ಹೈದರಾಬಾದ್: ಇಂದಿನ ಡಿಜಿಟಲ್ ಯುಗದಲ್ಲಿ ಜಗತ್ತು ದಿನದಿಂದ ದಿನಕ್ಕೆ ಬಹಳ ವೇಗವಾಗಿ ಬದಲಾಗುತ್ತಿದೆ. ಜಗತ್ತೇ ಒಂದು ಚಿಕ್ಕ ಹಳ್ಳಿಯಾಗಿರುವ ಇಂದಿನ ಸಮಯದಲ್ಲಿ ಪ್ರತಿದಿನವೂ ಹೊಸ ಶಬ್ದಗಳು ಬಳಕೆಗೆ ಬರುತ್ತಿವೆ. ಅದರಂತೆ, ವಿಶ್ವಾದ್ಯಂತ ತಂತ್ರಜ್ಞಾನದಲ್ಲಿ ಬದಲಾವಣೆಗಳಾದಂತೆ ಪ್ರತಿ ವರ್ಷವೂ ಆಕ್ಸ್ಫರ್ಡ್ ಡಿಕ್ಷನರಿಗೆ ಹೊಸ ಶಬ್ದಗಳನ್ನು ಸೇರಿಸಲಾಗುತ್ತಿದೆ. ಹಾಗಾದರೆ 2022 ರಲ್ಲಿ ಟ್ರೆಂಡಿಂಗ್ ಆಗಿರುವ ಹೊಸ ಶಬ್ದಗಳು ಯಾವುವೆಂದು ತಿಳಿಯೋಣ ಬನ್ನಿ..
ನೋಮೋಫೋಬಿಯಾ (Nomophobia): ಮೊಬೈಲ್ ಫೋನ್ ಇಲ್ಲದೇ ಬದುಕಲು ಸಾಧ್ಯವಿಲ್ಲ ಎಂಬ ಭಯ
ಶೇರಂಟ್ (SHARENT): ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಮಕ್ಕಳೊಂದಿಗೆ ನಿಯಮಿತವಾಗಿ ಮಾಹಿತಿಯನ್ನು ಹಂಚಿಕೊಳ್ಳುವ ಪೋಷಕರನ್ನು ಶೇರರ್ ಎಂದು ಕರೆಯಲಾಗುತ್ತದೆ. ಶೇರರ್ ಮತ್ತು ಪೋಷಕ ಸೇರಿದರೆ ಶೇರಂಟ್ ಆಗುತ್ತಾರೆ.
ಫಿನ್‌ಫ್ಲುಯೆನ್ಸರ್ (FINFLUENCER): ಹಣಕಾಸು ಸಂಬಂಧಿತ ವಿಷಯಗಳ ಮೇಲೆ ಪ್ರಭಾವ ಬೀರುವಂಥವನ್ನು ಫಿನ್‌ಫ್ಲುಯೆನ್ಸರ್ ಎಂದು ಕರೆಯುತ್ತಾರೆ.
ಫಿಟ್‌ಸ್ಪಿರೇಶನ್ (FITSPIRATION): ಆರೋಗ್ಯವನ್ನು ಸುಧಾರಿಸುವ ಬಗ್ಗೆ ಅಥವಾ ಫಿಟ್ನೆಸ್ ಬಗ್ಗೆ ಅಥವಾ ಅದರ ಬಗ್ಗೆ ಕಲಿಯುವ ವ್ಯಕ್ತಿ ಅಥವಾ ವಸ್ತುವಿನ ಕುರಿತು ಹೇಳುವಾಗ ಫಿಟ್‌ಸ್ಪಿರೇಷನ್ ಎಂಬ ಪದವನ್ನು ಬಳಸಲಾಗುತ್ತದೆ. ಫಿಟ್ನೆಸ್ ಮತ್ತು ಇನ್ಸಪಿರೇಶನ್ ಪದಗಳಿಂದ ಫಿಟ್‌ಸ್ಪಿರೇಷನ್ ರೂಪುಗೊಂಡಿದೆ.
ಸ್ಟಾನ್ (STAN): ಸೆಲೆಬ್ರಿಟಿಗಳ ಬಗ್ಗೆ ಭಾವೋದ್ರಿಕ್ತನಾಗಿರುವ ವ್ಯಕ್ತಿಯನ್ನು ಸ್ಟಾನ್ ಎನ್ನಲಾಗುತ್ತದೆ.