ಬ್ಯಾಟನ್(ಲೂಸಿಯಾನ):ನಾಲ್ಕು ವರ್ಷದ ಹೆಣ್ಣು ಮಗುವೊಂದು ವಿಸ್ಕಿ ಕುಡಿದು ಸಾವನ್ನಪ್ಪಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಅಜ್ಜಿ ಹಾಗೂ ತಾಯಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಲೂಸಿಯಾನದ ಬ್ಯಾಟನ್ ಎಂಬಲ್ಲಿ ಈ ಘಟನೆ ನಡೆದಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಚಿಕ್ಕ ಮಗುವಿಗೆ ಅಜ್ಜಿ ರೊಕ್ಸಾನ್ನೆ(53) ವಿಸ್ಕಿ ಕುಡಿಯುವಂತೆ ಒತ್ತಾಯ ಮಾಡಿದ್ದು, ಇದನ್ನ ಮಗುವಿನ ತಾಯಿ ಇದನ್ನು ನೋಡುತ್ತಿರುವಾಗಲೇ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಮಗು ಮದ್ಯ ಸೇವಿಸಿರುವ ಪರಿಣಾಮ ಸಾವನ್ನಪ್ಪಿದ್ದು, ಇದರ ಬೆನ್ನಲ್ಲೇ ಆರೋಪಿಗಳ ಬಂಧನವಾಗಿದೆ.