ಕೈರೋ (ಈಜಿಪ್ಟ್) :ಸೂಯೆಜ್‌ನಲ್ಲಿ ಡಬಲ್ ಡೆಕ್ಕರ್ ಬಸ್ ಪಲ್ಟಿಯಾದ ಪರಿಣಾಮ ಐದು ಜನರು ಸಾವನ್ನಪ್ಪಿದ್ದು, 50 ಜನರು ಗಾಯಗೊಂಡಿದ್ದಾರೆ ಎಂದು ಈಜಿಪ್ಟ್ ಪೊಲೀಸರು ತಿಳಿಸಿದ್ದಾರೆ. ಈಜಿಪ್ಟ್‌ನ ಕೈರೋ-ಐನ್ ಸೊಖ್ನಾ ರಸ್ತೆಯಲ್ಲಿ ಶುಕ್ರವಾರ ಅಪಘಾತ ಸಂಭವಿಸಿದ್ದು, ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತುರ್ತು ಪೊಲೀಸ್ ಕಾರ್ಯಾಚರಣೆ ಕೊಠಡಿ ತಿಳಿಸಿದೆ.
ಡಬಲ್ ಡೆಕ್ಕರ್ ಬಸ್ ಪಲ್ಟಿ ಐವರು ಸಾವು, 50 ಜನರಿಗೆ ಗಾಯ - ಅಪಘಾತದಿಂದಲೇ ವರ್ಷಕ್ಕೆ ಸಾವಿರಾರು ಜನ ಜೀವ
ಈಜಿಪ್ಟ್ನಲ್ಲಿ ಡಬಲ್ ಡೆಕ್ಕರ್ ಬಸ್ ಪಲ್ಟಿ ಆದ ಪರಿಣಾಮ ಐವರು ಸಾವನ್ನಪ್ಪಿ, 50 ಮಂದಿ ಗಾಯಗೊಂಡಿದ್ದಾರೆ.
ಈಜಿಪ್ಟ್ : ಡಬಲ್ ಡೆಕ್ಕರ್ ಬಸ್ ಪಲ್ಟಿ 5 ಸಾವು, 50 ಜನರಿಗೆ ಗಾಯ
ಮತ್ತೊಂದೆಡೆ ಶುಕ್ರವಾರ ರೈಲು ಮತ್ತು ಮಿನಿ ಬಸ್ ನಡುವೆ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಈಜಿಪ್ಟ್ನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮತ್ತು ರಸ್ತೆ ಸರಿ ಇರದ ಕಾರಣ ಅಪಘಾತಗಳು ಹೆಚ್ಚು ಸಂಭವಿಸುತ್ತವೆ ಎನ್ನಲಾಗ್ತಿದೆ. ಇಲ್ಲಿ ವಾಹನ ಅಪಘಾತದಿಂದಲೇ ವರ್ಷಕ್ಕೆ ಸಾವಿರಾರು ಜನ ಜೀವ ಕಳೆದುಕೊಳ್ಳುತ್ತಾರೆ.
ಇದನ್ನೂ ಓದಿ :ಅಫ್ಘಾನಿಸ್ತಾನದ ಹೆರಾತ್ ಮಸೀದಿಯಲ್ಲಿ ಭಾರಿ ಬಾಂಬ್ ಸ್ಫೋಟ: 20ಕ್ಕೂ ಹೆಚ್ಚು ಮಂದಿ ಸಾವು