ಮೆಟ್ರೋ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಕಾಮನ್. ಅದರಲ್ಲೂ ವಾಹನ ನಿಲ್ಲಿಸಲು ಸ್ಥಳ ಕಂಡುಹಿಡಿಯುವುದಂತೂ ಇನ್ನೊಂದು ದೊಡ್ಡ ಸವಾಲಿನ ಕೆಲಸ. ಅದಕ್ಕಾಗಿಯೇ ಕಾರ್ಪೊರೇಟ್ ಕಚೇರಿಗಳು, ಕಾಂಪ್ಲೆಕ್ಸ್ಗಳು ಮತ್ತು ಶಾಪಿಂಗ್ ಮಾಲ್‌ಗಳು ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ವಿಶೇಷ ಶುಲ್ಕವನ್ನು ವಿಧಿಸುತ್ತವೆ.
ಪಾರ್ಕಿಂಗ್ ಶುಲ್ಕವು ನಗರ ಮತ್ತು ನಗರ ಪ್ರದೇಶಗಳಲ್ಲಿನ ದಟ್ಟಣೆಯನ್ನು ಅವಲಂಬಿಸಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಭಿನ್ನವಾಗಿರುತ್ತದೆ. ಆದರೆ, ಅಮೆರಿಕದ ಅತ್ಯಂತ ದುಬಾರಿ ನಗರ ಎಂದು ಹೇಳಲಾಗುವ ನ್ಯೂಯಾರ್ಕ್‌ನಲ್ಲಿ ಪಾರ್ಕಿಂಗ್ ಜಾಗಕ್ಕೆ ತೆರಬೇಕಾದ ಬೆಲೆ ಕೇಳಿದ್ರೆ ನೀವು ಬೆಚ್ಚಿಬೀಳುವಂತಿದೆ.
ಇದನ್ನೂ ಓದಿ:ದೇಶದ ಅಗ್ಗದ ಎಲೆಕ್ಟ್ರಿಕ್ ಕಾರು ಬಿಡುಗಡೆ.. ಒಮ್ಮೆ ಚಾರ್ಜ್ ಮಾಡಿ 200 ಕಿಮೀ ದೂರ ಕ್ರಮಿಸಿ
ಇತ್ತೀಚೆಗೆ, ಸಿಎನ್‌ಬಿಸಿ ಒಂದು ವರದಿ ಬಿಡುಗಡೆ ಮಾಡಿದ್ದು, 16 ಮಿಲಿಯನ್ ಡಾಲರ್ ದುಬಾರಿ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳವನ್ನು ಏಳೂವರೆ ಮಿಲಿಯನ್ ಡಾಲರ್‌ಗಳಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಿದೆ. ಅಂದರೆ ಸುಮಾರು ಆರು ಕೋಟಿ ರೂಪಾಯಿ. ಅಂದಹಾಗೆ, ಇಲ್ಲಿ ನೆಲದ ಮೇಲೆ ವಾಹನಗಳನ್ನು ನಿಲುಗಡೆ ಮಾಡುವುದಿಲ್ಲ. ಕಾರುಗಳನ್ನು ಎತ್ತುವ ಮತ್ತು ಕ್ಯಾಬಿನ್‌ಗಳಲ್ಲಿ ಇರಿಸುವ ಸ್ವಯಂಚಾಲಿತ ಪಾರ್ಕಿಂಗ್ ವ್ಯವಸ್ಥೆ ಇದೆ. ಹೀಗಾಗಿ, ಹೆಚ್ಚು ಪಾರ್ಕಿಂಗ್ ಶುಲ್ಕ ಪಾವತಿಸಲಾಗುತ್ತಿದೆ ಎಂದು ವರದಿಯಲ್ಲಿ ಹೇಳಿದೆ.