ಕರ್ನಾಟಕ

karnataka

ETV Bharat / international

ಟೈಟಾನಿಕ್ ಅವಶೇಷ ನೋಡಲು ತೆರಳಿದ ಬಿಲಿಯನೇರ್ ಸೇರಿ ಐವರು ಸಾವು: ಸಬ್‌ಮರ್ಸಿಬಲ್ ಸ್ಫೋಟಿಸಿ ದುರಂತ!!

ಟೈಟಾನಿಕ್ ಹಡಗಿನ ಅವಶೇಷಗಳನ್ನು ತೋರಿಸಿ ಪ್ರಯಾಣಿಕರನ್ನು ವಾಪಸ್ ಕರೆತರುವಾಗ ಟೈಟಾನ್ ಸಬ್‌ಮರ್ಸಿಬಲ್ ಸ್ಫೋಟಗೊಂಡಿದ್ದು, ಬಿಲಿಯನೇರ್‌ಗಳು ಸೇರಿ ಐವರು ಮೃತಪಟ್ಟಿದ್ದಾರೆ.

Titanic bound submersible
ಟೈಟಾನ್ ಸಬ್‌ಮರ್ಸಿಬಲ್

By

Published : Jun 23, 2023, 10:06 AM IST

ಒಟ್ಟಾವಾ (ಕೆನಡಾ) : ಉತ್ತರ ಅಟ್ಲಾಂಟಿಕ್ ಸಾಗರದ ಮೇಲ್ಮೈಯಿಂದ 3,800 ಮೀಟರ್‌ಗಳಷ್ಟು ಕೆಳಗಿರುವ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಹೋದ ಐವರು ಬಿಲಿಯನೇರ್‌ಗಳು ಮತ್ತು ಪರಿಶೋಧಕರು ದುರಂತ ಅಂತ್ಯ ಕಂಡಿದ್ದಾರೆ. ಈ ಕುರಿತು ಯುಎಸ್ ಕೋಸ್ಟ್ ಗಾರ್ಡ್ ಮಾಹಿತಿ ನೀಡಿದ್ದು, ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್ ನಿರ್ವಹಿಸುವ ಟೈಟಾನ್ ಸಬ್‌ಮರ್ಸಿಬಲ್ ಅಟ್ಲಾಂಟಿಕ್ ಸಾಗರದಲ್ಲಿ ಸ್ಫೋಟಗೊಂಡಿದೆ ಎಂದು ತಿಳಿಸಿದೆ.

ಯುಎಸ್ ಕೋಸ್ಟ್ ಗಾರ್ಡ್ ರಿಯರ್ ಅಡ್ಮಿರಲ್ ಜಾನ್ ಮೌಗರ್ ಅವರು ಮಾಹಿತಿ ನೀಡಿ, "ಸಬ್‌ಮರ್ಸಿಬಲ್ ಅನ್ನು ನಿರ್ವಹಿಸುವ ಯುಎಸ್ ಮೂಲದ ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್ ನೀಡಿದ ವರದಿಗಳ ಪ್ರಕಾರ ಟೈಟಾನಿಕ್ ಸಬ್‌ಮರ್ಸಿಬಲ್‌ನ ಐದು ಪ್ರಯಾಣಿಕರು ದುರಾದೃಷ್ಟವಶಾತ್​ ಮೃತಪಟ್ಟಿದ್ದಾರೆ ಎಂದು ನಂಬಲಾಗಿದೆ. ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸುತ್ತೇನೆ. ರಿಮೋಟ್​ ಚಾಲಿತ ವಾಹನವು (ROV- remotely operated vehicle) ಟೈಟಾನಿಕ್ ಸಬ್‌ಮರ್ಸಿಬಲ್‌ನ ಬಾಲ ಕೋನ್ ಅನ್ನು ಸಮುದ್ರ ತಳದಲ್ಲಿ ಟೈಟಾನಿಕ್ ಬಿಲ್ಲಿನಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಪತ್ತೆ ಹಚ್ಚಿದೆ" ಎಂದು ತಿಳಿಸಿದ್ದಾರೆ.

ಅಮೆರಿಕದ ಮೂಲದ ಕಂಪನಿ ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್ ಸಹ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದು, "ಟೈಟಾನಿಕ್-ಬೌಂಡ್ ಸಬ್‌ಮರ್ಸಿಬಲ್‌ನ ಐದು ಪ್ರಯಾಣಿಕರನ್ನು ನಾವು ಕಳೆದುಕೊಂಡಿದ್ದೇವೆ" ಎಂದು ತಿಳಿಸಿದೆ.

ದುರಂತ ಅಂತ್ಯ ಕಂಡ ಐವರು ಪ್ರಯಾಣಿಕರು ಯಾರು?: ಬಿಲಿಯನೇರ್ ಮತ್ತು ಅನ್ವೇಷಕರಾಗಿದ್ದ ಹಮೀಶ್ ಹಾರ್ಡಿಂಗ್​, ಫ್ರೆಂಚ್ ಪರಿಶೋಧಕ ಪಾಲ್-ಹೆನ್ರಿ ನರ್ಜಿಯೊಲೆಟ್ ಹಾಗೂ ಪ್ರಮುಖ ಪಾಕಿಸ್ತಾನಿ ಕುಟುಂಬದ ಸದಸ್ಯರಾದ ಶಹಜಾದಾ ದಾವೂದ್ ಮತ್ತು ಅವನ ಮಗ ಸುಲೇಮಾನ್ ದಾವೂದ್ ಮತ್ತು OceanGate Expeditions CEO ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಇದನ್ನೂ ಓದಿ :ಹಾಸನದ ಟೈಟಾನಿಕ್ ಹಡಗು ಖ್ಯಾತಿಯ ಚರ್ಚ್‌ಗೆ 369 ವಸಂತಗಳ ಸಂಭ್ರಮ

ಇನ್ನು "ಜೂನ್ 18 ರಂದು ಉತ್ತರ ಅಟ್ಲಾಂಟಿಕ್‌ನಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಹೋದ ಸಬ್‌ಮರ್ಸಿಬಲ್ ಹಡಗು ಭಾನುವಾರ ಮುಂಜಾನೆ ಪೂರ್ವ ಕೆನಡಾದ ನ್ಯೂಫೌಂಡ್‌ಲ್ಯಾಂಡ್ ಕರಾವಳಿಯಿಂದ 600 ಕಿಲೋಮೀಟರ್ ದೂರದಲ್ಲಿ ನಾಪತ್ತೆಯಾಗಿದೆ" ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ಇದನ್ನೂ ಓದಿ :ನಾಪತ್ತೆಯಾದ ಟೈಟಾನಿಕ್ ಜಲಾಂತರ್ಗಾಮಿಯಲ್ಲಿ ಕೆಲವೇ ಗಂಟೆಗಳಷ್ಟು ಮಾತ್ರ ಆಮ್ಲಜನಕ ಸಂಗ್ರಹ; ಭರದಿಂದ ಸಾಗಿದ ರಕ್ಷಣಾ ಕಾರ್ಯ

ಅಮೆರಿಕ ಕೋಸ್ಟ್ ಗಾರ್ಡ್ ಮತ್ತು ಕೆನಡಾ, ಯುಕೆ ಮತ್ತು ಫ್ರಾನ್ಸ್‌ನ ಆಳವಾದ ಸಮುದ್ರದ ನೀರಿನ ತಜ್ಞರ ತಂಡ ಜಂಟಿಯಾಗಿ ಜಲಾಂತರ್ಗಾಮಿ ಟೈಟಾನ್ ಸಬ್‌ಮರ್ಸಿಬಲ್‌ಗಾಗಿ ಭಾನುವಾರ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಆದರೂ ಐವರು ಪ್ರಯಾಣಿಕರನ್ನು ಉಳಿಸಲು ಸಾಧ್ಯವಾಗಿಲ್ಲ. ಜಲಾಂತರ್ಗಾಮಿ ಹಡಗು ಕಣ್ಮರೆಯಾದ ಪ್ರದೇಶದ ನೀರೊಳಗಿಂದ ಸೋನಾರ್ ಸಾಧನಗಳು ಹಾಗೂ ಮಂಗಳವಾರ ಮತ್ತು ಬುಧವಾರ ದೊಡ್ಡ ಶಬ್ದವೊಂದು ಕೇಳಿ ಬಂದಿದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ :159 ವರ್ಷಗಳ ಇತಿಹಾಸವಿರೋ ''ಟೈಟಾನಿಕ್''​ ನೋಡೋಕೆ ಪ್ರವಾಸಿಗರ ದಂಡು..!​

ABOUT THE AUTHOR

...view details