ಕರ್ನಾಟಕ

karnataka

ETV Bharat / international

ಪಾರ್ಟಿ ನಡೆಸುತ್ತಿದ್ದ ಜನರ ಮೇಲೆ ಗುಂಡಿನ ದಾಳಿ: ಐವರ ಸಾವು - ‘ಪಾರ್ಟಿ ನಡೆಸುತ್ತಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು

ಇಲ್ಲಿಯವರೆಗೆ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ. ಪಾರ್ಟಿಯಲ್ಲಿ ಮದ್ಯ ಸೇವಿಸುತ್ತಿದ್ದ ಈ ಜನರು, ಲಾ ಸಿಯುಡಾಡೆಲಾ ನೆರೆಹೊರೆಯಲ್ಲಿ ಪಾರ್ಟಿಯಲ್ಲಿದ್ದಾಗ ಇಬ್ಬರು ವ್ಯಕ್ತಿಗಳು ದಾಳಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

5 killed by unknown gunmen in Colombia
ಪಾರ್ಟಿ ನಡೆಸುತ್ತಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು: ಐವರ ಸಾವು

By

Published : Aug 1, 2022, 8:17 AM IST

ಬೊಗೋಟಾ( ಕೊಲಂಬಿಯಾ): ದೇಶದ ನೈಋತ್ಯ ವ್ಯಾಲೆ ಡೆಲ್ ಕಾಕಾ ಡಿಪಾರ್ಟ್‌ಮೆಂಟ್‌ನ ಕೊಲಂಬಿಯಾದ ಲಾ ಯೂನಿಯನ್ ಪುರಸಭೆಯಲ್ಲಿ ನಡೆದ ಪಾರ್ಟಿಯೊಂದರಲ್ಲಿ ಅಪರಿಚಿತ ದುಷ್ಕರ್ಮಿಗಳು ಐವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಲಾ ಯೂನಿಯನ್ ಮೇಯರ್ ವಿಲಿಯಂ ಫೆರ್ನಾಂಡೊ ಪಲೋಮಿನೊ ಅವರು ಪಾರ್ಟಿಯಲ್ಲಿದ್ದ ಜನರ ಗುಂಪಿನಲ್ಲಿ ಈ ಘಟನೆ ಸಂಭವಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇಲ್ಲಿಯವರೆಗೆ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ. ಪಾರ್ಟಿಯಲ್ಲಿ ಮದ್ಯ ಸೇವಿಸುತ್ತಿದ್ದ ಈ ಜನರು, ಲಾ ಸಿಯುಡಾಡೆಲಾ ನೆರೆಹೊರೆಯಲ್ಲಿ ಪಾರ್ಟಿಯಲ್ಲಿದ್ದಾಗ ಇಬ್ಬರು ವ್ಯಕ್ತಿಗಳು ದಾಳಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲಂಬಿಯಾದ ಪೊಲೀಸರು ಗುಂಡಿಟ್ಟ ದುಷ್ಕರ್ಮಿಗಳನ್ನು ಸೆರೆ ಹಿಡಿಯಲು ತನಿಖೆ ಪ್ರಾರಂಭಿಸಿದ್ದಾರೆ ಮತ್ತು ಗುಂಡಿನ ದಾಳಿಯ ಹಿಂದೆ ಶಸ್ತ್ರಸಜ್ಜಿತ ಗುಂಪು ಇದೆಯಾ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನು ಓದಿ:ನಾಜಿ ಸರ್ವಾಧಿಕಾರಿ ಹಿಟ್ಲರ್ ವಾಚ್ ಬರೋಬ್ಬರಿ 1.1 ಮಿಲಿಯನ್‌ಗೆ ಹರಾಜು

For All Latest Updates

TAGGED:

ABOUT THE AUTHOR

...view details