ಕರ್ನಾಟಕ

karnataka

ETV Bharat / international

ವಿನಾಕಾರಣ ಗುಂಡಿನ ದಾಳಿ ಮೂವರ ಸಾವು: ಆರೋಪಿ ಪತ್ತೆಗಾಗಿ ಶೋಧ

ವಿನಾ ಕಾರಣ ಗುಂಡಿನ ದಾಳಿ ಮೂವರ ಸಾವು - ಅಮೆರಿಕದಲ್ಲಿ ಇಬ್ಬರು ಪತ್ರಕರ್ತರ ಕೊಲೆ - ತಾಯಿ ಮಗು ಸೇರಿ ಅಮೆರಿಕದಲ್ಲಿ ಮೂವರ ಸಾವು - 19 ವರ್ಷದ ಆರೋಪಿ ಬಂಧನ

3 dead after shooting  stabbing inside Albuquerque home in Mexico
ವಿನಾ ಕಾರಣ ಗುಂಡಿನ ದಾಳಿ ಮೂವರ ಸಾವು

By

Published : Feb 24, 2023, 9:25 AM IST

ಅಲ್ಬುಕರ್ಕ್(ಮೆಕ್ಸಿಕೋ): ಅಮೆರಿಕದಲ್ಲಿ ವಿನಾ ಕಾರಣ ಶೂಟೌಟ್ ಮಾಡಿ ಮೂವರನ್ನು ಕೊಲೆ ಮಾಡಿರುವ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಮೆಕ್ಸಿಕೋದ ಅಲ್ಬುಕರ್ಕ್​ನಲ್ಲಿ ಒಬ್ಬ ವ್ಯಕ್ತಿ ಚಾಕು ಇರಿತ ಹಾಗೂ ಇಬ್ಬರು ಶೂಟೌಟ್​ನಿಂದ ಕೊಲೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ರಸ್ತೆಯಲ್ಲಿ ಒಬ್ಬ ಬಿದ್ದಿರುವುದು ಕಂಡು ಬಂದರೆ ಮತ್ತಿಬ್ಬರನ್ನು ಮನೆಯೊಳಗೆ ಕೊಲೆ ಮಾಡಲಾಗಿದೆ.

ಮೂವರ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ರಾಜ್ಯ ಉದ್ಯಾನಗಳ ಕಾನೂನು ಜಾರಿ ಅಧಿಕಾರಿ ರಸ್ತೆಯಲ್ಲಿ ಚಾಕುವಿನಿಂದ ಇರಿತಕ್ಕೂಳಗಾದ ವ್ಯಕ್ತಯನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ರಕ್ತದ ಕಲೆಯ ಅಂದಾಜಿನಲ್ಲಿ ಅಲ್ಲೇ ಪಕ್ಕದಲ್ಲಿದ್ದ ಮನೆಗೆ ಪರಿಶೀಲಿಸಿದಾಗ ಇಬ್ಬರು ಗುಂಡು ದಾಳಿಗೆ ಒಳಗಾಗಿರುವುದು ತಿಳಿದು ಬಂದಿದೆ. ಸ್ಥಳೀಯರು ತಿಳಿಸಿದ ಮಾಹಿತಿಯಂತೆ ಮನೆಯೊಳಗೆ ಎರಡು ಬಾರಿ ಗುಂಡಿನ ಶಬ್ದ ಕೇಳಿ ಬಂದಿದೆ ಎಂದು ತಿಳಿಸಿದ್ದಾರೆ. ಅದರಂತೆ ಕೊಲೆ ಮಾಡಿದವನಿಗಾಗಿ ತನಿಖೆ ಮುಂದುವರೆಸಿದ್ದಾರೆ. ಅಲ್ಬುಕರ್ಕ್ ಉತ್ತರ ಕಣಿವೆಯಲ್ಲಿ ಹತ್ಯೆ ಮಾಡಲಾಗಿದ್ದು, ಇದು ನಿರ್ಜನ ಪ್ರದೇಶವಾಗಿದ್ದರಿಂದ ಯಾರು ಇರಲಿಲ್ಲ. ಶೂಟೌಟ್​ ಆದ ಮನೆಯ ಪ್ರದೇಶವು ಸಾರ್ವಜನಿಕ ಗ್ರಂಥಾಲಯ ಮತ್ತು ಅಗ್ನಿಶಾಮಕ ಠಾಣೆ ಸಮೀಪದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಒರ್ಲ್ಯಾಂಡೊದಲ್ಲಿ ಶೂಟೌಟ್​ಗೆ 9 ವರ್ಷದ ಬಾಲಕಿ ಹಾಗೂ ಒರ್ವ ಪರ್ತಕರ್ತ ಬಲಿ

ಅಮೆರಿಕದ ಶೂಟೌಟ್​, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ:ಅಮೆರಿಕಾದ ಒರ್ಲ್ಯಾಂಡೊದಲ್ಲಿ ಗುಂಡಿನ ದಾಳಿ ಪ್ರಕರಣದಲ್ಲಿ ಸೆಂಟ್ರಲ್ ಫ್ಲೋರಿಡಾ ದೂರದರ್ಶನ ಪತ್ರಕರ್ತ ಹಾಗೂ 9 ವರ್ಷದ ಮಗು ಸಾವನ್ನಪ್ಪಿದ್ದರು. ದಾಳಿಯಲ್ಲಿ ತಾಯಿ ಹಾಗೂ ಮತ್ತೋರ್ವ ಪತ್ರಕರ್ತನ ಸ್ಥಿತಿ ಗಭೀರವಾಗಿತ್ತು. ಅದರಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಆರೋಪಿ 19 ವರ್ಷದ ಕೀತ್ ಮೆಲ್ವಿನ್ ಮೋಸೆಸ್ ಎಂಬುವವನನ್ನು ಬಂಧಿಸಲಾಗಿದೆ ಎಂದು ಆರೆಂಜ್ ಕೌಂಟಿ ಶೆರಿಫ್​ನ ಅಧಿಕಾರಿ ಜಾನ್ ಮಿನಾ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆರೋಪಿಯ ಈ ದಾಳಿಗೆ ಕಾರಣ ತಿಳಿದು ಬಂದಿಲ್ಲ. ಆತ ಮೊದಲು ಮಾಧ್ಯಮದ ವಾಹನದ ಬಳಿ ಬಂದು ಇಬ್ಬರೂ ಪತ್ರಕರ್ತರ ಮೇಲೆ ಗುಂಡು ಹಾರಿಸಿ, ನಂತರ ಅಲ್ಲೇ ಇದ್ದ ಮನೆಯೊಂದಕ್ಕೆ ನುಗ್ಗಿ ತಾಯಿ ಹಾಗೂ ಅವರ 9 ವರ್ಷದ ಮಗುವಿನ ಮೇಲೆ ದಾಳಿ ನಡೆಸಿದ್ದಾನೆ. ಗುಂಡಿನ ದಾಳಿಗೆ ಮಗು ಮತ್ತು ಒಬ್ಬ ಪತ್ರಕರ್ತ ಸಾವನ್ನಪ್ಪಿದ್ದರು. ತಾಯಿ ಹಾಗೂ ಮತ್ತೋರ್ವ ಪತ್ರಕರ್ತನ ಸ್ಥಿತಿ ಗಭೀರವಾಗಿತ್ತು. ತಾಯಿ ಚೇತರಿಕೆ ಕಾಣದೇ ಸಾವನ್ನಪ್ಪಿದ್ದಾರೆ. ಕೀತ್ ಮೆಲ್ವಿನ್ ಮೋಸೆಸ್ ಈ ರೀತಿಯಾಗಿ ಕೃತ್ಯ ಎಸಗಲು ನಿರ್ದಿಷ್ಟ ಕಾರಣ ತಿಳಿದಿಲ್ಲ. ಜೊತೆಗೆ ದಾಳಿ ನಡೆಸಿದ ವರದಿಗಾರರು ಅಥವಾ ಆ ತಾಯಿ ಹಾಗು ಮಗುವಿನ ಜೊತೆಗೂ ಯಾವುದೇ ರೀತಿಯ ಸಂಬಂಧ ಅಥವಾ ಸಂಪರ್ಕವಿಲ್ಲ. ಆದರೂ ಯಾಕೆ ಗುಂಡಿನ ದಾಳಿ ನಡೆಸಿದ್ದಾನೆಂದು ತನಿಖೆ ನಂತರ ತಿಳಿದು ಬರಬೇಕಷ್ಟೆ ಎಂದು ಅಧಿಕಾರಿ ಜಾನ್ ಮಿನಾ ಹೇಳಿದ್ದಾರೆ.

ಇದನ್ನೂ ಓದಿ:ಅಮೆರಿಕದಲ್ಲಿಯೇ ಮೊದಲ ಬಾರಿಗೆ ಜಾತಿ ಪಕ್ಷಪಾತ ನಿಷೇಧ ಜಾರಿಗೆ ತಂದ ಸಿಯಾಟಲ್​​

ABOUT THE AUTHOR

...view details