ಮಾಸ್ಕೋ(ರಷ್ಯಾ):ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾ ತನ್ನ ಸೇನಾ ಬಲವನ್ನು ಹೆಚ್ಚಿಸಲು ಯುವಕರನ್ನು ತುರ್ತಾಗಿ ಸೇನೆಗೆ ಸೇರಿಸಿಕೊಂಡು ಸಮರಾಭ್ಯಾಸ ಮಾಡಿಸುತ್ತಿದೆ. ಅಭ್ಯಾಸನಿರತರಾಗಿದ್ದ ವೇಳೆ ಇಬ್ಬರು ಸ್ವಯಂಸೇವಕ ಸೈನಿಕರು ಸೇನಾಪಡೆಯ ಮೇಲೆಯೇ ಮಾಡಿದ ಗುಂಡಿನ ದಾಳಿಗೆ 11 ಸೈನಿಕರು ಮೃತಪಟ್ಟು, 15 ಮಂದಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.
ಉಕ್ರೇನ್ ಗಡಿಯಲ್ಲಿರುವ ನೈಋತ್ಯ ರಷ್ಯಾದ ಬೆಲ್ಗೊರೊಡ್ ಪ್ರದೇಶದ ಮಿಲಿಟರಿ ಫೈರಿಂಗ್ ರೇಂಜ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ಯುದ್ಧಕ್ಕಾಗಿ ರಷ್ಯಾ ಯುವಕರನ್ನು ಸೇನೆಗೆ ಎಗ್ಗಿಲ್ಲದೇ ನೇಮಕಾತಿ ಮಾಡಿಕೊಳ್ಳುತ್ತಿದೆ. ಬಳಿಕ ಅವರಿಗೆ ತರಬೇತಿ ಕೂಡ ನೀಡುತ್ತಿದೆ. ಉಕ್ರೇನ್ ಗಡಿಯಲ್ಲಿರುವ ಬೆಲ್ಗೊರೊಡ್ ಪ್ರದೇಶದ ಮಿಲಿಟರಿ ಫೈರಿಂಗ್ ರೇಂಜ್‌ನಲ್ಲಿ ಶನಿವಾರ ಯುವ ಯೋಧರಿಗೆ ತರಬೇತಿ ನೀಡುತ್ತಿರುವಾಗ ಈ ಭಯೋತ್ಪಾದಕ ದಾಳಿ ನಡೆದಿದೆ.