ಕರ್ನಾಟಕ

karnataka

ETV Bharat / international

ರಷ್ಯಾದ ಶಾಲೆಯಲ್ಲಿ ಗುಂಡಿನ ಸದ್ದು.. ಶಿಕ್ಷಕ, ಮಕ್ಕಳ ಸೇರಿ 9 ಜನರ ಹತ್ಯೆ - ಈಟಿವಿ ಭಾರತ ಕನ್ನಡ ನ್ಯೂಸ್​

ರಷ್ಯಾದ ಶಾಲೆಯಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಅಪರಿಚಿತ ದಾಳಿಕೋರ ಶಿಕ್ಷಕರು ಮತ್ತು ಮಕ್ಕಳ ಮೇಲೆ ಗುಂಡು ಹಾರಿಸಿ 9 ಜನರನ್ನು ಹತ್ಯೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

6-dead-20-wounded-in-school-shooting-in-russia
ರಷ್ಯಾದ ಶಾಲೆಯಲ್ಲಿ ಗುಂಡಿನ ಸದ್ದು

By

Published : Sep 26, 2022, 3:21 PM IST

ಮಾಸ್ಕೋ:ರಷ್ಯಾದ ಶಾಲೆಯೊಂದರಲ್ಲಿ ಭೀಕರ ಶೂಟೌಟ್​ ನಡೆದಿದೆ. ಇದರಲ್ಲಿ ಶಿಕ್ಷಕರು ಮತ್ತು ಮಕ್ಕಳು ಸೇರಿದಂತೆ 9 ಜನರು ಮೃತಪಟ್ಟಿದ್ದಾರೆ. ಗುಂಡಿನ ದಾಳಿ ನಡೆಸಿದ ಬಳಿಕ ಅಪರಿಚಿತ ದಾಳಿಕೋರ ತಾನೂ ಗುಂಡು ಹಾರಿಸಿಕೊಂಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಧ್ಯ ರಷ್ಯಾದ ಇಝೆವ್ಸ್ಕ್ ನಗರದ ಶಾಲೆಯ ಮೇಲೆ ಅಪರಿಚಿತ ದಾಳಿಕೋರ ಏಕಾಏಕಿ ಗುಂಡಿನ ಸುರಿಮಳೆಗರೆದಿದ್ದಾನೆ. ಗುಂಡೇಟಿಗೆ ಇಬ್ಬರು ಭದ್ರತಾ ಸಿಬ್ಬಂದಿ, ಇಬ್ಬರು ಶಿಕ್ಷಕರು ಮತ್ತು ಐದು ಚಿಕ್ಕ ಮಕ್ಕಳು ಸಾವಿಗೀಡಾಗಿದ್ದಾರೆ.

ತನಿಖಾಧಿಕಾರಿಗಳ ಪ್ರಕಾರ, ದಾಳಿಕೋರ ನಾಜಿ ಪಂಥದವನಾಗಿದ್ದು, ನಾಜಿ ಚಿಹ್ನೆಗಳು ಮತ್ತು ಬಾಲಾಕ್ಲಾವಾ ಹೊಂದಿರುವ ಕಪ್ಪು ಬಟ್ಟೆಯನ್ನು ಧರಿಸಿದ್ದ. ಈತನ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಯಾವುದೇ ನಿಖರ ಗುರುತಿನ ಚಿಹ್ನೆಗಳು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ಗುಂಡಿನಮ ದಾಳಿಯಲ್ಲಿ ಸುಮಾರು 20 ಮಕ್ಕಳು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಷ್ಯಾದ ಭದ್ರತಾ ಸಚಿವಾಲಯ ತಿಳಿಸಿದೆ.

ಓದಿ:ಳಹಾವು ಹಿಡಿಯಲು ಹೋದ ಪೂಜಾರಿಗೆ ಕಚ್ಚಿದ ಸರ್ಪ: ಉರಗ ರಕ್ಷಕ ಸಾವು

ABOUT THE AUTHOR

...view details