ಅಬುಜಾ(ನೈಜೀರಿಯಾ):ನೈಜೀರಿಯಾದಲ್ಲಿ ವಿನಾಶಕಾರಿ ಪ್ರವಾಹ ಎದುರಾಗಿದೆ. ಭಾರಿ ಮಳೆಯಿಂದಾಗಿ ಉಂಟಾದ ಜಲಪ್ರಳಯಕ್ಕೆ ಈವರೆಗೂ 600 ಕ್ಕೂ ಅಧಿಕ ಜನರು ಜಲಾಸ್ವಾಹವಾಗಿದ್ದಾರೆ. ಅಲ್ಲದೇ, 2 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. ನೈಜೀರಿಯಾದ ಮೇಲೆ ಎರಗಿರುವ ಈ ಪ್ರವಾಹ ಕಳೆದೊಂದು ದಶಕದಲ್ಲೇ ಅತಿ ಭೀಕರವಾಗಿದೆ. ದೇಶದ 36 ರಾಜ್ಯಗಳ ಪೈಕಿ 27 ರಾಜ್ಯಗಳು ಜಲಪ್ರಳಯಕ್ಕೆ ತುತ್ತಾಗಿವೆ.
ವಿಪತ್ತು ನಿರ್ವಹಣೆಯ ಪ್ರಕಾರ, ಪಶ್ಚಿಮ ಆಫ್ರಿಕಾದ ರಾಷ್ಟ್ರದಲ್ಲಿ ಇತ್ತೀಚಿನ ಪ್ರವಾಹಗಳಲ್ಲಿ ಇದು ಅಪಾರ ಹಾನಿ ಉಂಟು ಮಾಡಿದೆ. ಭೀಕರ ಪ್ರವಾಹದಿಂದ ದೇಶ ವಿಪತ್ತಿಗೆ ಒಳಗಾಗಿದೆ. ಹೆಚ್ಚಿನ ರಾಜ್ಯಗಳು ಪ್ರವಾಹದ ಮುನ್ನೆಚ್ಚರಿಕೆಗಳ ಹೊರತಾಗಿಯೂ ಎದುರಿಸುವ ಶಕ್ತಿ ಹೊಂದಿಲ್ಲ.
2 ಲಕ್ಷ ಜನರ ಸ್ಥಳಾಂತರ:ಹೆಚ್ಚಿನ ಪ್ರದೇಶಗಳು ಜಲಪ್ರವಾಹಕ್ಕೆ ತುತ್ತಾಗಿವೆ. ಅಪಾಯಕಾರಿ ಸ್ಥಳಗಳಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲಾಗಿದೆ. ದೇಶಾದ್ಯಂತ 600 ಜನರು ಪ್ರಾಣ ಕಳೆದುಕೊಂಡಿದ್ದಾರೆ. 2 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಲ್ಲಿನ ಸಚಿವರೊಬ್ಬರು ಮಾಹಿತಿ ನೀಡಿದ್ದಾರೆ.