ಕರ್ನಾಟಕ

karnataka

ETV Bharat / international

ಭಾರಿ ಗುಂಡಿನ ಚಕಮಕಿ: 10 ಮಂದಿ ಬಂದೂಕುಧಾರಿಗಳನ್ನ ಕೊಂದ ಪೊಲೀಸರು - central Mexico shootout

ಮೆಕ್ಸಿಕೋ ನಗರದ ನೈರುತ್ಯಕ್ಕೆ 130 ಕಿ.ಮೀ ದೂರದಲ್ಲಿರುವ ಟೆಕ್ಸ್‌ಕಾಲ್ಟಿಟ್ಲಾನ್ ಪಟ್ಟಣದಲ್ಲಿ ಬಂದೂಕುಧಾರಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಪೊಲೀಸರು ಸಹ ಗುಂಡಿನ ದಾಳಿ ನಡೆಸಿದ್ದು, 10 ಮಂದಿ ಬಂದೂಕುಧಾರಿಗಳು ಸಾವನ್ನಪ್ಪಿದ್ದಾರೆ.

ಗುಂಡಿನ ಚಕಮಕಿ
ಗುಂಡಿನ ಚಕಮಕಿ

By

Published : Jun 15, 2022, 9:59 AM IST

ಮೆಕ್ಸಿಕೋ: ನಿನ್ನೆ ಮಧ್ಯ ಮೆಕ್ಸಿಕೋದಲ್ಲಿ ಪೊಲೀಸರು ಮತ್ತು ಬಂದೂಕುಧಾರಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 10 ಮಂದಿ ಶಂಕಿತರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಮೆಕ್ಸಿಕೋ ನಗರದ ನೈರುತ್ಯಕ್ಕೆ 130 ಕಿ.ಮೀ ದೂರದಲ್ಲಿರುವ ಟೆಕ್ಸ್‌ಕಾಲ್ಟಿಟ್ಲಾನ್ ಪಟ್ಟಣದಲ್ಲಿ ಬಂದೂಕುಧಾರಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಪೊಲೀಸರು ಸಹ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ 20 ರೈಫಲ್‌ಗಳು, ಪಿಸ್ತೂಲ್‌ಗಳು ಮತ್ತು ಮಿಲಿಟರಿ ಶೈಲಿಯ ಸಮವಸ್ತ್ರಗಳು ಸೇರಿದಂತೆ ಬುಲೆಟ್ ಪ್ರೂಫ್ ನಡುವಂಗಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಡ್ರಗ್ಸ್ ಗ್ಯಾಂಗ್‌ಗಳಿಂದ ಆಗಾಗ ಹತ್ಯೆಗಳು ಮತ್ತು ಸುಲಿಗೆಗಳು ನಡೆಯುತ್ತಿರುತ್ತವೆ.

ಇದನ್ನೂ ಓದಿ:ಕುಡಿದ ಅಮಲಿನಲ್ಲಿ ಛಾವಣಿ ಮೇಲಿಂದ ಬಿದ್ದು ಸಾವನ್ನಪ್ಪಿದ : ವಿಡಿಯೋ..

ABOUT THE AUTHOR

...view details