ಕರ್ನಾಟಕ

karnataka

ETV Bharat / international

ಚಾಲಕನ ನಿಯಂತ್ರಣ ತಪ್ಪಿ ಟ್ರಕ್​ಗೆ ಡಿಕ್ಕಿಯಾದ ಬಸ್: 7 ಮಂದಿ ದುರ್ಮರಣ - ನೈಜೀರಿಯಾದಲ್ಲಿ ಏಳು ಮಂದಿ ಸಾವು

ನೈಜೀರಿಯಾದ ನೈರುತ್ಯ ರಾಜ್ಯವಾದ ಓಗುನ್‌ನಲ್ಲಿ ಶುಕ್ರವಾರ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡು ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

7 killed, 5 injured in Nigeria road accident
ಚಾಲಕನ ನಿಯಂತ್ರಣ ತಪ್ಪಿ ಟ್ರಕ್​ಗೆ ಡಿಕ್ಕಿಯಾದ ಬಸ್: 7 ಮಂದಿ ದುರ್ಮರಣ

By

Published : Apr 30, 2022, 11:01 AM IST

ಅಬುಜಾ(ನೈಜೀರಿಯಾ): ಬಸ್ ಚಾಲಕ ನಿಯಂತ್ರಣ ಕಳೆದುಕೊಂಡು ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸಾವನ್ನಪ್ಪಿ, ಐವರು ಗಾಯಗೊಂಡಿರುವ ಘಟನೆ ನೈಜೀರಿಯಾದ ನೈರುತ್ಯ ರಾಜ್ಯವಾದ ಓಗುನ್‌ನಲ್ಲಿ ಶುಕ್ರವಾರ ಸಂಭವಿಸಿದೆ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಓಗುನ್‌ನಲ್ಲಿರುವ ಫೆಡರಲ್ ರೋಡ್ ಸೇಫ್ಟಿ ಕಾರ್ಪ್ಸ್ (ಎಫ್‌ಆರ್‌ಎಸ್‌ಸಿ) ಸೆಕ್ಟರ್ ಕಮಾಂಡರ್ ಅಹ್ಮದ್ ಉಮರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಬಸ್ ಚಾಲಕನು ತನ್ನ ವಾಹನದ ನಿಯಂತ್ರಣ ಕಳೆದುಕೊಂಡಿದ್ದು, ಎಕ್ಸ್‌ಪ್ರೆಸ್‌ವೇಯಲ್ಲಿ ಚಲಿಸುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮೃತಪಟ್ಟವರಲ್ಲಿ ಆರು ಮಂದಿ ಪುರುಷರು ಮತ್ತು ಓರ್ವ ಮಹಿಳೆ ಸೇರಿದ್ದಾಳೆ. ಗಾಯಗೊಂಡವರೆಲ್ಲರೂ ಪುರುಷರಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಅಪಘಾತದ ಸಮಯದಲ್ಲಿ ಮಳೆಯಾಗುತ್ತಿದ್ದ ಕಾರಣದಿಂದ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಒಂದು ವೇಳೆ ಬಸ್ ಚಾಲಕ ವೇಗವಾಗಿ ಬಸ್ ಚಾಲನೆ ಮಾಡದಿದ್ದರೆ, ಅಪಘಾತ ತಪ್ಪಿಸಬಹುದಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೈಜೀರಿಯಾದಲ್ಲಿ ಇಂತಹ ರಸ್ತೆ ಅಪಘಾತಗಳು ಸಾಮಾನ್ಯವಾಗಿರುತ್ತದೆ. ಓವರ್‌ಲೋಡ್, ಕೆಟ್ಟ ರಸ್ತೆಗಳು ಮತ್ತು ಅಜಾಗರೂಕ ಚಾಲನೆಯಿಂದ ಆಗಾಗ ಇಲ್ಲಿ ಅಪಘಾತಗಳು ಉಂಟಾಗುತ್ತಿರುತ್ತವೆ. ಪ್ರಾಣಹಾನಿ ತಪ್ಪಿಸಲು ವಾಹನ ಸವಾರರು ಅತಿ ವೇಗ ಮತ್ತು ಅಜಾಗರೂಕ ಚಾಲನೆ ಮಾಡಬಾರದೆಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ಕೊನೆಯ ಕ್ಷಣದಲ್ಲಿ ಅಮೆರಿಕದ ಬ್ಯಾಂಕ್​ನ ಬಾಂಡ್​ಗಳ ಮೇಲಿನ ಸಾಲ ಪಾವತಿಸಿದ ರಷ್ಯಾ

ABOUT THE AUTHOR

...view details