ಮೆಕ್ಸಿಕೋ ಸಿಟಿ (ಮೆಕ್ಸಿಕೋ): ಮಧ್ಯ ಮೆಕ್ಸಿಕೋದ ಕರಾವಳಿಯಲ್ಲಿ 6.3 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಸೋಮವಾರ ಮಾಹಿತಿ ನೀಡಿದೆ.
ಭೂಕಂಪನದ ತೀವ್ರತೆ 6.3 ರಷ್ಟು ಇತ್ತು ಎಂದು ಎನ್ಸಿಎಸ್ ತಿಳಿಸಿದ್ದು, ಜೂನ್ 19 ಸೋಮವಾರ ನಡುರಾತ್ರಿ 2 ಗಂಟೆಗೆ ಈ ಕಂಪನ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿದೆ. ಆಫ್ ಕೋಸ್ಟ್ ಆಫ್ ಸೆಂಟ್ರಲ್ ಮೆಕ್ಸಿಕೋದಲ್ಲಿ ಭೂಕಂಪನ ಕೇಂದ್ರವಿದ್ದು, 10 ಕಿಮೀ ಆಳದಲ್ಲಿ ಇದು ಸಂಭವಿಸಿದೆ. ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ. ತಕ್ಷಣಕ್ಕೆ ಯಾವುದೇ ಸಾವು ನೋವಿನ ವರದಿ ಆಗಿಲ್ಲ.
ಭೂಕಂಪವು ಬಾಜಾ ಕ್ಯಾಲಿಫೋರ್ನಿಯಾ ಸುರ್ ಮತ್ತು ಸೊನೊರಾ ರಾಜ್ಯಗಳ ನಡುವಣ ಪ್ರದೇಶದ ಲೊರೆಟೊದ ಉತ್ತರ - ಈಶಾನ್ಯಕ್ಕೆ ಸುಮಾರು 48 ಮೈಲುಗಳು ಅಂದರೆ ಸುಮಾರು 78 ಕಿಲೋಮೀಟರ್ ನಲ್ಲಿ ಕೇಂದ್ರೀಕೃತವಾಗಿದೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ಹೇಳಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಈ ಪ್ರದೇಶವು ಸಣ್ಣ ಪಟ್ಟಣಗಳು ಮತ್ತು ಮೀನುಗಾರಿಕೆ ಪ್ರದೇಶದಿಂದ ಕೂಡಿದೆ. ಹಳ್ಳಿಗಳಿಂದ ಕೂಡಿದ ಕರಾವಳಿಯಾಗಿದ್ದು, ಕಡಲತೀರದ ಕ್ಯಾಂಪ್‌ಸೈಟ್‌ಗಳಲ್ಲಿ ಮನರಂಜನೆಗೆ ಹೆಸರು ವಾಸಿಯಾಗಿದೆ. ಇಲ್ಲಿ ಹೆಚ್ಚಿ ಅಮೆರಿಕದ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ ಎಂದು ವರದಿಯಾಗಿದೆ.