ಕೋಗಿ(ನೈಜೀರಿಯಾ):ಗುರುವಾರ ರಾತ್ರಿ ಓಫು ಕೌನ್ಸಿಲ್ ಪ್ರದೇಶದ ಪ್ರಮುಖ ರಸ್ತೆಯೊಂದರಲ್ಲಿ ಪೆಟ್ರೋಲ್ ಟ್ಯಾಂಕರ್ನ ಬ್ರೇಕ್ ಫೇಲ್ ಆಗಿದ್ದರಿಂದ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಪೆಟ್ರೋಲ್ ಟ್ಯಾಂಕರ್ನಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ವಿಲಿಯಂ ಓವಿ ಆಯಾ, ಗುರುವಾರ ರಾತ್ರಿ ಪೆಟ್ರೋಲ್ ಟ್ಯಾಂಕರ್ ವಾಹನದ ಬ್ರೇಕ್ ಫೇಲ್ ಆಗಿದ್ದು, ಎದುರಿಗಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪೆಟ್ರೋಲ್ ಟ್ಯಾಂಕರ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಅದು ಸ್ಫೋಟಗೊಂಡಿತು. ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಇತರ ವಾಹನಗಳಿಗೆ ಬೆಂಕಿ ತಗುಲಿದೆ. ಪರಿಣಾಮ 12 ಜನ ಸುಟ್ಟು ಭಸ್ಮವಾಗಿದ್ದು, 6ಕ್ಕೂ ಹೆಚ್ಚು ಮಂದಿ ಗಂಭೀರ ಸ್ವರೂಪವಾಗಿ ಗಾಯಗೊಂಡಿದ್ದಾರೆ.