ಕೀವ್, ಉಕ್ರೇನ್ :ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ಫೆಬ್ರವರಿ 24ರಂದು ಯುದ್ಧ ಪ್ರಾರಂಭವಾದಾಗಿನಿಂದಲೂ ವಿವಿಧ ದೇಶಗಳಿಗೆ ಸೇರಿದ 12 ಮಂದಿ ಪತ್ರಕರ್ತರು ರಷ್ಯಾದ ದಾಳಿಯಲ್ಲಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಪತ್ರಕರ್ತರು ಗಾಯಗೊಂಡಿದ್ದಾರೆ. ಈ ಕುರಿತು ಉಕ್ರೇನ್‌ನ ಪ್ರಾಸಿಕ್ಯೂಟರ್ ಜನರಲ್ ಐರಿನಾ ವೆನೆಡಿಕ್ಟೋವಾ ಫೇಸ್ಬುಕ್ ಪೋಸ್ಟ್ನಲ್ಲಿ ಮಾಹಿತಿ ನೀಡಿದ್ದಾರೆ ಎಂದು ಉಕಯಿನ್ಸ್ಕಾ ಪ್ರಾವ್ಡಾ ವರದಿ ಮಾಡಿದೆ.
ಪ್ರಾಸಿಕ್ಯೂಟರ್ ಜನರಲ್ ಪ್ರಕಾರ, ರಷ್ಯನ್ ಪಡೆಗಳು ಕನಿಷ್ಠ 56 ಮಾಧ್ಯಮಗಳ ಪ್ರತಿನಿಧಿಗಳ ವಿರುದ್ಧ ಅಪರಾಧಗಳನ್ನು ಮಾಡಿದ್ದಾರೆ ಎಂದು ಯೂನಿಫೈಡ್ ರಿಜಿಸ್ಟರ್ ಆಫ್ ಪ್ರಿ-ಟ್ರಯಲ್ ಇನ್ವೆಸ್ಟಿಗೇಷನ್ಸ್ ಹೇಳಿದೆ. 56 ಮಾಧ್ಯಮ ಪ್ರತಿನಿಧಿಗಳು 15 ದೇಶಗಳಿಗೆ ಸಂಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. 15 ಮಂದಿಯಲ್ಲಿ ನಾಲ್ವರು ಬ್ರಿಟನ್ನವರು ಮತ್ತು ಅಮೆರಿಕ, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಯುನೈಟೆಡ್ ಅರಬ್ ಎಮಿರೇಟ್ನಿಂದ ತಲಾ ಇಬ್ಬರು, ಸ್ವಿಟ್ಜರ್ಲೆಂಡ್ನಿಂದ ಬಂದ ಓರ್ವ ಪತ್ರಕರ್ತ ಸೇರಿದ್ದಾನೆ ಎಂದು ತಿಳಿದು ಬಂದಿದೆ.