ಫೀನಿಕ್ಸ್, ಅಮೆರಿಕ: ಅರೆ - ಸ್ವಯಂಚಾಲಿತ ರೈಫಲ್‌ನೊಂದಿಗೆ ಶಸ್ತ್ರಸಜ್ಜಿತವಾದ ಮತ್ತು ಯುದ್ಧತಂತ್ರದ ಸಾಧನಗಳನ್ನು ಧರಿಸಿದ್ದ ವ್ಯಕ್ತಿಯೊಬ್ಬರು ಭಾನುವಾರ ರಾತ್ರಿ ನಗರದಲ್ಲಿ ದಾಳಿ ಮಾಡಿದ್ದರಿಂದ ಇಬ್ಬರು ಮೃತಪಟ್ಟಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಐವರು ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮೋಟೆಲ್‌ನಲ್ಲಿ ಗುಂಡು ಹಾರಿಸಿದ ಬಂದೂಕುದಾರಿ: ಪೊಲೀಸರು ಆರೋಪಿಯನ್ನು ಗುಂಡಿಕ್ಕಿ ಹೊಡೆದುರುಳಿಸಿದ್ದು, ಆರೋಪಿಯನ್ನು 24 ವರ್ಷದ ಇಸೈಯಾ ಸ್ಟೀವನ್ ವಿಲಿಯಮ್ಸ್ ಎಂದು ಗುರುತಿಸಲಾಗಿದೆ. ವಿಲಿಯಮ್ಸ್ ಎಲ್ಲಿ ವಾಸಿಸುತ್ತಿದ್ದರು ಮತ್ತು ಅವರು ಕ್ರಿಮಿನಲ್ ದಾಖಲೆಗಳ ಬಗ್ಗೆ ಫೀನಿಕ್ಸ್ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿ ವಿಲಿಯಮ್ಸ್ ತನ್ನ ಮುಂಭಾಗ ಮತ್ತು ಹಿಂಭಾಗದಲ್ಲಿ ಸ್ಟೀಲ್ ಪ್ಲೇಟ್‌ಗಳನ್ನು ಹೊಂದಿರುವ ಬ್ಯಾಲಿಸ್ಟಿಕ್ ವೆಸ್ಟ್, ಬ್ಯಾಲಿಸ್ಟಿಕ್ ಹೆಲ್ಮೆಟ್, ಗ್ಯಾಸ್ ಮಾಸ್ಕ್ ಮತ್ತು ಮೊಣಕಾಲು ಪ್ಯಾಡ್‌ಗಳನ್ನು ಧರಿಸಿದ್ದನು. ಇದರ ಜೊತೆಗೆ ಅರೆ - ಸ್ವಯಂಚಾಲಿತ ರೈಫಲ್ ಮತ್ತು ಹಲವಾರು ಶಸ್ತ್ರಾಸ್ತ್ರ ಸಾಧನಗಳನ್ನು ಹೊಂದಿದ್ದನು. ಭಾನುವಾರ ರಾತ್ರಿ 8:30 ರ ಸುಮಾರಿಗೆ ನಗರದ ಉತ್ತರ-ಮಧ್ಯ ಭಾಗದಲ್ಲಿ ಗುಂಡು ಹಾರಿಸಿದ್ದನು.
ಗುಂಡಿನ ದಾಳಿಯಲ್ಲಿ ಸ್ಥಳದಲ್ಲೇ ಪ್ರಾಣಬಿಟ್ಟ ಇಬ್ಬರು:ಆರೋಪಿ ಮೋಟೆಲ್‌ನಲ್ಲಿ ಕೊಠಡಿ ತೊರೆದು ಗುಂಡಿನ ದಾಳಿ ನಡೆಸಿದ್ದಾನೆ. ನಂತರ ಪಾರ್ಕಿಂಗ್ ಸ್ಥಳಕ್ಕೆ ನುಗ್ಗಿದ ಆರೋಪಿ ಕಾರಿನ ಮೇಲೆ ಗುಂಡು ಹಾರಿಸಿದ್ದಾನೆ. ಕಾರಿನೊಳಗಿದ್ದ ವ್ಯಕ್ತಿ ಮತ್ತು ಮಹಿಳೆ ಗುಂಡೇಟಿನ ಗಾಯಗಳಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆರೋಪಿ ವಿಲಿಯಮ್ಸ್ ಮೊಲೊಟೊವ್ ಕಾಕ್ಟೈಲ್ ಅನ್ನು ರೆಸ್ಟೋರೆಂಟ್ ಕಿಟಕಿಯ ಮೇಲೆ ಎಸೆದನು. ಆದರೆ ಅದು ಸ್ಫೋಟಿಸಲಿಲ್ಲ. ಅಷ್ಟೋತ್ತಿಗಾಗಲೇ ಪೊಲೀಸರಿಗೆ ಮಾಹಿತಿ ತಿಳಿದಿದ್ದು, ಸ್ಥಳಕ್ಕೆ ದೌಡಾಯಿಸಿದ್ದರು.