ಕರ್ನಾಟಕ

karnataka

ETV Bharat / international

ಹಮಾಸ್​ ದಾಳಿಯಲ್ಲಿ 22 ಅಮೆರಿಕನ್ನರು ಬಲಿ: 17 ಮಂದಿ ನಾಪತ್ತೆ - ಅಮೆರಿಕ

ಅಮೆರಿಕ ಶ್ವೇತಭವನವು ಇಸ್ರೇಲ್ ಮೇಲೆ ಹಮಾಸ್​ ನಡೆಸಿರುವ ದಾಳಿಯಲ್ಲಿ 22 ಅಮೆರಿಕನ್ನರು ಸಾವನ್ನಪ್ಪಿದ್ದು ಹಲವರು ಒತ್ತೆಯಾಳಾಗಿದ್ದಾರೆ ಎಂಬ ಮಾಹಿತಿ ನೀಡಿದೆ.

ಹಮಾಸ್​ ದಾಳಿ
ಹಮಾಸ್​ ದಾಳಿ

By PTI

Published : Oct 12, 2023, 7:27 AM IST

ವಾಷಿಂಗ್ಟನ್(ಅಮೆರಿಕ): ಇಸ್ರೇಲ್​ ಮೇಲೆ ಹಮಾಸ್​ನ ದಾಳಿಯಿಂದ ಕೇವಲ ಇಸ್ರೇಲಿಯನ್ನರು ಮಾತ್ರವಲ್ಲದೇ, ಇಸ್ರೇಲ್​ನಲ್ಲಿ ನೆಲೆಸಿದ್ದ ಇತರ ದೇಶದ ಪ್ರಜೆಗಳು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಹೌದು ಈ ಕುರಿತು ಅಮೆರಿಕವು ತನ್ನ ದೇಶದ ಪ್ರಜೆಗಳು ಪ್ರಾಣ ಕಳೆದುಕೊಂಡಿರುವುದನ್ನು ತಿಳಿಸಿದೆ. ಅಮೆರಿಕ ಶ್ವೇತಭವನವು ಇಸ್ರೇಲ್​ ಹಮಾಸ್​​ ದಾಳಿಯಲ್ಲಿ 22 ಅಮೆರಿಕನ್ನರು ಪ್ರಾಣ ಕಳೆದುಕೊಂಡಿದ್ದು, 17 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಬುಧವಾರ ವರದಿ ಮಾಡಿದೆ. ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಈ ಕುರಿತು ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್, ಪ್ಯಾಲೇಸ್ಟೀನ್​​ನ ಭಯೋತ್ಪಾದಕ ಗುಂಪು ಹಮಾಸ್​​ ಈಗಾಗಲೇ ಒತ್ತಾಯಾಳಾಗಿ ಇರಿಸಿಕೊಂಡವರಲ್ಲಿ ಹೆಚ್ಚಿನವರು ಅಮೆರಿಕನ್ನರೇ ಸೇರಿರಬಹುದು. ಒತ್ತೆಯಾಳುಗಳನ್ನು ರಕ್ಷಿಸಲು ಅಮೆರಿಕ ಸರ್ಕಾರವು ಇಸ್ರೇಲ್​ನೊಂದಿಗೆ ಸಂಪರ್ಕದಲ್ಲಿದ್ದು ಮಾತುಕತೆ ನಡೆಸುತ್ತಿದೆ. ಇದಕ್ಕೂ ಮೊದಲು, ದಾಳಿಯಲ್ಲಿ 14 ಅಮೆರಿಕನ್ನರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಸರ್ಕಾರ ದೃಢಪಡಿಸಿತ್ತು. ಈ ದಾಳಿಯು, ಯಹೂದಿ ಜನರ ಸಹಸ್ರಮಾನಗಳ ಯಹೂದಿ ವಿರೋಧಿ ಮತ್ತು ನರಮೇಧದಿಂದ ಆಗಿರುವ ನೋವಿನ ನೆನಪುಗಳು ಮತ್ತು ಗಾಯದ ಗುರುತುಗಳನ್ನು ಹೊರ ತಂದಿದೆ. ಹಮಾಸ್​ ಹಲವಾರು ಅಮೆರಿಕನ್ನರನ್ನು ಒತ್ತೆಯಾಳುಗಳಾಗಿಸಿದೆ ಎಂದಿದ್ದಾರೆ.

ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ, ಇಲ್ಲಿವರೆಗೆ 22 ಅಮೆರಿಕನ್ನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ನಾಪತ್ತೆಯಾದವರ ಕುರಿತು ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ನಮಗೆ ತಿಳಿದಿದೆ. ದಾಳಿಯಲ್ಲಿ ಸಾವನ್ನಪ್ಪಿದವರ ಎಲ್ಲ ಸಂತ್ರಸ್ತ ಕುಟುಂಬಗಳಿಗೆ ನಾವು ತಿಳಿಸು ಬಯಸುವುದು ಇಷ್ಟೇ, ನಿಮಗೆ ತಿಳಿದಿರಲಿ ನಾವು ನಿಮ್ಮೊಂದಿಗೆ ಇದ್ದೇವೆ. ನಾವು ಕೂಡ ನಿಮ್ಮೊಂದಿಗೆ ದುಖಿಃಸುತ್ತಿದ್ದೇವೆ. ನಿಮ್ಮ ಬಗ್ಗೆ ಚಿಂತಿಸುತ್ತಿದ್ದೇವೆ. ಮುಖ್ಯವಾಗಿ ತಮ್ಮ ಪ್ರೀತಿ ಪಾತ್ರರ ಬಗ್ಗೆ ಎಲ್ಲಿದ್ದಾರೆಂದು ಮಾಹಿತಿ ಇಲ್ಲದವರಿಗೆ ನಾವು ಅವರನ್ನು ಸಂಪರ್ಕಿಸಲು, ಪತ್ತೆ ಹಚ್ಚಲು ನಮ್ಮಿಂದ ಸಾಧ್ಯವಿರುವ ಎಲ್ಲ ಪ್ರಯತ್ನವನ್ನು ಮಾಡುತ್ತೇವೆ ಎಂದು ಕಿರ್ಬಿ ಜನರಿಗೆ ಧೈರ್ಯ ತುಂಬಿದ್ದಾರೆ.

ಇಸ್ರೇಲ್​ನೊಂದಿಗೆ ನಾವಿದ್ದೇವೆ. ಅಮೆರಿಕ ಇಸ್ರೇಲ್​ಗೆ ಹೆಚ್ಚುವರಿ ರಕ್ಷಣಾ ಸಂಬಂಧಿತ ಬೆಂಬಲವನ್ನು ನೀಡುತ್ತಿದ್ದು ಜೊತೆಯಾಗಿದೆ. ಹಾಗೇ ತನ್ನ ಕೆಲವು ಐರನ್ ಡೋಮ್ ಇಂಟರ್ಸೆಪ್ಟರ್ ಕ್ಷಿಪಣಿಗಳನ್ನು ನೀಡಲು ತಯಾರಾಗಿದೆ. ಕೆಲವು ಕ್ಷಿಪಣಿಗಳನ್ನು ಇಸ್ರೇಲಿ ರಕ್ಷಣಾ ಪಡೆಗಳಿಗೆ ವರ್ಗಾಯಿಸಿದ್ದೇವೆ. ಮತ್ತೆ ಹೆಚ್ಚಿನ ನೆರವನ್ನು ಮುಂದಿನ ದಿನಗಳಲ್ಲಿ ನೀಡಲಿದೆ ಎಂದು ಅಮೆರಿಕ ತಿಳಿಸಿದೆ. ವಿಮಾನವಾಹಕ ನೌಕೆ USS ಗೆರಾಲ್ಡ್ R. ಫೋರ್ಡ್ ಮತ್ತು ಅವಳ ಮುಷ್ಕರ ಗುಂಪು ಈಗ ಪೂರ್ವ ಮೆಡಿಟರೇನಿಯನ್‌ನಲ್ಲಿದೆ. ನಾವು ಪ್ರತೀ ಕ್ಷಣ ಇಸ್ರೇಲ್​ನೊಂದಿಗೆ ನಮ್ಮ ಪ್ರಜೆಗಳನ್ನು ಆ ದೇಶವನ್ನು ರಕ್ಷಿಸಲು ಮಾತು ಕತೆ ನಡೆಸುತ್ತಲೇ ಇದ್ದೇವೆ, ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂದು ಎಂದು ಜಾನ್​ ಕಿರ್ಬಿ ಹೇಳಿದ್ದಾರೆ.

ಇದನ್ನೂ ಓದಿ:ಹಮಾಸ್​ - ಇಸ್ರೇಲ್​ ಕಾಳಗ: 2100 ಕ್ಕೂ ಹೆಚ್ಚು ಸಾವು -ನೋವು.. ಗಾಜಾಪಟ್ಟಿಯಿಂದ ವಲಸೆ ಶುರು

ABOUT THE AUTHOR

...view details