ಕರ್ನಾಟಕ

karnataka

ETV Bharat / international

Helicopter ditched off: ಆಸ್ಟ್ರೇಲಿಯನ್ ಮಿಲಿಟರಿ ಹೆಲಿಕಾಪ್ಟರ್ ಪತನ.. ನಾಲ್ವರು ಸಿಬ್ಬಂದಿ ನಾಪತ್ತೆ, ಮುಂದುವರೆದ ಶೋಧ ಕಾರ್ಯ

Australian army helicopter ditched off: ಜಂಟಿ ಸೇನಾ ಸಮರಾಭ್ಯಾಸದ ವೇಳೆ ಕ್ವೀನ್ಸ್‌ಲ್ಯಾಂಡ್‌ನ ಹ್ಯಾಮಿಲ್ಟನ್ ದ್ವೀಪದ ನೀರಿನಲ್ಲಿ ಆಸ್ಟ್ರೇಲಿಯಾ ಸೇನೆಯ ಹೆಲಿಕಾಪ್ಟರ್ ಪತನಗೊಂಡಿದೆ. ಶುಕ್ರವಾರ ರಾತ್ರಿ 10.30 ರ ಸುಮಾರಿಗೆ MRH90 ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಆಸ್ಟ್ರೇಲಿಯಾದ ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ಖಚಿತಪಡಿಸಿದ್ದಾರೆ.

Australian army helicopter
ಹೆಲಿಕಾಪ್ಟರ್ ಪತನ

By

Published : Jul 29, 2023, 1:20 PM IST

ಬ್ರಿಸ್ಬೇನ್ :ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ಜಂಟಿ ಮಿಲಿಟರಿ ತರಬೇತಿ ನಡೆಸುತ್ತಿದ್ದ ಆಸ್ಟ್ರೇಲಿಯಾದ ಸೇನಾ ಹೆಲಿಕಾಪ್ಟರ್ ಕ್ವೀನ್ಸ್‌ಲ್ಯಾಂಡ್ ರಾಜ್ಯ ಕರಾವಳಿಯಲ್ಲಿ ಪತನಗೊಂಡು ನೀರಿನಲ್ಲಿ ಮುಳುಗಿದ್ದು, ನಾಲ್ವರು ವಾಯುಪಡೆ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. MRH-90 ತೈಪಾನ್ ಹೆಲಿಕಾಪ್ಟರ್ ಶುಕ್ರವಾರ ಸುಮಾರು ರಾತ್ರಿ 10:30 ಕ್ಕೆ ಗ್ರೇಟ್ ಬ್ಯಾರಿಯರ್ ರೀಫ್ ಟೂರಿಸ್ಟ್ ರೆಸಾರ್ಟ್ ಹ್ಯಾಮಿಲ್ಟನ್ ದ್ವೀಪದ ಬಳಿ ಪತನಗೊಂಡಿದೆ ಎಂದು ಶುಕ್ರವಾರ ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಆಸ್ಟ್ರೇಲಿಯಾದ ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್, "ತೈಪಾನ್ ಎಂದೂ ಕರೆಯಲ್ಪಡುವ ಎರಡು ಹೆಲಿಕಾಪ್ಟರ್​ಗಳು ತರಬೇತಿ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದಾಗ ರಾತ್ರಿ 10:30 ರ ಸುಮಾರಿಗೆ (ಸ್ಥಳೀಯ ಕಾಲಮಾನ) MRH90 ಹೆಲಿಕಾಪ್ಟರ್ ನಾಲ್ವರು ಸಿಬ್ಬಂದಿಗಳೊಂದಿಗೆ ಅಪಘಾತಕ್ಕೀಡಾಗಿದೆ. ಸಿಬ್ಬಂದಿಗಾಗಿ ತಕ್ಷಣವೇ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಈಗಾಗಲೇ ಅವರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ" ಎಂದು ಹೇಳಿದರು.

ಇದನ್ನೂ ಓದಿ :Emergency landing : ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಆಸ್ಟ್ರೇಲಿಯಾದ ರಕ್ಷಣಾ ಪಡೆಯ ಮುಖ್ಯಸ್ಥ ಆಂಗಸ್ ಕ್ಯಾಂಪ್‌ಬೆಲ್ ಅವರು ಅಪಘಾತವನ್ನು "ಭಯಾನಕ ಕ್ಷಣ" ಎಂದು ಬಣ್ಣಿಸಿದ್ದಾರೆ. ಜೊತೆಗೆ, ಈ ಸಂದರ್ಭದಲ್ಲಿ ಸಿಬ್ಬಂದಿಗಾಗಿ ಹುಡುಕಾಟ ನಡೆಸುವುದು, ಅವರ ಕುಟುಂಬಗಳಿಗೆ ಸಾಂತ್ವನ ಹೇಳುವುದು ಮತ್ತು ನಮ್ಮ ತಂಡದ ಉಳಿದ ಸದಸ್ಯರನ್ನು ನೋಡಿಕೊಳ್ಳುವುದಕ್ಕೆ ಗಮನ ಹರಿಸುತ್ತಿದ್ದೇವೆ. ವಿವಿಧ ನಾಗರಿಕ ಏಜೆನ್ಸಿಗಳು, ಕ್ವೀನ್ಸ್‌ಲ್ಯಾಂಡ್ ಪೊಲೀಸ್, ಆಸ್ಟ್ರೇಲಿಯನ್ ಮಾರಿಟೈಮ್ ಸೇಫ್ಟಿ ಏಜೆನ್ಸಿ ಮತ್ತು ಯುಎಸ್ ಮಿಲಿಟರಿ ಸಿಬ್ಬಂದಿ ಹುಡುಕಾಟದಲ್ಲಿ ಭಾಗವಹಿಸಿದ್ದಾರೆ ಎಂದರು.

ಇದನ್ನೂ ಓದಿ :ಜಮ್ಮು ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್​ ಪತನ : ಕಮಾಂಡಿಂಗ್ ಆಫೀಸರ್ ​ಸೇರಿ ಮೂವರಿಗೆ ಗಂಭೀರ ಗಾಯ

ಇನ್ನು, ವಿದೇಶಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ವಾಣಿಜ್ಯ ಹೆಲಿಕಾಪ್ಟರ್ ಜುಲೈ 11 ರಂದು ನೇಪಾಳದ ಮೌಂಟ್ ಎವರೆಸ್ಟ್ ಬಳಿ ಅಪಘಾತಕ್ಕೀಡಾಗಿ ಕನಿಷ್ಠ ಐವರು ಸಾವನ್ನಪ್ಪಿದ್ದರು. ವಿಮಾನದಲ್ಲಿದ್ದ ಇನ್ನೊಬ್ಬ ವ್ಯಕ್ತಿ ನಾಪತ್ತೆಯಾಗಿದ್ದರು. ಪೂರ್ವ ನೇಪಾಳದ ಲಮ್ಜುರಾ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದ್ದು, ಐವರ ಮೃತದೇಹಗಳು ಪತ್ತೆಯಾಗಿವೆ ಎಂದು ಸರ್ಕಾರಿ ಆಡಳಿತಾಧಿಕಾರಿ ಬಸಂತ ಭಟ್ಟರಾಯ್ ತಿಳಿಸಿದ್ದರು. ಹಾಗೆಯೇ, ಮನಂಗ್ ಏರ್ NA-MV ಹೆಲಿಕಾಪ್ಟರ್‌ ಸೋಲುಖುಂಬು ಜಿಲ್ಲೆಯ ಸುರ್ಕೆ ವಿಮಾನ ನಿಲ್ದಾಣದಿಂದ ಬೆಳಗ್ಗೆ 10:04 ಕ್ಕೆ ಕಠ್ಮಂಡುವಿಗೆ ಹೊರಟಿತ್ತು. 10:13 ಕ್ಕೆ 12,000 ಅಡಿ ಎತ್ತರದಲ್ಲಿ ಇದ್ದಕ್ಕಿದ್ದಂತೆ ಸಂಪರ್ಕ ಕಳೆದುಕೊಂಡಿತು ಎಂದು ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಟಿಐಎ) ವ್ಯವಸ್ಥಾಪಕ ಜ್ಞಾನೇಂದ್ರ ಭುಲ್ ಮಾಹಿತಿ ನೀಡಿದ್ದರು.

ಇದನ್ನೂ ಓದಿ :Nepal Chopper Crash : ಮೌಂಟ್ ಎವರೆಸ್ಟ್ ಬಳಿ ಹೆಲಿಕಾಪ್ಟರ್ ಪತನ.. ಐವರ ದುರ್ಮರಣ

ABOUT THE AUTHOR

...view details