ಕರ್ನಾಟಕ

karnataka

ETV Bharat / international

ನಮಗೆ ಇಷ್ಟ ಇರದಿದ್ರೂ ಅಮೆರಿಕಕ್ಕೆ ಓದಲು ಹೋದ.. ಮಗನ ಸಾವಿನ ಸುದ್ದಿ ತಿಳಿದು ಆಘಾತಕೊಳ್ಳಗಾದ ತಂದೆ!

ಮೇರಿಲ್ಯಾಂಡ್‌ನಲ್ಲಿ ಮಗನನ್ನು ಗುಂಡಿಕ್ಕಿ ಕೊಲೆ ಮಾಡಿರುವ ಸುದ್ದಿ ತಿಳಿದ ತಂದೆ ಆಘಾತಕ್ಕೊಳಗಾಗಿದ್ದಾರೆ. ಇದೇ ವೇಳೆ ಮಗನನ್ನು ಕಳೆದುಕೊಂಡ ಅವರ ರೋದನೆ ಮುಗಿಲು ಮುಟ್ಟಿತು. ಇನ್ನು ಯುವಕ ಸಾಯಿ ಚರಣ್​ ಮೃತದೇಹ ಸ್ವದೇಶಕ್ಕೆ ತರಲು ರಾಯಭಾರಿ ಕಚೇರಿ ಕ್ರಮ ಕೈಗೊಂಡಿದೆ. ಆದ್ರೆ ಪ್ರಕರಣದ ತನಿಖೆ ಪ್ರಗತಿಯಲ್ಲಿರುವ ಕಾರಣ ಮತ್ತಷ್ಟ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ.

Indian national shot dead in US  father says never wanted him to go abroad  Nakka Narsimha on son going abroad  Sai Charan Nakka from Telangana dead  University of Cincinnati student dead  ಗುಂಡೇಟಿನಿಂದ ಸಾಯಿ ಚರಣ್ ನಕ್ಕ ಸಾವು  ಮೇರಿಲ್ಯಾಂಡ್​ನಲ್ಲಿ ಗುಂಡೇಟಿನಿಂದ ಸಾಯಿ ಚರಣ್ ನಕ್ಕ  ಮಗನ ಸಾವಿನ ಸುದ್ದಿ ತಿಳಿದು ಆಘಾತಕೊಳ್ಳಗಾದ ತಂದೆ ನರಹಿಂ ನಕ್ಕ  ಅಮೆರಿಕಾದಲ್ಲಿ ಮತ್ತೆ ಗುಂಡಿನ ದಾಳಿ
ಮಗನ ಸಾವಿನ ಸುದ್ದಿ ತಿಳಿದು ಆಘಾತಕೊಳ್ಳಗಾದ ತಂದೆ

By

Published : Jun 24, 2022, 9:36 AM IST

ಮೇರಿಲ್ಯಾಂಡ್ (ಅಮೆರಿಕ):ಮೇರಿಲ್ಯಾಂಡ್‌ನಲ್ಲಿ ಭಾನುವಾರ ಬೆಳಗ್ಗೆ 25 ವರ್ಷದ ಭಾರತೀಯ ಪ್ರಜೆಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತರು ತೆಲಂಗಾಣ ಮೂಲದ ಸಾಯಿ ಚರಣ್ ನಕ್ಕಾ ಎಂದು ಗುರುತಿಸಲಾಗಿದ್ದು, 2022 ರ ಜನವರಿಯಲ್ಲಿ ಸಿನ್ಸಿನಾಟಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.

ಗುಂಡೇಟಿನಿಂದ ಸಾಯಿ ಚರಣ್ ನಕ್ಕನನ್ನು ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯ ಆರ್. ಆಡಮ್ಸ್ ಕೌಲಿ ಶಾಕ್ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಯಿತು. ಅಲ್ಲಿ ಚರಣ್​ ಸ್ವಲ್ಪ ಸಮಯದ ಬಳಿಕ ಸಾವನ್ನಪ್ಪಿದ್ದಾರೆ. ನಿವೃತ್ತ ಮುಖ್ಯೋಪಾಧ್ಯಾಯರಾಗಿರುವ ನಕ್ಕಾ ನರಸಿಂಹರಿಗೆ ಮಗನ ಸಾವಿನ ಸುದ್ದಿ ತಿಳಿದು ಕುಗ್ಗಿ ಹೋದರು. ನಮ್ಮ ಮಗನನ್ನು ಅಮೆರಿಕಕ್ಕೆ ಕಳುಹಿಸಲು ನನಗೆ ಇಷ್ಟವಿರಲಿಲ್ಲ. ಅವನು ಇಲ್ಲಿಯೇ ಇರಬೇಕೆಂಬುದು ಆಸೆಯಾಗಿತ್ತು. ಅಲ್ಲಿಗೆ ಕಳುಹಿಸಲು ನನಗೆ ಯಾವುದೇ ಆಸಕ್ತಿ ಇರಲಿಲ್ಲ. ಅವನನ್ನು ಕಳುಹಿಸಬೇಡಿ ಎಂದ್ರೂ ಸಹ ಅವನು ಅಮೆರಿಕಕ್ಕೆ ಹೋದನು ಎಂದು ಮಗನ ಅಕಾಲಿಕ ಮರಣದಿಂದ ಆಘಾತಕ್ಕೊಳಗಾದ ತಂದೆ ನಕ್ಕಾ ನರಸಿಂಹ ಹೇಳಿದರು.

ಈ ಪ್ರಕರಣವನ್ನು ನರಹತ್ಯೆಯ ತನಿಖೆ ಎಂದು ಪರಿಗಣಿಸಲಾಗಿದೆ. ತನಿಖಾ ಸಿಬ್ಬಂದಿ ಅನುಮಾನಾಸ್ಪದ ಚಟುವಟಿಕೆಯುಳ್ಳವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಬಾಲ್ಟಿಮೋರ್ ಪೊಲೀಸರು ಹೇಳಿದರು.

ಓದಿ:ಅಮೆರಿಕದಲ್ಲಿ ತೆಲಂಗಾಣದ ಸಾಫ್ಟವೇರ್ ಇಂಜಿನಿಯರ್​ನ ಗುಂಡಿಕ್ಕಿ ಕೊಲೆ

ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿ ಭಾನುವಾರ, ಜೂನ್ 19, 2022 ರಂದು ಮುಂಜಾನೆ ನಕ್ಕಾ ಸಾಯಿ ಚರಣ್ ಅವರ ದುರದೃಷ್ಟಕರ ಸಾವಿನ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ತನಿಖೆ ಇನ್ನೂ ಪ್ರಗತಿಯಲ್ಲಿರುವ ಕಾರಣ ಬಾಲ್ಟಿಮೋರ್ ಪೊಲೀಸರು ಇನ್ನೂ ಸಾವಿನ ಸಂದರ್ಭಗಳ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ರಾಯಭಾರ ಕಚೇರಿಯು ಸಾಯಿ ಚರಣ್ ಅವರ ಕುಟುಂಬ ಮತ್ತು ವಲಸೆ ಸದಸ್ಯರೊಂದಿಗೆ ನಿಕಟ ಸಂಪರ್ಕದಲ್ಲಿದೆ. ಸಾಯಿ ಚರಣ್ ಅವರ ಪಾರ್ಥಿವ ಶರೀರವನ್ನು ಶೀಘ್ರವಾಗಿ ಸ್ವದೇಶಕ್ಕೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಭಾರತೀಯ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಯುನೈಟೆಡ್ ಸ್ಟೇಟ್ಸ್‌ಗೆ ಆಗಮಿಸುವ ಎಲ್ಲ ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೆಲವು ನೀತಿಗಳನ್ನು ಪರಿಶೀಲಿಸಲು ನಾವು ಸ್ಥಳೀಯ ಹಾಗೂ ಕೇಂದ್ರದ ಅಧಿಕಾರಿಗಳನ್ನು ಮನವಿ ಮಾಡಿದ್ದೇವೆ. ನಾವು ಸಿನ್ಸಿನಾಟಿ ವಿಶ್ವವಿದ್ಯಾಲಯದಿಂದ ಸಾಯಿ ಚರಣ್ ಅವರ ಸಹಪಾಠಿಗಳನ್ನು ಸಂಪರ್ಕಿಸುತ್ತಿದ್ದೇವೆ ಮತ್ತು ಜಾಗೃತಿ ಕಾರ್ಯಕ್ರಮ ನಡೆಸಲು ಯೋಜಿಸಲಾಗಿದೆ ಎಂದು NAAIS ಹೇಳಿದೆ.

ಈ ವರ್ಷದ ಜೂನ್‌ವರೆಗೆ ಕನಿಷ್ಠ 246 ಮಾರಣಾಂತಿಕ ಗುಂಡಿನ ದಾಳಿಗಳು ನಡೆದಿವೆ. ದೇಶದಲ್ಲಿ ಬಂದೂಕು ಹಿಂಸಾಚಾರದ ಕೃತ್ಯಗಳಿಗೆ ಮರುಕಳಿಸುತ್ತಿರುವುದಕ್ಕೆ ಅಮೆರಿಕ ಸಾಕ್ಷಿಯಾಗಿದೆ. ಭಾರತೀಯರಿಗೆ ಉನ್ನತ ಶಿಕ್ಷಣದ ಪ್ರಮುಖ ತಾಣವಾಗಿ ಅಮೆರಿಕವನ್ನು ಪ್ರಚಾರ ಮಾಡಲಾಗಿದೆ. ಆದರೆ, ಹೆಚ್ಚುತ್ತಿರುವ ನಿದರ್ಶನಗಳಲ್ಲಿ ಗನ್ ಹಿಂಸೆಯಿಂದ ಭದ್ರತೆ ಒದಗಿಸಲು ಸಾಧ್ಯವಾಗದಿರುವುದು ಕಂಡು ಬರುತ್ತಿದೆ.

ಮೇ 24 ರಂದು ಟೆಕ್ಸಾಸ್‌ನ ಉವಾಲ್ಡೆಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹತ್ಯಾಕಾಂಡವು 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರನ್ನು ಬಲಿ ಪಡೆದಿತ್ತು. ಇದು ಈ ವರ್ಷ ಅಮೆರಿಕದಲ್ಲಿ ರಕ್ತಸಿಕ್ತ ಸಾಮೂಹಿಕ ಗುಂಡಿನ ದಾಳಿಯಾಗಿದೆ. ಇದಾದ 10 ದಿನಗಳ ನಂತರ ಬಫಲೋದಲ್ಲಿನ ಸೂಪರ್‌ ಮಾರ್ಕೆಟ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 10 ಜನರನ್ನು ಸಾವನ್ನಪ್ಪಿರುವುದು ಇಲ್ಲಿ ಸ್ಮರಿಸಬಹುದಾಗಿದೆ.

ABOUT THE AUTHOR

...view details