ತೈವಾನ್:ತೈವಾನ್ ದೇಶದ ವಾಯು ರಕ್ಷಣಾ ವಲಯದ ಮೇಲೆ ಚೀನಾದ ತನ್ನ ವಿಮಾನಗಳ ಹಾರಾಟ ನಡೆಸಿದೆ. ದ್ವೀಪ ರಾಷ್ಟ್ರಕ್ಕೆ ಅಮೆರಿಕದ ನ್ಯಾನ್ಸಿ ಪೆಲೊಸಿ ಭೇಟಿ ನೀಡಿದ ಬೆನ್ನಲ್ಲೇ ಚೀನಾ ಈ ಕ್ರಮಕ್ಕೆ ಮುಂದಾಗಿದೆ.
ಚೀನಾ ತನ್ನ ಭೂಪ್ರದೇಶ ಎಂದು ವಾದಿಸುವ ತೈವಾನ್ಗೆ ಅಮೆರಿಕದ ಜನಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೊಸಿ ಭೇಟಿ ನೀಡಿದ್ದು ವಿವಾದ ಸೃಷ್ಟಿಸಿದೆ. ಇತ್ತ, ಈ ಭೇಟಿ ನಂತರ ಚೀನಾ ಕಂಗೆಟ್ಟಿದೆ. ಹೀಗಾಗಿಯೇ ಇಂದು 27 ಯುದ್ಧ ವಿಮಾನಗಳನ್ನು ತೈವಾನ್ ಮೇಲೆ ಹಾರಾಟ ಮಾಡಿದೆ.
ಇದನ್ನೂ ಓದಿ:ಚೀನಾ ಬೆದರಿಕೆ ಬೆನ್ನಲ್ಲೇ ತೈವಾನ್ನಿಂದ ಹೊರಟ ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೊಸಿ
'27 ಪಿಎಲ್ಎ ವಿಮಾನಗಳು 2022ರ ಆಗಸ್ಟ್ 3ರಂದು (ರಿಪಬ್ಲಿಕ್ ಆಫ್ ಚೀನಾ) ಸುತ್ತಮುತ್ತಲಿನ ಪ್ರದೇಶವನ್ನು ಪ್ರವೇಶಿಸಿದವು' ಎಂದು ರಕ್ಷಣಾ ಸಚಿವಾಲಯ ಟ್ವೀಟ್ ಸಹ ಮಾಡಿದೆ. ಅಲ್ಲದೇ, ಮಂಗಳವಾರದಿಂದಲೇ ಚೀನಾ, ತೈವಾನ್ ಸುತ್ತುವರೆದಿರುವ ಸಮುದ್ರದ ಆರು ಕಡೆಗಳಲ್ಲಿ ಮಿಲಿಟರಿ ಅಭ್ಯಾಸಗಳನ್ನು ನಡೆಸಿತ್ತು.
ಇದನ್ನೂ ಓದಿ:ಪೆಲೋಸಿ ತೈವಾನ್ ಭೇಟಿ: ಆಕ್ರೋಶಿತ ಚೀನಾದಿಂದ ಮಿಲಿಟರಿ ಡ್ರಿಲ್