ಕರ್ನಾಟಕ

karnataka

By

Published : May 6, 2022, 3:43 PM IST

ETV Bharat / international

ಆರು ಅಂತಸ್ತಿನ ಕಟ್ಟಡ ಕುಸಿದು 53 ಜನ ಸಾವು, 10 ಜನರ ರಕ್ಷಣೆ.. ಶೋಧ ಕಾರ್ಯ ಮುಕ್ತಾಯ

ಮಧ್ಯ ಚೀನಾದಲ್ಲಿ ಒಂದು ವಾರದ ಹಿಂದೆ ಕಟ್ಟಡ ಕುಸಿದು ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಅವಶೇಷಗಳಡಿ ಸಿಲುಕಿದ್ದ ಜನರನ್ನು ಕಾಪಾಡಲಾಗಿದೆ. ಸದ್ಯ ಈ ಶೋಧ ಕಾರ್ಯಾಚರಣೆ ಮುಕ್ತಾಯಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

China building collapse  Death toll in building collapse  search for trapped ends  ಮಧ್ಯ ಚೀನಾದಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿದು ಜನ ಸಾವು  ಚಾಂಗ್ಶಾ ನಗರದಲ್ಲಿ ಹಠಾತ್ತನೆ ಕುಸಿದು ಬಿದ್ದ ವಸತಿ ಮತ್ತು ವಾಣಿಜ್ಯ ಕಟ್ಟಡ  ಚಾಂಗ್ಶಾ ನಗರದಲ್ಲಿ ಶೋಧ ಕಾರ್ಯಾಚರಣೆ ಮುಕ್ತಾಯ
ಆರು ಅಂತಸ್ತಿನ ಕಟ್ಟಡ ಕುಸಿದು 53 ಜನ ಸಾವು

ಬೀಜಿಂಗ್:ಮಧ್ಯ ಚೀನಾದಲ್ಲಿ ಒಂದು ವಾರದ ಹಿಂದೆ ಕಟ್ಟಡ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 53 ಜನರು ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿ ಸುಮಾರು 10 ಜನರನ್ನು ಕಾಪಾಡಿದೆ. ಬೆಳಗಿನ ಜಾವ 3 ಗಂಟೆಗೆ ಅವಶೇಷಗಳಡಿ ಸಿಲುಕಿರುವ ಶೋಧ ಕಾರ್ಯಾಚರಣೆ ಕೊನೆಗೊಂಡಿದೆ ಎಂದು ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ ಅಂತಾ ರಾಜ್ಯ ಪ್ರಸಾರಕ ಚೀನಾ ಸೆಂಟ್ರಲ್ ಟೆಲಿವಿಷನ್ (ಸಿಸಿಟಿವಿ) ತಿಳಿಸಿದೆ.

ಏಪ್ರಿಲ್ 29 ರ ಮಧ್ಯಾಹ್ನ ಚಾಂಗ್ಶಾ ನಗರದಲ್ಲಿ ವಸತಿ ಮತ್ತು ವಾಣಿಜ್ಯ ಕಟ್ಟಡವು ಹಠಾತ್ತನೆ ಕುಸಿದು ಬಿದ್ದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡ ಸಂಕೇತಗಳ ನಿರ್ಲಕ್ಷ್ಯ ಅಥವಾ ನಿಯಮ ಉಲ್ಲಂಘನೆ ಮಾಡಿದ ಶಂಕೆಯ ಮೇಲೆ ಕನಿಷ್ಠ ಒಂಬತ್ತು ಜನರನ್ನು ಬಂಧಿಸಲಾಗಿದೆ.

ಓದಿ:ತೆಲಂಗಾಣ: ಎರಡಂತಸ್ತಿನ ಕಟ್ಟಡ ಕುಸಿದು ನಾಲ್ವರು ದುರ್ಮರಣ

ಸುಮಾರು ಐದೂವರೆ ದಿನ ನಡೆಸಿದ ಕಾರ್ಯಾಚರಣೆಯಲ್ಲಿ 10 ಜನರನ್ನು ಅವಶೇಷಗಳಡಿ ಸಿಲುಕಿದ್ದವರನ್ನು ಹೊರ ತೆಗೆಯಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಬದುಕುಳಿದವರೆಲ್ಲರೂ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.

ಬಂಧಿತರಲ್ಲಿ ಕಟ್ಟಡದ ಮಾಲೀಕರು, ಡಿಸೈನರ್​ ಮತ್ತು ನಿರ್ಮಾಣದ ಉಸ್ತುವಾರಿ ಹೊತ್ತಿರುವ ಮೂವರು ಹಾಗೂ ಕಟ್ಟಡದ ನಾಲ್ಕರಿಂದ ಆರನೇ ಮಹಡಿಯಲ್ಲಿರುವ ಅತಿಥಿ ಗೃಹಕ್ಕೆ ತಪ್ಪು ಸುರಕ್ಷತಾ ಮೌಲ್ಯಮಾಪನವನ್ನು ನೀಡಿದ ಐವರು ಸೇರಿದ್ದಾರೆ. ಕಟ್ಟಡದಲ್ಲಿ ಮನೆಗಳ ಜೊತೆ ಕೆಫೆ ಮತ್ತು ರೆಸ್ಟೋರೆಂಟ್ ಅನ್ನು ಸಹ ಹೊಂದಿತ್ತು. ಕಾರ್ಯಾಚರಣೆ ವೇಳೆ ಸಿಬ್ಬಂದಿಯರು ಶ್ವಾನಗಳು, ಕೈ ಉಪಕರಣಗಳು, ಡ್ರೋನ್‌ಗಳು ಮತ್ತು ಎಲೆಕ್ಟ್ರಾನಿಕ್ ಲೈಫ್ ಡಿಟೆಕ್ಟರ್‌ಗಳನ್ನು ಬಳಸಿ ಬದುಕುಳಿದವರನ್ನು ಹೊರ ತೆಗೆದರು.

ಓದಿ:ಗರ್ಭಪಾತ ವಿರೋಧಿಸಿ 60 ಅಂತಸ್ತಿನ ಕಟ್ಟಡ ಏರಿದ ಕಾರ್ಯಕರ್ತನ ಬಂಧನ

ಏಪ್ರಿಲ್​ 29ರಂದು ಚೀನಾದ ಹುನಾನ್ ಪ್ರಾಂತ್ಯದ ಚಾಂಗ್‌ಶಾ ನಗರದಲ್ಲಿ ಆರು ಅಂತಸ್ತಿನ ಕಟ್ಟಡ ಹಠಾತ್ತನೆ ಕುಸಿದು ಬಿದ್ದಿತ್ತು. ಆಗ ಹಲವರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುಮಾರು 23 ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿದ್ದರು ಎಂದು ವರದಿಯಾಗಿತ್ತು. ಈಗ ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿದ್ದವರನ್ನು ಹೊರ ತೆಗೆಯಲಾಗಿದ್ದು, ಶೋಧ ಕಾರ್ಯಾಚರಣೆ ಮುಕ್ತಾಯಗೊಂಡಿದೆ.


ABOUT THE AUTHOR

...view details