ಕ್ಯಾಲಿಫೋರ್ನಿಯಾ, ಅಮೆರಿಕ:ಎರಡು ಸಣ್ಣ ವಿಮಾನಗಳು ಗ್ರಾಮೀಣ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಡಿಕ್ಕಿ ಹೊಡೆದ ಪತನಗೊಂಡಿದ್ದು, ಶ್ವಾನ ಸಮೇತ ಮೂವರು ಮೃತಪಟ್ಟಿರುವ ಘಟನೆ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಈ ಘಟನೆ ಬಗ್ಗೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ವ್ಯಾಟ್ಸನ್‌ವಿಲ್ಲೆ ಮುನ್ಸಿಪಲ್ ಏರ್‌ಪೋರ್ಟ್‌ನಲ್ಲಿ ವಿಮಾನಗಳು ಪತನಗೊಂಡಿವೆ. ಈ ದುರ್ಘಟನೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ಸಾಂಟಾ ಕ್ರೂಜ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.
ಅಪಘಾತದ ಸಮಯದಲ್ಲಿ ಡಬಲ್ ಎಂಜಿನ್ ಸೆಸ್ನಾ 340 ವಿಮಾನದಲ್ಲಿ ಶ್ವಾನ ಸೇರಿದಂತೆ ಇಬ್ಬರು ಪ್ರಯಾಣಿಸುತ್ತಿದ್ದರು. ಇನ್ನು ಸಿಂಗಲ್ ಇಂಜಿನ್ ಸೆಸ್ನಾ 152 ನಲ್ಲಿ ಪೈಲಟ್ ಮಾತ್ರ ಇದ್ದರು ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ವಾಯು ಸುರಕ್ಷತೆ ತನಿಖಾಧಿಕಾರಿ ಫ್ಯಾಬಿಯನ್ ಸಲಾಜರ್ ಹೇಳಿದ್ದಾರೆ.
ಈ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು. ಯುನೈಟೆಡ್ ಫ್ಲೈಟ್ ಸರ್ವಿಸಸ್‌ನ ವೆಬ್‌ಸೈಟ್‌ನಲ್ಲಿ ವಿಮಾನವನ್ನು ಗಂಟೆಗೆ ಬಾಡಿಗೆಗೆ ಪಡೆಯಲಾಗಿದೆ. ಯುನೈಟೆಡ್ ಫ್ಲೈಟ್ ಸರ್ವಿಸಸ್ ವಿಮಾನ ನಿಲ್ದಾಣದ ಮೂಲ ಕಂಪನಿಯಾಗಿದ್ದು, ವಿಮಾನಗಳನ್ನು ಬಾಡಿಗೆಗೆ ಮತ್ತು ನಿರ್ವಹಣೆ ಒದಗಿಸುತ್ತದೆ. ಡಬಲ್ ಇಂಜಿನ್ ಸೆಸ್ನಾ 340 ವಿಮಾನ ALM ಹೋಲ್ಡಿಂಗ್ LLCಯಲ್ಲಿ ನೋಂದಾಯಿಸಲಾಗಿದೆ. ಇದು ಮಧ್ಯ ಕ್ಯಾಲಿಫೋರ್ನಿಯಾದ ವಿಂಟನ್‌ನಲ್ಲಿರುವ ಒಂದು ಕಂಪನಿಯಾಗಿದೆ ಎಂದು ಸಲಾಜರ್ ಹೇಳಿದರು.
ತನಿಖಾಧಿಕಾರಿಗಳು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದಾರೆ. ನಗರದ ಒಡೆತನದ ವಿಮಾನ ನಿಲ್ದಾಣವು ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಅನ್ನು ನಿರ್ದೇಶಿಸಲು ನಿಯಂತ್ರಣ ಗೋಪುರವನ್ನು ಹೊಂದಿಲ್ಲ. ಯಾವುದೇ ನಿಯಂತ್ರಣ ಗೋಪುರಗಳಿಲ್ಲದ ವಿಮಾನ ನಿಲ್ದಾಣಗಳನ್ನು ಬಳಸುವ ಪೈಲಟ್‌ಗಳು ಸಂವಹನ ನಡೆಸಲು ಬಳಸುವ ಸಾಮಾನ್ಯ ಸಂಚಾರ ಸಲಹಾ ಆವರ್ತನವನ್ನು ಹೊಂದಿರುತ್ತಾರೆ. ಆ ದಿನ ಸಂಭವಿಸಿದ ಅಪಘಾತದ ಬಗ್ಗೆ ರೇಡಿಯೊ ಸಂವಹನಗಳನ್ನು ಪಡೆಯಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಓದಿ:ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಬಡ ಕುಟುಂಬ.. 2 ನಿಮಿಷದಲ್ಲಿ ವಿಮಾನ ನಿಲ್ದಾಣ ತಲುಪಿದ ಯಕೃತ್