ಕೊಲಂಬೊ:ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ಇಂಧನ ಕೊರತೆ ವಿಪರೀತವಾಗಿದೆ. ವಾರಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಪೆಟ್ರೋಲ್, ಡೀಸೆಲ್ ಪಡೆಯಬೇಕಿದೆ. ಹೀಗೆ ಸರತಿಯಲ್ಲಿ 5 ದಿನಗಳಿಂದ ಕಾದಿದ್ದ ವ್ಯಕ್ತಿಯೊಬ್ಬ ತನ್ನ ವಾಹನದಲ್ಲೇ ಮೃತಪಟ್ಟಿದ್ದಾನೆ. ಇದು ಇಂಧನಕ್ಕಾಗಿ ಕಾದು ಮೃತಪಟ್ಟ 10ನೇ ಸಾವು ಎಂಬುದು ಆಘಾತಕಾರಿ ಸುದ್ದಿ.
ದೇಶದ ಪಶ್ಚಿಮ ಪ್ರಾಂತ್ಯದ ಪೆಟ್ರೋಲ್ ಬಂಕ್ ಬಳಿ 63 ವರ್ಷದ ವ್ಯಕ್ತಿಯೊಬ್ಬ 5 ದಿನಗಳಿಂದ ಸರದಿಯಲ್ಲಿ ಕಾದಿದ್ದ. ಈ ವೇಳೆ ವ್ಯಕ್ತಿ ತನ್ನ ವಾಹನದೊಳಗೆ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರತಿ ಸಾಲಿನಲ್ಲಿ ಕಾದು ಸಾವನ್ನಪ್ಪಿದವರ ಸಂಖ್ಯೆ 10ಕ್ಕೇರಿದೆ. ಎಲ್ಲರೂ 43 ರಿಂದ 84 ವರ್ಷ ವಯಸ್ಸಿನವರು. ಹೆಚ್ಚಿನ ಸಾವುಗಳು ಹೃದಯ ಸ್ತಂಭನದಿಂದ ಸಂಭವಿಸಿವೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.