗಷ್ಟೇ ಪಂದ್ಯ ನಡೆಯುತ್ತಿರುವಾಗಲೇ ರೈಲು ಬರುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ನೆಟಿಜನ್‌ಗಳು ಕೂಡ ವಿವಿಧ ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸುವ ಮೂಲಕ ಆಶ್ಚರ್ಯಚಕಿತರಾಗಿದ್ದಾರೆ. ಜಗತ್ತಿನಲ್ಲಿ ಬೇರೆಲ್ಲೂ ಇಂಥ ಕ್ರೀಡಾಂಗಣ ಇಲ್ಲ ಎನ್ನುತ್ತಾರೆ ನೆಟಿಜೆನ್ಸ್​.

ಇದನ್ನು ಓದಿ:ಅವರಿಗೆ 99.. 100ನೇ ಮರಿಮೊಮ್ಮಗನನ್ನು ನೋಡಿದ ಭಾಗ್ಯಶಾಲಿ ವೃದ್ಧೆ

ABOUT THE AUTHOR

...view details