ಬೊಗೊಟಾ(ಕೊಲಂಬಿಯಾ):ಬ್ರೇಕ್ ವೈಫಲ್ಯದಿಂದ ಬಸ್ಸೊಂದು ಉರುಳಿ ಬಿದ್ದು 20 ಮಂದಿ ದಾರುಣವಾಗಿ ಮೃತಪಟ್ಟು, 15 ಮಂದಿ ಗಾಯಗೊಂಡ ದುರ್ಘಟನೆ ನೈಋತ್ಯ ಕೊಲಂಬಿಯಾದಲ್ಲಿ ಶನಿವಾರ ನಡೆದಿದೆ. ಈ ಬಸ್ ಕೊಲಂಬಿಯಾದಿಂದ ಟುಮಾಕೊ ನಗರಕ್ಕೆ ತೆರಳುತ್ತಿತ್ತು. ಈ ವೇಳೆ ಇಲ್ಲಿನ ಪಾಸ್ತೋ ಮತ್ತು ಪೊಪಯಾನ್ ನಗರಗಳ ನಡುವಿನ ಪ್ಯಾನ್-ಅಮೆರಿಕನ್ ಹೆದ್ದಾರಿಯಲ್ಲಿ ಬಸ್ ದುರಂತ ಸಂಭವಿಸಿದೆ.
ಮಂಜು ಕವಿದ ವಾತಾವರಣದಲ್ಲಿ ಬಸ್ ಪ್ರಯಾಣಿಸುತ್ತಿದ್ದ ವೇಳೆ ರಸ್ತೆಯ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಬಸ್ ಉರುಳಿಬಿದ್ದಿದೆ. ಬಸ್ನಲ್ಲಿನ ತಾಂತ್ರಿಕ ದೋಷದಿಂದಾಗಿ ಬ್ರೇಕ್ ಫೇಲ್ ಆಗಿ ದುರಂತ ಸಂಭವಿಸಿದೆ.