ವಾಷಿಂಗ್ಟನ್: ಇರಾಕ್ನಲ್ಲಿರುವ ಇರಾನ್ ಪರ ಗುಂಪುಗಳ ಮೇಲೆ ಪ್ರತೀಕಾರದ ದಾಳಿಯನ್ನ ನಡೆಸಿದೆ.
ಇರಾಕ್ನಲ್ಲಿ ಅಮೆರಿಕದ ಪ್ರತೀಕಾರದ ದಾಳಿ.. ಮತ್ತೆ ಆರಂಭವಾಗುತ್ತಾ ಜಟಾಪಟಿ - US retaliatory strikes underway in Iraq
ಇರಾಕ್ನಲ್ಲಿರುವ ಇರಾನ್ ಪರ ಗುಂಪುಗಳ ಮೇಲೆ ಅಮೆರಿಕ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿದೆ.

ಇರಾನ್ ಪರ ಇರುವ ಗುಂಪುಗಳಿಂದ ಮಾಡಲಾದ ರಾಕೆಟ್ ದಾಳಿಯಲ್ಲಿ ಇಬ್ಬರು ಅಮೆರಿಕನ್ನರು ಹಾಗೂ ಒಬ್ಬ ಬ್ರಿಟನ್ ಪ್ರಜೆ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಇರಾಕ್ನಲ್ಲಿ ಅಮೆರಿಕ ಈ ದಾಳಿ ನಡೆಸಿದೆ. ಇರಾನ್ ಪರ ಗುಂಪುಗಳ ಮೇಲೆ ಅಮೆರಿಕ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿದ್ದು, ಎಲ್ಲೆಲ್ಲಿ ದಾಳಿ ಮುಂದುವರೆಸಿದೆ ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ.
ಮೂಲಗಳ ಪ್ರಕಾರ ಹಶೀದ್ ಅಲ್ ಶಾಬಿ ಸಂಘಟನೆಯ ಸ್ಥಳಗಳನ್ನ ಗುರಿಯಾಗಿಸಿಕೊಂಡು ಅಮೆರಿಕ ಸೇನೆ ಇರಾಕ್ನಾದ್ಯಂತ ಏರ್ ಸ್ಟ್ರೈಕ್ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತಾಜಿ ವಾಯು ನೆಲೆ ಮೇಲೆ ಇರಾನ್ ಪರ ಗುಂಪುಗಳು ರಾಕೆಟ್ ದಾಳಿ ನಡೆಸಿದ್ದವು. ಈ ದಾಳಿ ವೇಳೆ ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದರು. ಈ ದಾಳಿ ಬಳಿಕ ವಾರ್ನ್ ಕೊಟ್ಟಿದ್ದ ಅಮೆರಿಕ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ನಮ್ಮ ಬಳಿ ಎಲ್ಲ ಆಪ್ಶನ್ಗಳಿವೆ ಎಂದಿದ್ದರು.